ತೆಲಂಗಾಣದಲ್ಲಿ ಬಿಜೆಪಿ-ಓವೈಸಿಯ ಎಐಎಂಐಎಂ ಒಂದುಗೊಳಿಸುತ್ತಾರೆ ಕೆಸಿಆರ್!

ಹೈದರಾಬಾದ್, ಸೆಪ್ಟೆಂಬರ್ 11: ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ತೆಲಂಗಾಣದಲ್ಲಿ ಇತಿಹಾಸ ಮರುಕಳಿಸುವಂತೆ ಮಾಡುವ ಸಾಧ್ಯತೆ ನಿಚ್ಛಳವಾಗಿದೆ.

ಬಿಜೆಪಿ ಮತ್ತು ಬಿಜೆಪಿಯ ಕಡು ವಿರೋಧಿ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ (All India Majlis-e-Ittehad-ul Muslimeen) ಎರಡೂ ಪಕ್ಷಗಳು ಟೀಆರ್ ಎಸ್ ಗೆ ಬೆಂಬಲ ನೀಡಲಿವೆ.

1985 ರಲ್ಲಿ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ(ಟಿಡಿಪಿ) ಬಿಜೆಪಿ ಮತ್ತು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಅಚ್ಚರಿಯೆ ನಡೆ ಇಟ್ಟಿತ್ತು. ಇದೀಗ ತೆಲಂಗಾಣದಲ್ಲಿ ಬಿಜೆಪಿಯು ಟಿಆರ್ ಎಸ್ ನೊಂದಿಗೆ ಗುಪ್ತವಾಗಿ ಒಪ್ಪಂದ ಮಾಡಿಕೊಂಡಿದ್ದರೆ, ಎಐಎಂಐಎಂ ನೇರವಾಗಿಯೇ ತನ್ನ ಬೆಂಬಲ ಘೋಷಿಸಿದೆ.

ಎಐಎಂಐಎಂ ಪಕ್ಶಃ ಟಿಆರ್ ಎಸ್ ಜೊತೆ ಸೌಹಾರ್ದ ಸಂಬಂಧ ಹೊಂದಿದೆ ಎಂದು ಘೋಷಿಸಿರುವ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಬಿಜೆಪಿ ಜೊತೆಗಿನ ಒಪ್ಪಂದಗಳ ಬಗ್ಗೆ ನೇರವಾಗಿ ಹೇಳಿಲ್ಲ. ಆದರೆ ಕೇಂದ್ರ ಎನ್ ಡಿಎ ಗೆ ಟಿಆರ್ ಎಸ್ ಬೆಂಬಲವಿರುವುದು ಮತ್ತು ತೆಲಂಗಾಣದಲ್ಲಿ ಟಿಆರ್ ಎಸ್ ಗೆ ಬಿಜೆಪಿ ಬಾಹ್ಯ ಬೆಂಬಲನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

Telanagan: KCR will get BJP and AIMIM rival parties support

ಇತ್ತೀಚೆಗಷ್ಟೇ ತೆಲಂಗಾಣ ವಿಧಾನಸಭೆಯನ್ನು ಮುಖ್ಯಮಂತ್ರಿ ಕೆಸಿಆರ್ ವಿಸರ್ಜಿಸಿದ್ದು, ಈ ರಾಜ್ಯದಲ್ಲಿ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+