ಹೈದರಾಬಾದ್ ಮೆಟ್ರೋ ಉದ್ಘಾಟಿಸಿದ ಪ್ರಧಾನಿ ಮೋದಿ

ಹೈದರಾಬಾದ್, ನವೆಂಬರ್ 28: ಮುತ್ತಿನ ನಗರಿ ಹೈದರಾಬಾದ್ ದ ಮೆಟ್ರೋ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಮಿಯಾಪುರ್ ಮೆಟ್ರೋ ನಿಲ್ದಾಣದಲ್ಲಿ ಟೇಪ್ ಕಟ್ ಮಾಡುವ ಮೂಲಕ ಮೆಟ್ರೋ ಸೇವೆಗೆ ಪ್ರಧಾನಿ ಚಾಲನೆ ನೀಡಿದರು. ನಂತರ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್, ರಾಜ್ಯಪಾಲ ಇಎಸ್ಎನ್ ನರಸಿಂಹನ್ ಜತೆ ಹೊಸದಾಗಿ ಉದ್ಘಾಟನೆಯಾದ ಮೆಟ್ರೋ ರೈಲಿನಲ್ಲಿ ಕುಕುಟ್ಪಲ್ಲಿವರೆಗೆ ಪ್ರಯಾಣಿಸಿದರು.

ನಾಳೆಯಿಂದ ಅಂದರೆ ನವೆಂಬರ್ 29ರಿಂದ ಮೆಟ್ರೋ ರೈಲ್ವೇ ವಾಣಿಜ್ಯ ಸಂಚಾರ ಆರಂಭವಾಗಲಿದೆ.

30 ಕಿ.ಮೀ ಉದ್ದದ ಮೊದಲ ಹಂತದ ಮೆಟ್ರೋ ರೈಲು ಯೋಜನೆ ಮಿಯಾಪುರ್ ನಿಂದ ನಗೋಲೆ ತನಕ ಪೂರ್ಣಗೊಂಡಿದೆ. ಮಾರ್ಗ ಮಧ್ಯದಲ್ಲಿ 24 ನಿಲ್ದಾಣಗಳಿವೆ.

PM Narendra Modi inaugurates Hyderabad Metro

ಬೆಳಗ್ಗೆ 6 ರಿಂದ ರಾತ್ರಿ 10 ರ ತನಕ ಪ್ರಾರಂಭಿಕ ಹಂತದಲ್ಲಿ ರೈಲು ಸಂಚರಿಸಲಿದೆ. ಸಂಚಾರ ದಟ್ಟಣೆ ನೋಡಿಕೊಂಡು 5.30 ರಿಂದ 11 ಗಂಟೆ ತನಕ ರೈಲ್ವೇ ಸೇವೆಯ ಅವಧಿ ವಿಸ್ತರಿಸಲಾಗುತ್ತದೆ ಎಂದು ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ.ಟಿ ರಾಮರಾವ್ ತಿಳಿಸಿದ್ದಾರೆ.

Recommended Video

      Hyderabad : Good News For Telangana State Government Employees | Oneindia Kananda

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+