ಮೃತದೇಹ ಸ್ವೀಕರಿಸಲು ಒಪ್ಪದ ಕುಟುಂಬದವರು: ಪೊಲೀಸರಿಂದಲೇ ಅಂತ್ಯಸಂಸ್ಕಾರ ಸಾಧ್ಯತೆ

Recommended Video

      ಹೈದರಾಬಾದ್ ಎನ್ಕೌಂಟರ್ ಬಗ್ಗೆ ತನ್ನ ಖುಷಿಯನ್ನು ಹಂಚಿಕೊಂಡ ಬಾಬಾ ರಾಮ್ ದೇವ್ ಹೇಳಿದ್ದಿಷ್ಟು | BABA RAM DEV

      ಹೈದರಾಬಾದ್, ಡಿಸೆಂಬರ್ 6: ಎನ್‌ಕೌಂಟರ್ ನಡೆದ ಸ್ಥಳದಲ್ಲಿಯೇ ಸುಮಾರು ಹತ್ತು ಗಂಟೆ ಸಮಯ ಬಿದ್ದಿದ್ದ ಅತ್ಯಾಚಾರ ಆರೋಪಿಗಳ ಮೃತದೇಹಗಳನ್ನು ಶುಕ್ರವಾರ ಮಧ್ಯಾಹ್ನದ ಬಳಿಕ ಅಲ್ಲಿಂದ ಸಾಗಿಸಲಾಯಿತು.

      ಮಹಬೂಬನಗರ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ಮೃತ ಆರೋಪಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಮೃತದೇಹಗಳನ್ನು ಆರೋಪಿಗಳ ಕುಟುಂಬದವರಿಗೆ ಒಪ್ಪಿಸಬೇಕಿದೆ. ಆದರೆ ಎಲ್ಲ ನಾಲ್ವರು ಆರೋಪಿಗಳ ಕುಟುಂಬದವರು ಮೃತದೇಹಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀಸರೇ ಅವರ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ.

      'ನನ್ನ ಮಗು ತಪ್ಪು ಮಾಡಿದ್ದರೆ ಅವನನ್ನೂ ಸುಟ್ಟುಬಿಡಿ. ನನ್ನ ಮಗ ನನಗೆ ಏನೂ ಅಲ್ಲ. ಆಕೆಯ ತಾಯಿ (ಪಶುವೈದ್ಯೆಯ ತಾಯಿ) ಒಂಬತ್ತು ತಿಂಗಳು ಹೊತ್ತು ಆಕೆಗೆ ಜನ್ಮ ನೀಡಿರುತ್ತಾರೆ. ಆಕೆಯ ಮಗ ಅಂತಹ ಅಪರಾಧದ ಬಲಿಪಶುವಾದರೆ ಆಕೆ ಏನು ಮಾಡಬೇಕು? ಇಂದು ನಾನು ಸಂಕಷ್ಟ ಅನುಭವಿಸುತ್ತಿದ್ದೇನೆ. ಆ ಹೆಣ್ಣುಮಗುವಿನ ತಾಯಿ ಅನುಭವಿಸುತ್ತಿರುವ ವೇದನೆ ನಾನು ಊಹಿಸಬಲ್ಲೆ' ಎಂದು ಪ್ರಕರಣದ ನಾಲ್ಕನೇ ಆರೋಪಿ ಚನ್ನಕೇಶವುಲು ತಾಯಿ, ಮಗನ ಬಂಧನವಾದಾಗ ಹೇಳಿಕೆ ನೀಡಿದ್ದರು.

      Kin Of Rape Accused Refused To Accept Bodies

      ಮರಣೋತ್ತರ ಪರೀಕ್ಷೆ ನಡೆಯುವ ಆಸ್ಪತ್ರೆಯ ಸುತ್ತಲೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

      'ನಾಲ್ವರು ಆರೋಪಿಗಳು ಹತ್ತು ದಿನಗಳಿಂದ ಪೊಲೀಸ್ ವಶದಲ್ಲಿದ್ದರು. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದೆವು. ಅವರು ತಾವು ಎಸಗಿದ ಅಪರಾಧವನ್ನು ಒಪ್ಪಿಕೊಂಡ ಬಳಿಕ ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು ಸನ್ನಿವೇಶವನ್ನು ಮರುಸೃಷ್ಟಿಸಲು ಬಯಸಿದ್ದೆವು. ಘಟನಾ ಸ್ಥಳವನ್ನು ತಲುಪಿದಾಗ ಆರೋಪಿಗಳು ನಮ್ಮ ಮೇಲೆ ಕಲ್ಲು ಎಸೆದು ದಾಳಿ ನಡೆಸಿದರು. ನಮ್ಮ ಗನ್‌ಗಳನ್ನು ಕಸಿದುಕೊಳ್ಳುವಲ್ಲಿ ಸಫಲರಾದರು. ಹೀಗಾಗಿ ಅವರ ಮೇಲೆ ಎನ್‌ಕೌಂಟರ್ ಮಾಡಬೇಕಾಯಿತು. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ' ಎಂದು ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+