ಮೋಹಿನಿ ಅವತಾರದಲ್ಲಿ ಜಗದೊಡೆಯ
ತಿರುಮಲ, ಅ.10: ತೆಲಂಗಾಣ ಪರ ಮತ್ತು ವಿರೋಧದ ಹೋರಾಟ ನವರಾತ್ರಿಯ ಸಂದರ್ಭದಲ್ಲಿ ನಡೆಸಲಾಗುವ ವಾರ್ಷಿಕ 'ಬ್ರಹ್ಮೋತ್ಸವ' ತಿರುಮಲದಲ್ಲಿ ಸಾಂಗೋಪಾಂಗವಾಗಿ ಸಾಗಿದೆ. ತಿರುಪತಿ ತಿಮ್ಮಪ್ಪನ 'ಮೋಹಿನಿ ಅವತಾರ' ಕಂಡು ಭಕ್ತರು ಪುನೀತರಾಗಿದ್ದಾರೆ.
ವೈಜ್ರವೈಢೂರ್ಯ ಚಿನ್ನಾಭರಣ ಭೂಷಿತನಾದ ಏಳುಬೆಟ್ಟದ ಒಡೆಯ ತಿಮ್ಮಪ್ಪ ಮೋಹಿನಿ ಅವತಾರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡು ಭಕ್ತರಿಗೆ ದರ್ಶನ ನೀಡಿದ. ದೇವ ಹಾಗೂ ದಾನವರ ನಡುವೆ ಅಮೃತ ಹಂಚಿಕೆ ವಿವಾದ ಎದ್ದಾಗ ಮೋಹಿನಿ ರೂಪದಲ್ಲಿ ಅವತರಿಸಿದ ಶ್ರೀಹರಿ ದೇವ ಸಮೂಹಕ್ಕೆ ಮಾತ್ರ ಅಮೃತ ಹಂಚಿ ದಾನವರಿಗೆ ಅಮೃತ ಅಮರತ್ವ ಸಿಗದಂತೆ ಮಾಡುತ್ತಾನೆ.
ಮೋಹಿನಿ ಅವತಾರದ ಇನ್ನೊಂದು ಪ್ರಮುಖ ಕಾರ್ಯ ಎಂದರೆ ಮಾಯೆಯಲ್ಲಿ ಮುಸುಕಿದ ಭಕ್ತರನ್ನು ಇಹಲೋಕದ ಮಾಯೆಯಿಂದ ಮುಕ್ತಗೊಳಿಸುವುದು. ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ ಎಂದು ಭಕ್ತರು ಗೊಂದಲಕ್ಕೆ ಬೀಳದಂತೆ ಕೈ ಹಿಡಿದು ಕಾಪಾಡುವುದು ಜಗನ್ನಾಥನ ಅವತಾರದ ಇನ್ನೊಂದು ಕಾರ್ಯವಾಗಿದೆ.
ಅ.5ರ ಶನಿವಾರದಿಂದ ಆರಂಭಗೊಂಡಿರುವ 9 ದಿನಗಳ 'ಬ್ರಹ್ಮೋತ್ಸವ' ಇಂದಿಗೆ ನಾಲ್ಕನೇ ದಿನ ಕಂಡಿದೆ. ಬೆಳಗ್ಗೆ ಹಾಗೂ ಸಂಜೆ ಪ್ರತ್ಯೇಕ ವಾಹನ ರೂಢನಾಗಿ ತಿಮ್ಮಪ್ಪನನ್ನು ಮೆರವಣಿಗೆ ಮಾಡಲಾಗುತ್ತದೆ. ಐದನೇ ದಿನ ಬೆಳಗ್ಗೆ ಶ್ರೀದೇವಿ, ಭೂದೇವಿ ಸಮೇತನಾದ ವೆಂಕಟೇಶ್ವರ ಸ್ವಾಮಿಗೆ ಶ್ರೀವಾರಿಗೆ ಮೋಹಿನಿ ಅವತಾರ ವಸ್ತ್ರ ತೊಡಿಸಲಾಗಿತ್ತು. ರಾತ್ರಿ ಗರುಢರೂಢನಾಗಿ ಸ್ವಾಮಿ ಕಾಣಿಸಿಕೊಂಡು ವೈಭವದ ಮೆರವಣಿಗೆಯಲ್ಲಿ ಸಾಗಿದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ..

ಶ್ರೀಕೃಷ್ಣ ಸ್ವರೂಪಿಯಾಗಿ
ಶ್ರೀವೆಂಕಟೇಶ್ವರನನ್ನು ಬಾಲಕೃಷ್ಣನ ರೂಪದಲ್ಲಿ ಅಲಂಕರಿಸಿ ಹೂವಿನ ಪಲ್ಲಕ್ಕಿಗಳಲ್ಲಿ ಹೊತ್ತು ಮೆರವಣಿಗೆ ಮಾಡಲಾಗುತ್ತದೆ. ರೋಸ್ ವುಡ್ ಹಾಗೂ ದಂತದಿಂದ ಕೆತ್ತಲ್ಪಟ್ಟ ಸುಂದರವಾದ ಪಲ್ಲಕ್ಕಿಗಳನ್ನು ಮೈಸೂರಿನ ಮಹರಾಜರು ತಿಮ್ಮಪ್ಪನ ಸೇವೆಗಾಗಿ ನೀಡಿರುವುದು ವಿಶೇಷ

ಮಾಯೆಯ ಸ್ವರೂಪ
ಮೋಹಿನಿ ಅವತಾರದ ಇನ್ನೊಂದು ಪ್ರಮುಖ ಕಾರ್ಯ ಎಂದರೆ ಮಾಯೆಯಲ್ಲಿ ಮುಸುಕಿದ ಭಕ್ತರನ್ನು ಇಹಲೋಕದ ಮಾಯೆಯಿಂದ ಮುಕ್ತಗೊಳಿಸುವುದು. ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ ಎಂದು ಭಕ್ತರು ಗೊಂದಲಕ್ಕೆ ಬೀಳದಂತೆ ಕೈ ಹಿಡಿದು ಕಾಪಾಡುವುದು ಜಗನ್ನಾಥನ ಅವತಾರದ ಇನ್ನೊಂದು ಕಾರ್ಯವಾಗಿದೆ.

ಅತಿಥಿಗಳು, ಗಣ್ಯರು
ಟಿಟಿಡಿ ಚೇರ್ಮನ್ ಕೆ ಬಪಿರಾಜು, ಕಾರ್ಯಕಾರಿ ಅಧಿಕಾರಿ ಎಂಜಿ ಗೋಪಾಲ್, ಕೆಎಸ್ ಶ್ರೀನಿವಾಸರಾಜು, ಪಿ ವೆಂಕಟರಾಮಿ ರೆಡ್ಡಿ, ಜಿವಿಜಿ ಅಶೋಕ್ ಕುಮಾರ್, ಮುನಿರತ್ನಂ ರೆಡ್ಡಿ, ರಾಮರಾವ್, ಆರ್ ಸೆಲ್ವಂ ಸೇರಿದಂತೆ ಅನೇಕ ಗಣ್ಯರು ಐದನೇ ದಿನ ಬ್ರಹ್ಮೋತ್ಸವ ಮೆರವಣಿಗೆ ಯಶಸ್ವಿಯಾಗುವಂತೆ ಮಾಡಿದರು.

ಅರನೇ ದಿನದ ವಿಶೇಷ
ತಿರುಮಲ ತಿರುಪತಿ ಬ್ರಹ್ಮೋತ್ಸವ ಆರನೇ ದಿನ ಹನುಮಂತ ವಾಹನ ಬೆಳಗ್ಗೆ ನಡೆದರೆ ಸಂಜೆ ಡೋಲೋತ್ಸವ 5 ರಿಂದ 6 ಗಂಟೆ ತನಕ ಹಾಗೂ ಸ್ವರ್ಣರಥ ಉತ್ಸವ ರಾತ್ರಿ ಗಜವಾಹನ ಸೇವೆ

ಏಳನೇ ದಿನದ ವಿಶೇಷ
ತಿರುಮಲ ತಿರುಪತಿ ಬ್ರಹ್ಮೋತ್ಸವ ಏಳನೇ ದಿನ ದುರ್ಗಾಷ್ಟಮಿ ಹಬ್ಬ ಹಾಗೂ ರಥೋತ್ಸವ ರಾತ್ರಿ ವೇಳೆಗೆ ಅಶ್ವವಾಹನ ರೂಢನಾಗಿ ತಿಮ್ಮಪ್ಪನ ದರ್ಶನ ಸಿಗಲಿದೆ

ಎಂಟನೇ ದಿನದ ವಿಶೇಷ
ತಿರುಮಲ ತಿರುಪತಿ ಬ್ರಹ್ಮೋತ್ಸವ ಎಂಟನೇ ಸೂರ್ಯಪ್ರಭ ವಾಹನ ಸಂಜೆ ವಿವಿಧ ಶುದ್ಧೀಕರಣ ಸ್ನಾನ. ರಾತ್ರಿ ಚಂದ್ರಪ್ರಭ ವಾಹನ

ಒಂಭತ್ತನೇ ದಿನದ ವಿಶೇಷ
ತಿರುಮಲ ತಿರುಪತಿ ಬ್ರಹ್ಮೋತ್ಸವ ಒಂಭತ್ತನೇ ದಿನ ಸ್ನಾಪಣ ತಿರುಮಂಜನಂ ಹಾಗೂ ಚಕ್ರಸ್ನಾನ ಹಾಗೂ ಚಿನ್ನದ ತಿರುಚಿವುತ್ಸವಂ ಧ್ವಜ ಅಹೋರಣ

ಮಕ್ಕಳಿಂದ ಕೋಲಾಟ
ನವರಾತ್ರಿ ಸಂದರ್ಭದಲ್ಲಿ ನಡೆಯುವ ತಿರುಮಲ ತಿರುಪತಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಪ್ರತಿದಿನ ಕೋಲಾಟ ಮುಂತಾದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಾಗುತ್ತಿದೆ.

ಸಾಂಪ್ರದಾಯಿಕ ನೃತ್ಯ
ನವರಾತ್ರಿ ಸಂದರ್ಭದಲ್ಲಿ ನಡೆಯುವ ತಿರುಮಲ ತಿರುಪತಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಪ್ರತಿದಿನ ಕೋಲಾಟ ಮುಂತಾದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಾಗುತ್ತಿದೆ.

ಜನಪದ ಕಲಾವಿದರು
ನವರಾತ್ರಿ ಸಂದರ್ಭದಲ್ಲಿ ನಡೆಯುವ ತಿರುಮಲ ತಿರುಪತಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಪ್ರತಿದಿನ ಕೋಲಾಟ ಮುಂತಾದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಾಗುತ್ತಿದೆ. ನೆರೆ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮೂಲದ ಜನಪದ ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಸಾರ್ವಜನಿಕರ ನರ್ತನ
ನವರಾತ್ರಿ ಸಂದರ್ಭದಲ್ಲಿ ನಡೆಯುವ ತಿರುಮಲ ತಿರುಪತಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಪ್ರತಿದಿನ ಕೋಲಾಟ ಮುಂತಾದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಾಗುತ್ತಿದೆ. ಸಾರ್ವಜನಿಕರು ಕೂಡಾ ಭಕ್ತಿ ಪರವಶರಾಗಿ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ.

ಭರತನಾಟ್ಯ
ನವರಾತ್ರಿ ಸಂದರ್ಭದಲ್ಲಿ ನಡೆಯುವ ತಿರುಮಲ ತಿರುಪತಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಪ್ರತಿದಿನ ಕೋಲಾಟ ಮುಂತಾದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಾಗುತ್ತಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications