ಹೈದರಾಬಾದ್ : ಮಹಿಳಾ ಟೆಕ್ಕಿ ಮೇಲೆ ಸಾಮೂಹಿಕ ಅತ್ಯಾಚಾರ
ಹೈದರಾಬಾದ್, ಅ.22: ಸಾಫ್ಟ್ ವೇರ್ ಕ್ಷೇತ್ರಕ್ಕೆ ಕಾಲಿಟ್ಟು ಇಂಜಿನಿಯರ್ ಆಗಿ ವೃತ್ತಿ ಜೀವನದ ಕನಸು ಕಾಣುತ್ತಿದ್ದ ಯುವ ಮಹಿಳಾ ಟೆಕ್ಕಿ ಮೇಲೆ ಇಬ್ಬರು ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರುವ ಮಹಿಳೆಯೊಬ್ಬರನ್ನು ಆರೋಪಿಗಳಾದ ಸತೀಶ್ ಮತ್ತು ವೆಂಕಟೇಶ್ವರಲು ಎಂಬವರು ಸತತ ಆರು ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯಕ್ಕೊಳಪಡಿಸಿದ್ದಾರೆ.
ಶನಿವಾರ ರಾತ್ರಿ ಶಾಪಿಂಗ್ ಮುಗಿಸಿಕೊಂಡು ಮನೆಗೆ ತೆರಳುವಾಗ ಮಾದಾಪುರ್ ಮೈಂಡ್ ಸ್ಪೇಸ್ ಶಾಲೆ ಬಳಿ ಈ ದುರ್ಘಟನೆ ನಡೆದಿದೆ. ಘಟನೆ ನಡೆಯುವುದಕ್ಕೂ ಮುನ್ನ ಟೆಕ್ಕಿ ಬೆಂಗಳೂರಿನಲ್ಲಿರುವ ತನ್ನ ಭಾವಿ ಪತಿ ಜತೆ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಘಟನೆ ನಂತರ ದಿಗ್ಭ್ರಮೆಗೆ ಒಳಗಾದ ಟೆಕ್ಕಿ ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಆದರೆ, ಟೆಕ್ಕಿ ಮಾತು ನಂಬದೆ ಸುಳ್ಳು ದೂರು ನೀಡುತ್ತಿದ್ದಾರೆ ಎಂಬ ಸಂಶಯದಿಂದ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ.
ನಂತರ ಸೈಬರಾಬಾದಿನ ಕಮಿಷನರ್ ಆನಂದ್ ಅವರ ಸೂಚನೆ ಮೇರೆಗೆ ಪೊಲೀಸರು ಸಂತ್ರಸ್ತೆಯಿಂದ ದೂರನ್ನು ಸ್ವೀಕರಿಸಿ ತನಿಖೆ ನಡೆಸಿದ್ದಾರೆ. ಸದ್ಯ ಹೈದರಾಬಾದಿನ ಹೊರವಲಯದಲ್ಲಿ ಆರೋಪಿ ಕ್ಯಾಬ್ ಡ್ರೈವರ್ ಸತೀಶ್ ಹಾಗೂ ವೆಂಕಟೇಶ್ವರಲು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಗೊಂದಲಮಯ ಕೇಸ್: 22 ವರ್ಷದ ಮಹಿಳಾ ಸಾಫ್ಟ್ ವೇರ್ ಇಂಜಿನಿಯರ್ ಅವರು ಅತ್ಯಾಚಾರ ಹಾಗೂ ಕಿಡ್ನಾಪ್ ನಿಂದ ಸ್ವಲ್ಪದರಲ್ಲೇ ಬಚಾವಾದರು ಎಂದು ಸ್ಥಳೀಯ ಮಾಧ್ಯಮ ಹಾಗೂ ಪ್ರಮುಖ ಪತ್ರಿಕೆಗಳಲ್ಲಿ ಈ ಮುಂಚೆ ವರದಿಯಾಗಿತ್ತು.ಮಾಧ್ಯಮಗಳಿಗೆ ಈ ರೀತಿ ಮಾಹಿತಿ ನೀಡಿದ್ದು ಪೊಲೀಸರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಗಾಚಿಬೌಲಿ ಪ್ರದೇಶದ ಸಮೀಪ 22 ವರ್ಷದ ಯುವ ಟೆಕ್ಕಿಯೊಬ್ಬರನ್ನು ಇಬ್ಬರು ದುಷ್ಕರ್ಮಿಗಳು ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಈ ಪೈಕಿ ಒಬ್ಬ ಕ್ಯಾಬ್ ಡ್ರೈವರ್ ಆಗಿದ್ದು ಅವನು ಆಕೆ ಮೇಲೆ ರೇಪ್ ಮಾಡುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ.
ದೂರು ಹೀಗಿದೆ: ಶುಕ್ರವಾರ ರಾತ್ರಿ 9 ಗಂಟೆಗೆ ಶಾಪಿಂಗ್ ಮುಗಿಸಿ ಹಾಸ್ಟೆಲ್ ಕಡೆಗೆ ಹೊರಟ್ಟಿದ್ದೆ. ಟ್ಯಾಕ್ಸಿ ಕರೆದೆ. ಟ್ಯಾಕ್ಸಿಯಲ್ಲಿ ಡ್ರೈವರ್ ಜತೆಗೆ ಇನ್ನೊಬ್ಬ ವ್ಯಕ್ತಿ ಇದ್ದ. ಕಾರು ನಾನು ಹೇಳಿದ ಮಾರ್ಗ ಬಿಟ್ಟು ಬೇರೆ ಕಡೆ ತೆರಳತೊಡಗಿತು. ನನಗೆ ಗಾಬರಿಯಾಗಿ ನನ್ನ ಗೆಳೆಯ, ಗೆಳತಿಯರಿಗೆ ಫೋನ್ ಕರೆ ಮಾಡಿದೆ. ನನ್ನ ಕಿರುಚಾಟ ಕಂಡು ಸಾರ್ವಜನಿಕರು ಕಾರಿನತ್ತ ತಿರುಗಿದಾಗ ಭಯಗೊಂಡ ಡ್ರೈವರ್ ಕಾರು ನಿಲ್ಲಿಸಿದ. ನಾನು ಬಚಾವಾದೆ. ಇನ್ನೊಂದು ಮೂಲಗಳ ಪ್ರಕಾರ ಮದುವೆ ಹೊಸ್ತಿಲಲ್ಲಿ ಪೊಲೀಸರಿಗೆ ದೂರು ನೀಡುವುದು ಏಕೆ ಎಂದು ಆಕೆಯೇ ದೂರು ದಾಖಲಿಸಬೇಡಿ ಎಂದು ಮನವಿ ಮಾಡಿಕೊಂಡಳು ಎನ್ನಲಾಗಿದೆ. ಆದರೆ, ಇಂದಿನ ಮಾಹಿತಿ ಪ್ರಕಾರ ಟೆಕ್ಕಿ ಮೇಲೆ 6 ಗಂಟೆಗಳ ಕಾಲ ಅತ್ಯಾಚಾರ ಎಸಗಲಾಗಿದೆ.
ಗುಂಟೂರು ಮೂಲದ ಈ ಟೆಕ್ಕಿ ಮಾಧಾಪುರದಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ಗೌಲಿದೊಡ್ಡಿ ಬಳಿ ಹಾಸ್ಟೆಲ್ ನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿರುವ ಈಕೆ ಭಾವಿ ಪತಿ ತನ್ನ ಗೆಳೆಯರಿಗೆ ಅಲರ್ಟ್ ಮೆಸೇಜ್ ಕಳಿಸಿದ್ದಾನೆ ಹೀಗಾಗಿ ಪೊಲೀಸ್ ನೆರವು ತ್ವರಿತವಾಗಿ ಸಿಕ್ಕಿದೆ.












Click it and Unblock the Notifications