ಬಸ್ ಸ್ಟಾಂಡಿನಲ್ಲಿ ಮಹಿಳೆ ಗ್ಯಾಂಗ್ ರೇಪ್: ಪೇದೆ ಬಂಧನ
ಹೈದರಾಬಾದ್,
ಸೆ. 19: ಮಹಬೂಬ್ ನಗರ ಜಿಲ್ಲೆಯ ಕೊತ್ತಕೋಟ ಬಸ್ ಸ್ಟಾಂಡಿನಲ್ಲಿ ಮಹಿಳೆಯೊಬ್ಬರ ಮೇಲೆ ಪೊಲೀಸ್ ಪೇದೆ, ಹೋಂಗಾರ್ಡ್ ಸೇರಿದಂತೆ ಒಟ್ಟು 4 ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. id="toptextpromo">ಘಟನೆ
ಬೆಳಕಿಗೆ ಬರುತ್ತಿದ್ದಂತೆ ಪೇದೆ ಸೇರಿದಂತೆ ನಾಲ್ವರನ್ನೂ ಬಂಧಿಸಲಾಗಿದೆ. ಮಧ್ಯರಾತ್ರಿ 1 ಗಂಟೆ ವೇಳೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಈ ಕಾಮುಕರು ಮುಗಿಬಿದ್ದಿದ್ದಾರೆ ಎಂದು ಮಹಬೂಬ್ ನಗರ ಪೊಲೀಸ್ ವರಿಷ್ಠಾಧಿಕಾರಿ ಡಿ ನಾಗೇಂದ್ರ ಕುಮಾರ್ PTIಗೆ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಾನ್ಸ್
ಟೇಬಲ್ ಸೀನು, ಹೋಂಗಾರ್ಡ್ ನಾಗೇಂದ್ರನ್ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಾದ ರಮೇಶ್ ಮತ್ತು ರಾಕೇಶ್ ಬಂಧಿತರು. ಬಾಧಿತ ಮಹಿಳೆಯನ್ನು ಇಂದು ಬೆಳಗ್ಗೆ ವೈದ್ಯಕೀಯ ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಿ ನಾಗೇಂದ್ರ ಕುಮಾರ್ ಹೇಳಿದ್ದಾರೆ.











Click it and Unblock the Notifications