ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಗೆ ಡ್ರೋನ್ ಬಳಕೆ

|
Google Oneindia Kannada News

ಹೈದ್ರಾಬಾದ್, ಏಪ್ರಿಲ್ 30: ತೆಲಂಗಾಣದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಲಸಿಕೆ ನೀಡುವ ಉದ್ದೇಶದಿಂದ ಯಾವುದೇ ಕೊರತೆ ಎದುರಾಗದಂತೆ ನೋಡಿಕೊಳ್ಳಲು ವಿನೂತನ ಪ್ರಯೋಗಕ್ಕೆ ಸರ್ಕಾರವು ಮುಂದಾಗಿದೆ.

ರಾಜ್ಯದ ಗೋಚರಿತ ಪ್ರದೇಶದಲ್ಲಿ ಡ್ರೋನ್ ಮೂಲಕ ಕೊವಿಡ್-19 ಲಸಿಕೆಯನ್ನು ಪ್ರಯೋಗಿಕವಾಗಿ ವಿತರಿಸುವುದಕ್ಕೆ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶುಕ್ರವಾರ ಅನುಮತಿ ನೀಡಿದೆ.

ತೆಲಂಗಾಣದಲ್ಲಿ ಕೊರೊನಾವೈರಸ್ ರೋಗಿಗಳ ಸಾವಿಗೇನು ಕಾರಣ?ತೆಲಂಗಾಣದಲ್ಲಿ ಕೊರೊನಾವೈರಸ್ ರೋಗಿಗಳ ಸಾವಿಗೇನು ಕಾರಣ?

ಪ್ರಾಯೋಗಿಕ ಹಂತದಲ್ಲಿ ಡ್ರೋನ್ ಮೂಲಕ ವಿತರಣೆ ಮಾಡುವುದಕ್ಕೆ ಯಾವ ಲಸಿಕೆಯನ್ನು ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ವಿಮಾನಯಾನ ಸಚಿವಾಲಯವು ಯಾವುದೇ ಉಲ್ಲೇಖವನ್ನು ಮಾಡಿಲ್ಲ ಎಂದು ತಿಳಿದು ಬಂದಿದೆ.

Telangana Govt Taken Permission From Civil Aviation Ministry To Use Drones For Delivery Of Vaccine

ತೆಲಂಗಾಣದಲ್ಲಿ ಕೊರೊನಾವೈರಸ್:

ರಾಜ್ಯದಲ್ಲಿ ಒಂದೇ ದಿನ 7646 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 4,35,606ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 53 ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 2261ಕ್ಕೆ ಏರಿಕೆಯಾಗಿದೆ. ತೆಲಂಗಾಣದಲ್ಲಿ 72,727 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
Telangana Govt Taken Permission From Civil Aviation Ministry To Use Drones For Delivery Of Covid-19 Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X