ಹೈದರಾಬಾದ್‌ : ದಾಳಿಗೆ ಸಿದ್ಧವಾಗಿದ್ದ ಐಎಸ್‌ಐಎಸ್‌ ಉಗ್ರರ ಸೆರೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಹೈದರಾಬಾದ್, ಜುಲೈ 12 : ಹೈದರಾಬಾದ್‌ನಲ್ಲಿ ಸ್ಫೋಟ ನಡೆಸಲು ಸಿದ್ಧರಾಗಿದ್ದ ಇಬ್ಬರು ಐಎಸ್‌ಐಎಸ್ ಉಗ್ರರನ್ನು ಎನ್‌ಐಎ ಬಂಧಿಸಿದೆ. ಕಳೆದ ತಿಂಗಳ ಅಂತ್ಯದಲ್ಲಿ 5 ಉಗ್ರರನ್ನು ನಗರದಲ್ಲಿ ಬಂಧಿಸಲಾಗಿತ್ತು. ಅವರ ವಿಚಾರಣೆ ನಡೆಸಿದ ಬಳಿಕ ಮಂಗಳವಾರ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಉಗ್ರರನ್ನು ಯಾಸೀರ್ ಮತ್ತು ಅತಾಹುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಆರೋಪಿಗಳು ಹೈದರಾಬಾದ್‌ನಲ್ಲಿ ಎರಡು ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದರು. ಇಬ್ಬರ ಬಳಿಯೂ ಸುಧಾರಿತ ಸ್ಫೋಟಕಗಳು ಪತ್ತೆಯಾಗಿವೆ ಎಂದು ಎನ್‌ಐಎ ಹೇಳಿದೆ. [ISIS ಗೆ ಹೈದರಾಬಾದ್ ನಲ್ಲಿ ಹೆಚ್ಚು ಬೆಂಬಲಿಗರು]

hyderabad

ಭಾರತದಲ್ಲಿ ಐಎಸ್‌ಐಎಸ್‌ಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ನಡೆಯುತ್ತಿರುವ ತನಿಖೆ ಜೊತೆಗೆ ಈ ಇಬ್ಬರು ಉಗ್ರರ ತನಿಖೆ ನಡೆಸಲಾಗುತ್ತದೆ ಎಂದು ಎನ್‌ಐಎ ಹೇಳಿದೆ. ಹೈದರಾಬಾದ್‌ನ ಇನ್ನೂ ಕೆಲವು ಯುವಕರ ಮೇಲೆ ಎನ್‌ಐಎ ಕಣ್ಣಿಟ್ಟಿದೆ. [ಹೈದರಾಬಾದ್ : ISIS ಉಗ್ರರ ಸೆರೆ]

ಜೂನ್ 29ರಂದು ಹೈದರಾಬಾದ್ ನಗರದ ವಿವಿಧ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದ ಎನ್‌ಐಎ ತಂಡ 11 ಶಂಕಿತ ಉಗ್ರರನ್ನು ವಶಕ್ಕೆ ಪಡೆದಿತ್ತು. ನಂತರ 5 ಉಗ್ರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿತ್ತು. ಐದು ಜನರ ವಿಚಾರಣೆ ನಂತರ ಇಂದು ಇಬ್ಬರನ್ನು ಬಂಧಿಸಲಾಗಿದೆ. [ಭಟ್ಕಳದ ಶಫಿ ಅರ್ಮರ್ ಮೃತಪಟ್ಟಿಲ್ಲ]

ಸಿರಿಯಾದ ಕೆಲವು ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಬಂಧಿತರಿಂದ 15 ಲಕ್ಷ ರೂ. ಹಣ ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The ongoing investigations being conducted by the National Investigation Agency has led to the arrest of two more suspected ISIS sympathisers from Hyderabad. The number of arrests is now 7. The NIA had last month arrested 5 persons from Hyderabad for alleged links with the ISIS.
Please Wait while comments are loading...