• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಚಮಿ ತೀರ್ಥದಲ್ಲಿ ಮಿಂದೆದ್ದ ಲಕ್ಷಾಂತರ ಮಂದಿ ಭಕ್ತರು

By Mahesh
|

ತಿರುಮಲ, ನ.28: ಕಾರ್ತಿಕ ಮಾಸದಲ್ಲಿ ನಡೆಯುವ ತಿರುಚಾನೂರು ಅಲಮೇಲು ಮಂಗಮ್ಮನ ಉತ್ಸವದಲ್ಲಿ ಪಂಚಮಿ ತೀರ್ಥ ಸಂಭ್ರಮ ಮನೆ ಮಾಡಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಚಕ್ರತೀರ್ಥ ಸ್ನಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗಿದ್ದಾರೆ.

ಕಾರ್ತಿಕ ಮಾಸದಲ್ಲಿ ಚಿತ್ತೂರು ಜಿಲ್ಲೆ ತಿರುಪತಿ ತಾಲೂಕಿನ ತಿರುಚಾನೂರಿನ ಅಲಮುಲು ಮಂಗಮ್ಮ(ಪದ್ಮಾವತಿ) ದೇವರ ಬ್ರಹ್ಮೋತ್ಸವ ನಡೆಯುತ್ತದೆ. ಅಲಮೇಲು ಮಂಗಮ್ಮ ಅಥವಾ ಪದ್ಮಾವತಿ ದೇವಿಗೆ ತಿರುಮಲ ತಿರುಪತಿ ದೇವಸ್ಥಾನವತಿಯಿಂದ ಅರಿಶಿನ, ಕುಂಕುಮ, ಬಳೆ ಬಿಚ್ಚೋಲೆ, ರೇಷ್ಮೆ ಸೀರೆ, ವಿವಿಧ ಆಭರಣಗಳು ಅರ್ಪಿತವಾಗಿದೆ.[ಪದ್ಮಾವತಿ ಕಾರ್ತಿಕ ಬ್ರಹ್ಮೋತ್ಸವ]

ತಿರುಚಾನೂರು ಅಲಮೇಲು ಮಂಗಮ್ಮ ದೇವತೆ ಪುಷ್ಕರಣಿ ಎಂಬ ಕೊಳದಲ್ಲಿ ಜನಿಸಿದಳು ಎಂದು ನಂಬಲಾಗುತ್ತದೆ. ಹೀಗಾಗಿ ಅಂತಿಮ ದಿನ ಚಕ್ರಸ್ನಾನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಈ ದೇವಾಲಯ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಧಾರ್ಮಿಕ ನಂಬಿಕೆ ಉಳ್ಳ ಪ್ರವಾಸಿಗರಿಗೆ ಇದು ಪ್ರಶಸ್ತ ತಾಣ. [ಮೋಹಿನಿ ರೂಪದಲ್ಲಿ ತಿಮ್ಮಪ್ಪ]

ಬ್ರಹ್ಮೋತ್ಸವದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ನಂತರ ವಾರ್ಷಿಕ ಕಾರ್ಯಕ್ರಮ ಸಂಪನ್ನವಾಗಿದೆ. ಚಕ್ರತೀರ್ಥ ಕಾರ್ಯಕ್ರಮದ ಚಿತ್ರಗಳು ಮುಂದಿವೆ ನೋಡಿ..

ತಿರುಪತಿಯಿಂದ ತಿರುಚಾನೂರು ದೇಗುಲಕ್ಕೆ

ತಿರುಪತಿಯಿಂದ ತಿರುಚಾನೂರು ದೇಗುಲಕ್ಕೆ

ತಿರುಪತಿಯಿಂದ ತಿರುಚಾನೂರು ದೇಗುಲಕ್ಕೆ ವಿಶೇಷ ಪೂಜಾ ಸಾಮಾಗ್ರಿಗಳನ್ನು ತರುತ್ತಿರುವ ಟಿಟಿಡಿ ಅಧಿಕಾರಿಗಳು

ಪಂಚಮಿ ತೀರ್ಥಸ್ನಾನದಲ್ಲಿ ಪದ್ಮಾವತಿ

ಪಂಚಮಿ ತೀರ್ಥಸ್ನಾನದಲ್ಲಿ ಪದ್ಮಾವತಿ

ಪಂಚಮಿ ತೀರ್ಥಸ್ನಾನದಲ್ಲಿ ಪದ್ಮಾವತಿ ದೇವಿ ಹಾಗೂ ಚಕ್ರವನ್ನುಕಾಣಬಹುದು.

ತೀರ್ಥಸ್ನಾನದ ನಂತರ ವೇದಪಠಣ

ತೀರ್ಥಸ್ನಾನದ ನಂತರ ವೇದಪಠಣ

ತೀರ್ಥಸ್ನಾನದ ನಂತರ ಋತ್ವಿಕರಿಂದ ವೇದಪಠಣ ಕಾರ್ಯಕ್ರಮ ನಡೆಯಿತು.

ಅಲಮೇಲು ಮಂಗಮ್ಮ ದೇವರಿಗೆ ಚಕ್ರಸ್ನಾನ

ಅಲಮೇಲು ಮಂಗಮ್ಮ ದೇವರಿಗೆ ಚಕ್ರಸ್ನಾನ

ಕಾರ್ತಿಕ ಮಾಸದಲ್ಲಿ ಚಿತ್ತೂರು ಜಿಲ್ಲೆ ತಿರುಪತಿ ತಾಲೂಕಿನ ತಿರುಚಾನೂರಿನ ಅಲಮೇಲು ಮಂಗಮ್ಮ ದೇವರಿಗೆ ಚಕ್ರಸ್ನಾನ ನೆರವೇರಿಸಲಾಯಿತು.

ಅರಿಶಿನ ಕುಂಕುಮ ಶೋಭಿತೆ ಶ್ರೀ ಮಾತೆ

ಅರಿಶಿನ ಕುಂಕುಮ ಶೋಭಿತೆ ಶ್ರೀ ಮಾತೆ

ಅರಿಶಿನ ಕುಂಕುಮ ಶೋಭಿತೆ ಶ್ರೀ ಮಾತೆ ತಿರುಚಾನೂರಿನ ಅಲಮೇಲು ಮಂಗಮ್ಮ

ತೀರ್ಥ ಸ್ನಾನದ ವಿಧಿ ವಿಧಾನಗಳು

ತೀರ್ಥ ಸ್ನಾನದ ವಿಧಿ ವಿಧಾನಗಳು

ತೀರ್ಥ ಸ್ನಾನದ ವಿಧಿ ವಿಧಾನಗಳ ನಂತರ ವಿವಿಧ ರೀತಿಯ ಪುಷ್ಪಗಳನ್ನು ಅರ್ಪಿಸಿ ದೇವಿಗೆ ಅಲಂಕಾರ ಮಾಡಲಾಯಿತು.

ರಾಜ್ಯಪಾಲರಿಂದ ನಮನ

ರಾಜ್ಯಪಾಲರಿಂದ ನಮನ

ಆಂಧ್ರಪ್ರದೇಶದ ರಾಜ್ಯಪಾಲ ನರಸಿಂಹನ್ ಅವರು ದಂಪತಿ ಸಮೇತ ಆಗಮಿಸಿ ಬ್ರಹ್ಮೋತ್ಸವ ಅಂತಿಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 ಆಳ್ವಾರ್ ಗಳಿಂದ ಮೊದಲಿಗೆ ತೀರ್ಥಸ್ನಾನ

ಆಳ್ವಾರ್ ಗಳಿಂದ ಮೊದಲಿಗೆ ತೀರ್ಥಸ್ನಾನ

ಆಳ್ವಾರ್ ಗಳಿಂದ ಮೊದಲಿಗೆ ತೀರ್ಥಸ್ನಾನ ಮುಗಿದ ನಂತರ ಭಕ್ತಾದಿಗಳು ತೀರ್ಥಸ್ನಾನದಲ್ಲಿ ಪಾಲ್ಗೊಂಡರು.

ಪಂಚಮಿ ತೀರ್ಥಸ್ನಾನಕ್ಕೆ ಬಂದಿರುವ ಜನಸಾಗರ

ಪಂಚಮಿ ತೀರ್ಥಸ್ನಾನಕ್ಕೆ ಬಂದಿರುವ ಜನಸಾಗರ

ದೇಶದ ವಿವಿಧೆಡೆಯಿಂದ ಪಂಚಮಿ ತೀರ್ಥಸ್ನಾನಕ್ಕೆ ಬಂದಿರುವ ಜನಸಾಗರ

2 ಲಕ್ಷಕ್ಕೂ ಅಧಿಕ ಮಂದಿ ಚಕ್ರತೀರ್ಥ ಸ್ನಾನ

2 ಲಕ್ಷಕ್ಕೂ ಅಧಿಕ ಮಂದಿ ಚಕ್ರತೀರ್ಥ ಸ್ನಾನ

ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಚಕ್ರತೀರ್ಥ ಸ್ನಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾಗಿದ್ದಾರೆ.

ಕಾರ್ತಿಕ ಮಾಸದ ಬ್ರಹ್ಮೋತ್ಸವ ಸಂಪನ್ನ

ಕಾರ್ತಿಕ ಮಾಸದ ಬ್ರಹ್ಮೋತ್ಸವ ಸಂಪನ್ನ

ಕಾರ್ತಿಕ ಮಾಸದಲ್ಲಿ ನಡೆಯುವ ತಿರುಚಾನೂರು ಅಲಮೇಲು ಮಂಗಮ್ಮನ ಉತ್ಸವದಲ್ಲಿ ಪಂಚಮಿ ತೀರ್ಥ ಸಂಭ್ರಮ ಮನೆ ಮಾಡಿತ್ತು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The serene waters of the spacious, clean and tidy Padmasarovaram-the temple tank at Padmavati temple in Tiruchanoor turned into a sea of humanity on Thursday with about two lakh pilgrims from across the country visiting the shrine and taking holy bath on the occasion of Panchami Theertham.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more