ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಿಗೆ Tinted glass: ಜ್ಯೂ. ಎನ್‌ಟಿಆರ್ ನಂತರ ಅಲ್ಲು ಅರ್ಜುನ್ ಮೇಲೆ ಕೇಸ್

|
Google Oneindia Kannada News

ಹೈದರಾಬಾದ್, ಮಾರ್ಚ್ 27: ಐಷಾರಾಮಿ ಕಾರುಗಳಿಗೆ ನಿಷೇಧಿತ ಟಿಂಟೆಂಡ್ ಗ್ಲಾಸ್ ಹಾಕಿಸಿಕೊಂಡು ತಿರುಗಾಡುವ ಸೆಲೆಬ್ರಿಟಿಗಳಿಗೆ ಟ್ರಾಫಿಕ್ ಪೊಲೀಸರು ಚುರುಕು ಮುಟ್ಟಿಸಿದ್ದಾರೆ. ಕೆಲ ದಿನಗಳ ಹಿಂದೆ ಆರ್‌ಆರ್‌ಆರ್‌ ಚಿತ್ರದ ನಾಯಕ, ಯಂಗ್ ಟೈಗರ್ ಎಂದು ಕರೆಸಿಕೊಳ್ಳುವ ತಾರಕ್(ಜ್ಯೂನಿಯರ್ ಎನ್‌ಟಿಆರ್ ) ಅವರ ಕಾರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಹೈದರಾಬಾದ್ ಪೊಲೀಸರು ಟಿಂಟೆಂಡ್ ಗ್ಲಾಸ್ ತೆರವು ಕಾರ್ಯಾಚರಣೆ ಮುಂದುವರೆಸಿದ್ದು, ನಟ ಅಲ್ಲು ಅರ್ಜುನ್ ಹಾಗೂ ಕಲ್ಯಾಣ್ ರಾಮ್ ಅವರಿಗೆ ಸೇರಿದ ಕಾರಿನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಜ್ಯುಬಿಲಿ ಹಿಲ್ಸ್ ಬಳಿಯೇ ಇಬ್ಬರು ನಟರ ಕಾರಿಗೆ ಮೇಲೆ ಕೇಸ್ ಬಿದ್ದಿದೆ. ಮಾರ್ಚ್ 25ರಂದು ಜ್ಯೂ ಎನ್‌ಟಿಆರ್ ಅವರ್ ರೇಂಜ್ ರೋವರ್ ಕಾರಿನ ಟಿಂಟೆಂಡ್ ಗ್ಲಾಸ್ ತೆಗೆದು ಹಾಕಿದ್ದ ಪೊಲೀಸರು ತಮ್ಮ ಕಾರ್ಯಾಚರಣೆ ಮುಂದುವರೆಸಿ, ಸೆಲೆಬ್ರಿಟಿಗಳ ಕಾರುಗಳ ಬೆನ್ನು ಬಿದ್ದಿದ್ದಾರೆ.

ಅಲ್ಲು ಅರ್ಜುನ್, ರ‍್ಯಾಪಿಡೋಗೆ ನೋಟಿಸ್: ವೈಯಕ್ತಿಕ ದ್ವೇಷವಿಲ್ಲವೆಂದ ಸಜ್ಜನರ್ ಅಲ್ಲು ಅರ್ಜುನ್, ರ‍್ಯಾಪಿಡೋಗೆ ನೋಟಿಸ್: ವೈಯಕ್ತಿಕ ದ್ವೇಷವಿಲ್ಲವೆಂದ ಸಜ್ಜನರ್

ಈಗ, ಅಲ್ಲು ಅರ್ಜುನ್ ಅವರ ವಾಹನವು ನಿಯಮ ಮೀರಿ ಟಿಂಟೆಂಡ್ ಗ್ಲಾಸ್ ಹೊಂದಿರುವುದನ್ನು ಕಂಡು ಪೊಲೀಸರು ಪಕ್ಕಕ್ಕೆ ನಿಲ್ಲಿಸಿ, ದಂಡ ವಿಧಿಸಿದ್ದಾರೆ. ಕಾರನ್ನು ಪೊಲೀಸರು ಬುಕ್ ಮಾಡಿ, ಸ್ಥಳದಲ್ಲೇ 700 ರೂ. ದಂಡ ವಿಧಿಸಿದ್ದಾರೆ. ನಂತರ ಪೊಲೀಸರು ಗ್ಲಾಸ್ ಮೇಲಿನ ಕಪ್ಪು ಬಣ್ಣ ಪರದೆ ತೆಗೆದುಹಾಕಿದ್ದಾರೆ. ಅಲ್ಲದೆ, ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಟಾಲಿವುಡ್ ಸ್ಟಾರ್ ಕಲ್ಯಾಣ್ ರಾಮ್ ಅವರ ಕಾರನ್ನು ಸಹ ಬುಕ್ ಮಾಡಲಾಗಿದೆ.

Tinted Film on Car Window: Cases Against Tollywood Actors

ಟ್ರಾಫಿಕ್ ಪೊಲೀಸರು ಜುಬಿಲಿ ಹಿಲ್ಸ್ ರಸ್ತೆ ಸಂಖ್ಯೆ 36 ರಲ್ಲಿ ನಟರಿಗೆ ಸೇರಿದ ಎರಡು ರೇಂಜ್ ರೋವರ್ ಕಾರುಗಳನ್ನು ತಡೆದು, ಕಿಟಕಿಯಿಂದ ಕಪ್ಪು ಫಿಲ್ಮ್ ಅನ್ನು ತೆಗೆದುಹಾಕಿದರು.

ಮೋಟರು ವಾಹನ ಕಾಯಿದೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಚಾರ ಪೊಲೀಸರು ಚಲನ್ ಜಾರಿಗೊಳಿಸಿದ್ದಾರೆ. ಕೆಲ ಸೆಲೆಬ್ರಿಟಿಗಳ ಕಾರುಗಳನ್ನು ಎರಡು ವಿಭಿನ್ನ ಕಂಪನಿಗಳ ಹೆಸರಿನಲ್ಲಿ ನೋಂದಾಯಿಸಿರುವುದು ಕಂಡು ಬಂದಿದೆ.

Tinted Film on Car Window: Cases Against Tollywood Actors

ನಂಬರ್ ಪ್ಲೇಟ್, ಕಪ್ಪು ಫಿಲ್ಮ್ ಮತ್ತು ಹಾರ್ನ್ ಉಲ್ಲಂಘನೆಗಾಗಿ ವಿಶೇಷ ಅಭಿಯಾನದಲ್ಲಿ ಕಂಡು ಬಂದ ಪ್ರಕರಣಗಳಾಗಿದ್ದು, ಪೊಲೀಸರು ಒಟ್ಟಾರೆ ಸುಮಾರು 9,500 ಪ್ರಕರಣಗಳನ್ನು ದಾಖಲಿಸಿದ್ದಾರೆ. 2016ರಲ್ಲಿ ಇದೇ ರೀತಿ ವಿಶೇಷ ಅಭಿಯಾನ ನಡೆಸಿದಾಗಲೂ ಜ್ಯೂ ಎನ್ ಟಿಆರ್ ಹಾಗೂ ರವಿತೇಜ ಕಾರಿಗೆ ಮೇಲೆ ಪ್ರಕರಣ ದಾಖಲಾಗಿತ್ತು.

ಅನುಮತಿ ಪಡೆದ ವಿವಿಐಪಿಗಳಿಗೆ ಮಾತ್ರ ಬ್ಲಾಕ್ ಫಿಲ್ಮುಗಳನ್ನು ಬಳಸಲು ಅವಕಾಶ ಇರುತ್ತದೆ. ವಾಸ್ತವವಾಗಿ, ಕಾನೂನುರೀತ್ಯಾ ಟಿಂಟೆಂಡ್ ಗ್ಲಾಸ್ ಬಳಕೆ ಅಪರಾಧ. ನಿರ್ಭಯಾ ಪ್ರಕರಣದ ನಂತರ ಎಲ್ಲಾ ವಾಹನಗಳಿಗೂ ಅನ್ವಯವಾಗುವಂತೆ ಸುಪ್ರೀಂಕೋರ್ಟ್ ಈ ಕುರಿತಂತೆ ತೀರ್ಪು ನೀಡಿದೆ. ಜೆಡ್ ಪ್ಲಸ್ ಕೇಟಗಿರಿ ಭದ್ರತೆ ಇರುವ ಸೆಲಬ್ರಿಟಿಗಳು ಬೇರೆಯವರೂ ಕೂಡ ತಮ್ಮ ವಾಹನಗಳ ಮೇಲೆ ಬ್ಲಾಕ್ ಫಿಲ್ಮುಗಳನ್ನು ಬಳಸಬಾರದು. ಮೋಟಾರ್ ವಾಹನ ಕಾಯ್ದೆ ಮತ್ತು ನ್ಯಾಯಾಲಯದ ಪ್ರಕಾರ, ಹೊರಭಾಗದಿಂದ ನೋಡಿದರೆ ಕಾರು ಒಳಗೆ ಇರುವುದು ನಿಖರವಾಗಿ ಇರಬೇಕು.

Tinted Film on Car Window: Cases Against Tollywood Actors

ಮೋಟಾರು ವಾಹನಗಳ ಕಾಯಿದೆ 1989 ರ ಪ್ರಕಾರ, ಅನುಮತಿಸುವ ಮಿತಿ(ಎಷ್ಟು ಪ್ರಮಾಣದಲ್ಲಿ ಟಿಂಟ್ ಇರಬಹುದು)ಯನ್ನು ಮೀರಿ ಗಮನವನ್ನು ನಿರ್ಬಂಧಿಸಲಾಗಿದೆ ವಿಂಡ್ ಶೀಲ್ಡ್ಸ್ ಮತ್ತು ವಾಹನಗಳ ಕಿಂಡಿಗಳ ಮೇಲೆ ಟಿಂಟೆಡ್ ಗ್ಲಾಸ್ ಅಥವಾ ಸನ್ ಫಿಲ್ಮ್ ಅನ್ನು ಬಳಸುವುದನ್ನು ಸುಪ್ರೀಂ 2012 ರಲ್ಲಿ ನಿಷೇಧಿಸಲಾಗಿದೆ. ಈ ನಿಯಮದ ಪ್ರಕಾರ, ಪ್ರತಿ ಮೋಟಾರು ವಾಹನದ ಫ್ರಂಟ್ ವಿಂಡ್ ಸ್ಕ್ರೀನ್ ಮತ್ತು ಹಿಂಬದಿ ವಿಂಡೋಸ್ 70% Visual Transmission light ಅನ್ನು ಅನುಮತಿಸಬೇಕಾಗಿದೆ ಎಂದು ಕಾಯ್ದೆಯಲ್ಲಿದೆ.

Recommended Video

ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುತ್ತಿರುವ ಸ್ನೇಹಿತರು! | K L Rahul | Hardik Pandya | Oneindia Kannada

ಜೊತೆಗೆ ಸೈಡ್ ವಿಂಡೋಸ್ ಕೂಡ 50% Visual Transmission light ಅನ್ನು ಅನುಮತಿಸುವ ಫಿಲಂ ಅಥವಾ ಟಿಂಟೆಡ್ ಗ್ಲಾಸ್ ಅನ್ನು ಹೊಂದಿರಬೇಕು. ಅಂದರೆ, ಪೊಲೀಸರು ಕಾರನ್ನು ನಿಲ್ಲಿಸಿದಾಗ, ಅವರು ವಿಂಡ್ ಶೀಲ್ಡ್ ಮೂಲಕ ಲೈಟು ಹಾಕಿದಾಗ ಕಾರಿನಲ್ಲಿನ ಪರಿಸ್ಥಿತಿ ಅಥವಾ ಪರಿಸರವು ಕಡ್ಡಾಯವಾಗಿ ಹೊರಗೆ ಕಾಣುವಂತೆ ಇರಬೇಕೆಂದು ನಿಯಮದ ಮುಖ್ಯ ಉದ್ದೇಶ. ಎಲ್ಲಾ ನಾಲ್ಕು ಚಕ್ರಗಳ ವಾಹನಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆಯೇ ಕಾರಣದಿಂದ ಸುಪ್ರೀಂ ಕೋರ್ಟ್ ನಾಲ್ಕು ಚಕ್ರಗಳ ವಾಹನಗಳಿಗೆ ಗಾಢವಾದ ಕಪ್ಪುಬಣ್ಣದ ಟಿಂಟ್ ಬಳಕೆಯನ್ನು ನಿಷೇಧಿಸಲಾಗಿದೆ.

English summary
The traffic police booked cases for ‘black film’ violation and removed the tinted film from the windows of cars of Tollywood actors Allu Arjun and Kalyan Ram at Jubilee Hills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X