ಚಿತ್ರಗಳಲ್ಲಿ : ಕೃಷ್ಣಾ ನದಿ ಪುಷ್ಕರೋತ್ಸವ ಸಂಭ್ರಮ

Posted By:
Subscribe to Oneindia Kannada

ವಿಜಯವಾಡ, ಆಗಸ್ಟ್ 16: ಶ್ರಾವಣ ಮಾಸದಲ್ಲಿ ಕೃಷ್ಣಾ ನದಿಯಲ್ಲಿ ತೀರ್ಥಸ್ನಾನ ಮಾಡುವ 'ಪುಷ್ಕರೋತ್ಸವ'ಕ್ಕೆ ದೇಶದೆಲ್ಲೆಡೆಯಿಂದ ಜನಸಾಗರ ಹರಿದು ಬರುತ್ತಿದೆ.12 ದಿನಗಳ ಈ ಪವಿತ್ರ ಸ್ನಾನ ಹಬ್ಬ ಆರಂಭವಾಗಿ ಮೂರು ದಿನ ಕಳೆದರೂ ಲಕ್ಷಾಂತರ ಭಕ್ತರ ಸಮೂಹದ ಪಾಪಗಳನ್ನು 'ಕೃಷ್ಣೆ' ತೊಳೆದಿದ್ದಾಳೆ.

ವಿಜಯವಾಡಾದ ದುರ್ಗಾ ಘಾಟ್​ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಳೆದ ಶುಕ್ರವಾರ ಬೆಳಗ್ಗೆ ಪುಷ್ಕರಾಲು ಉತ್ಸವಕ್ಕೆ ಚಾಲನೆ ನೀಡಿದರು. 2 ವಾರ ನಡೆಯಲಿರುವ ಉತ್ಸವದಲ್ಲಿ ಸುಮಾರು 3.5 ಕೋಟಿ ಜನ ಪಾಲ್ಗೊಂಡು ಪವಿತ್ರ ತೀರ್ಥಸ್ನಾನ ಮಾಡುವ ನಿರೀಕ್ಷೆ ಇದೆ. ಈಗಾಗಲೇ ದೇಶದೆಲ್ಲೆಡೆಯಿಂದ 25 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಕೃಷ್ಣಾ ನದಿ ಸ್ನಾನ ಮಾಡಿದ್ದಾರೆ ಎಂದು ಆಂಧ್ರಸರ್ಕಾರ ಪ್ರಕಟಿಸಿದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಗುರುಗ್ರಹ ಕನ್ಯಾ ರಾಶಿ ಪ್ರವೇಶಿಸುವ ಸಂದರ್ಭದಲ್ಲಿ ಕೃಷ್ಣಾ ನದಿಗೆ ಗಂಗೆಯ ಪಾವಿತ್ರ್ಯ ಬರುತ್ತದೆ ಎಂಬ ನಂಬಿಕೆ ಭಕ್ತ ರಲ್ಲಿದೆ. ಪಥ ಬದಲಾಗುವ ದಿನದಂದು ಕೃಷ್ಣಾ ನದಿ ದಡದ ಪ್ರದೇಶಗಳಲ್ಲಿ ಪುಷ್ಕರೋತ್ಸವ ಆರಂಭವಾಗುತ್ತದೆ. ಈ ವೇಳೆ ಭಕ್ತರು ಕೃಷ್ಣೆಯಲ್ಲಿ ತೀರ್ಥಸ್ನಾನ ಮಾಡುತ್ತಾರೆ.[ಗ್ಯಾಲರಿ: ಪುಷ್ಕರೋತ್ಸವದಲ್ಲಿ ಮಿಂದೆದ್ದ ಭಕ್ತಾದಿಗಳು]

12 ದಿನಗಳ ಈ ಪವಿತ್ರ ಸ್ನಾನ ಹಬ್ಬ

12 ದಿನಗಳ ಈ ಪವಿತ್ರ ಸ್ನಾನ ಹಬ್ಬ

ವಿಜಯವಾಡ ದುರ್ಗಾ ಘಾಟ್​ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಳೆದ ಶುಕ್ರವಾರ ಬೆಳಗ್ಗೆ ಪುಷ್ಕರಾಲು ಉತ್ಸವಕ್ಕೆ ಚಾಲನೆ ನೀಡಿದರು.

ಕಂಚಿ ಮಠ ಶ್ರೀಗಳಿಂದ ಪವಿತ್ರ ಸ್ನಾನ

ಕಂಚಿ ಮಠ ಶ್ರೀಗಳಿಂದ ಪವಿತ್ರ ಸ್ನಾನ

ಕಂಚಿಯ ಶಂಕರಾಚಾರ್ಯ ಪೀಠದ ಮಠಾಧೀಶ ಜಯೇಂದ್ರ ಸರಸ್ವತಿ ಸ್ವಾಮೀಜಿಗಳು ಕೃಷ್ಣಾನದಿಯಲ್ಲಿ ಪವಿತ್ರ ಸ್ನಾನ ಕೈಗೊಂಡರು.

3.5 ಕೋಟಿ ಜನ ಪಾಲ್ಗೊಳ್ಳುವ ನಿರೀಕ್ಷೆ

3.5 ಕೋಟಿ ಜನ ಪಾಲ್ಗೊಳ್ಳುವ ನಿರೀಕ್ಷೆ

2 ವಾರ ನಡೆಯಲಿರುವ ಉತ್ಸವದಲ್ಲಿ ಸುಮಾರು 3.5 ಕೋಟಿ ಜನ ಪಾಲ್ಗೊಂಡು ಪವಿತ್ರ ತೀರ್ಥಸ್ನಾನ ಮಾಡುವ ನಿರೀಕ್ಷೆ ಇದೆ. ಈಗಾಗಲೇ ದೇಶದೆಲ್ಲೆಡೆಯಿಂದ 25 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಕೃಷ್ಣಾ ನದಿ ಸ್ನಾನ ಮಾಡಿದ್ದಾರೆ ಎಂದು ಆಂಧ್ರಸರ್ಕಾರ ಪ್ರಕಟಿಸಿದೆ.

ಕರ್ನಾಟಕದಲ್ಲೂ ಪುಷ್ಕರೋತ್ಸವ ನಡೆಯುತ್ತದೆ

ಕರ್ನಾಟಕದಲ್ಲೂ ಪುಷ್ಕರೋತ್ಸವ ನಡೆಯುತ್ತದೆ

ದೇಶದ ಅನೇಕ ಜೀವ ನದಿಗಳು ಗಂಗೆಯ ಪಾವಿತ್ರ್ಯ ಹೊಂದುತ್ತವೆ ಎಂಬುದು ಭಕ್ತರ ನಂಬಿಕೆಯಿದೆ. ಅದರಂತೆ ರಾಜ್ಯದ ಕೋಲಾರ, ಚಿಕ್ಕೋಡಿ, ಕೂಡಲಸಂಗಮ ಮತ್ತಿತರ ಪ್ರದೇಶಗಳಲ್ಲೂ ಪುಷ್ಕರೋತ್ಸವ ಆಚರಿಸಲಾಗುತ್ತದೆ.

ಏನಿದು ಪುಷ್ಕರೋತ್ಸವ

ಏನಿದು ಪುಷ್ಕರೋತ್ಸವ

ಗುರುಗ್ರಹ ಕನ್ಯಾ ರಾಶಿ ಪ್ರವೇಶಿಸುವ ಸಂದರ್ಭದಲ್ಲಿ ಕೃಷ್ಣಾ ನದಿಗೆ ಗಂಗೆಯ ಪಾವಿತ್ರ್ಯ ಬರುತ್ತದೆ ಎಂಬ ನಂಬಿಕೆ ಭಕ್ತ ರಲ್ಲಿದೆ. ಪಥ ಬದಲಾಗುವ ದಿನದಂದು ಕೃಷ್ಣಾ ನದಿ ದಡದ ಪ್ರದೇಶಗಳಲ್ಲಿ ಪುಷ್ಕರೋತ್ಸವ ಆರಂಭವಾಗುತ್ತದೆ. ಈ ವೇಳೆ ಭಕ್ತರು ಕೃಷ್ಣೆಯಲ್ಲಿ ತೀರ್ಥಸ್ನಾನ ಮಾಡುತ್ತಾರೆ.

ಗುರುಗ್ರಹ ವಿವಿಧ ರಾಶಿ ಪ್ರವೇಶಿಸಿದ ಸಂದರ್ಭದಲ್ಲಿ ಆಯಾ ರಾಶಿಗನುಗುಣವಾಗಿ ದೇಶದ ಇತರ 12 ನದಿಗಳ ತಟದಲ್ಲೂ ಪುಷ್ಕರೋತ್ಸವ ಆಯೋಜಿಸಲಾಗುತ್ತದೆ. ಚಿತ್ರದಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ್

ಟಿಟಿಡಿಯಿಂದ ಸಕಲ ವ್ಯವಸ್ಥೆ

ಟಿಟಿಡಿಯಿಂದ ಸಕಲ ವ್ಯವಸ್ಥೆ

ಪುಷ್ಕರೋತ್ಸವದ ಸಂದರ್ಭ ಪ್ರತಿ ದಿನ ಸುಮಾರು ಒಂದು ಲಕ್ಷ ಜನರಿಗೆ ಉಚಿತವಾಗಿ ಆಹಾರ ವಿತರಿಸಲಾಗುತ್ತದೆ.ತಿರುಪತಿ ವೆಂಕಟೇಶ್ವರ ದೇಗುಲದ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ತೀರ್ಥಸ್ನಾನದ ನಿರ್ವಹಣೆ, ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಮುಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Over 25 lakh piligrims from across India took holy dip in Krishna river across the Andhra Pradesh Ghats on the occassion of Krishna Pushkaralu. Pushkaralu is a 12 day festival began at Vijayawada.
Please Wait while comments are loading...