ವಿಡಿಯೋ; ಕಂದಮ್ಮನಿಗಾಗಿ ಕಣ್ಣೀರು ಹಾಕುತ್ತಿದ್ದ ತಂದೆಗೆ ಒದ್ದ ಪೊಲೀಸ್

ಹೈದರಾಬಾದ್, ಫೆಬ್ರವರಿ 27: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಪೊಲೀಸರಿಂದಲೇ ಅಮಾನವೀಯ ಘಟನೆಯೊಂದು ನಡೆದಿದೆ.

Recommended Video

      Telangana Police Inspector Kicks Man Grieving Over His daughter body | Telangana Police

      ಸಂಗಾರೆಡ್ಡಿ ಜಿಲ್ಲೆಯ ಪಥಾಂಚಿರು ಎಂಬ ಹಾಸ್ಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ತನ್ನ 16 ವರ್ಷದ ಮಗಳ ಶವದ ಮುಂದೆ ಬಿಕ್ಕಳಿಸಿ ಅಳುತ್ತಿರುವಾಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಮೃತ ಬಾಲಕಿಯ ತಂದೆಯನ್ನು ಕಾಲಿನಿಂದ ಒದ್ದು ಅಮಾನವೀಯವಾಗಿ ನಡೆದುಕೊಂಡ ಘಟನೆಯ ವಿಡಿಯೋ ತೆಲಂಗಾಣದ್ಯಾಂತ ವೈರಲ್ ಆಗಿದೆ.

      Telangana Police Inspector Kicks Man Over His Daughter Death

      ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ಆಂಬುಲೆನ್ಸಗೆ ಸಾಗಿಸಲು ಸ್ಟ್ರೆಚರ್‌ನಲ್ಲಿ ಸಾಗಿಸುವಾಗ ಸ್ಟ್ರಚರ್ ಬಳಿ ಬಂದ ಬಾಲಕಿ ತಂದೆ ಮಗಳನ್ನು ಅಪ್ಪಿಕೊಳ್ಳಲು ಮುಂದಾಗಿದ್ದ. ಈ ವೇಳೆ ಸಿಟ್ಟಿನಿಂದ ಬಾಲಕಿಯ ತಂದೆಯನ್ನು ಇನ್ಸ್‌ಪೆಕ್ಟರ್ ಕಾಲಿನಿಂದ ಜೋರಾಗಿ ಒದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ತೆಲಂಗಾಣ ಪೊಲೀಸ್ ವಿರುದ್ಧ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ.

      ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಪೊಲೀಸ್ ಇಲಾಖೆಯ ಮುಖ್ಯಸ್ಥರು ಅಮಾನವೀಯವಾಗಿ ನಡೆದುಕೊಂಡ ಇನ್ಸ್‌ಪೆಕ್ಟರ್‌ನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+