ವೈರಲ್ ವಿಡಿಯೋ: ಪ್ರಾಣಿಗಳ ಜೀವ ಉಳಿಸಿದ ಪೊಲೀಸ್ ಪೇದೆಗಳು

ಹೈದರಾಬಾದ್, ಏಪ್ರಿಲ್ 23 : ಪೊಲೀಸರ ಕೆಲಸ ಎಂದರೆ ಹಾಗೆಯೇ. ತುರ್ತು ಸಂದರ್ಭದಲ್ಲಿ ಸಮಯವನ್ನು ನೋಡದೆ ಅವರು ಕೆಲಸ ಮಾಡಬೇಕಾಗುತ್ತದೆ. ಹೀಗೆ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಮೂಕ ಪ್ರಾಣಿಗಳ ಜೀವ ಉಳಿದಿದೆ.

ತೆಲಂಗಾಣದ ಇಬ್ಬರು ಪೊಲೀಸ್ ಪೇದೆಗಳ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಠಾಣೆಗೆ ವಾಪಸ್ ಹೊರಟಿದ್ದ ಇಬ್ಬರು ಪೇದೆಗಳು ಮಾಡಿದ ಕೆಲಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರವೀಂದ್ರ ರೆಡ್ಡಿ, ಯಾದಗಿರಿ ಎಂಬ ಇಬ್ಬರು ಪೇದೆಗಳು ರಾಮಣ್ಣ ಪೇಟ್ ಪೊಲೀಸ್ ಠಾಣೆಯ ಸಿಬ್ಬಂದಿಗಳು. ಲಾಕ್ ಡೌನ್ ಸಂದರ್ಭದಲ್ಲಿ ಇಬ್ಬರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ತಮ್ಮ ಡ್ಯೂಟಿ ಮುಗಿಸಿ ಇವರು ಠಾಣೆಗೆ ವಾಪಸ್ ಹೊರಟಿದ್ದರು.

Two Police Constables Saved Cattle From Fire Accident

ದಾರಿಯಲ್ಲಿ ಅವರಿಗೆ ಕೊಟ್ಟಿಗೆಗೆ ಬೆಂಕಿ ಬಿದಿದ್ದು ಕಂಡಿದೆ. ಹಸು ಮತ್ತು ಎಮ್ಮೆಗಳನ್ನು ಕಟ್ಟಿ ಹಾಕಿದ್ದ ಕೊಟ್ಟಿಗೆ ಹೊತ್ತಿ ಉರಿಯುತ್ತಿತ್ತು. ತಮ್ಮ ಜೀವ ಲೆಕ್ಕಿಸದೇ ಕೊಟ್ಟಿಗೆಗೆ ನುಗ್ಗಿದ ಇಬ್ಬರು ಅವುಗಳ ಹಗ್ಗವನ್ನು ಬಿಚ್ಚಿದರು.

ಹಸು, ಎಮ್ಮೆ ಬೆಂಕಿಯ ಕೆನ್ನಾಗಲಿಗೆಗೆ ಸಿಲುಕುವುದು ಬೇಡ ಎಂದು ಅವುಗಳ ಹಗ್ಗ ಬಿಚ್ಚಿ ಓಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಪೇದೆಗಳ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+