ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಾಂಕಾ ಟ್ರಂಪ್ ಭಾರತಕ್ಕೆ ಆಗಮನ ಹಿನ್ನಲೆ ಬಿಗಿ ಭದ್ರತೆ

|
Google Oneindia Kannada News

ಹೈದರಾಬಾದ್, ನವೆಂಬರ್ 21 : ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಅವರು ನವೆಂಬರ್ 28 ರಂದು ಭಾರತಕ್ಕೆ ಬರಲಿದ್ದಾರೆ. ಅವರು ಉಳಿದುಕೊಳ್ಳಲಿರುವ ಹೈದರಾಬಾದ್ (ತೆಲಂಗಾಣ)ದಲ್ಲಿರುವ ತಾಜ್ ಫಲಾಕ್ನುಮಾ ಪ್ಯಾಲೇಸ್ ಸುತ್ತಮುತ್ತಲಿನಲ್ಲಿ ಭಿಗಿ ಭದ್ರತೆ ಕಲ್ಪಿಸಲಾಗಿದೆ.

ಫಲಕ್ನುಮಾ ಪ್ಯಾಲೇಸ್ ಆವರಣದಲ್ಲಿ ಜಾಗತಿಕ ಉದ್ಯಮಶೀಲ ಸಮಾವೇಶದಲ್ಲಿ ಇವಾಂಕ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ತಾಜ್ ಫಲಕ್ನುಮಾ ವಿಶ್ವದ ಅತಿ ದೊಡ್ಡ ಡೈನಿಂಗ್ ಟೇಬಲ್ ಹೊಂದಿರುವ ಹೋಟೆಲ್ ಎಂದು ಖ್ಯಾತಿಗಳಿಸಿದೆ.

Hyderabad police restricted on Falaknuma residents ahead of US prez Trump daughter visit

ಭದ್ರತೆ ಕಲ್ಪಿಸುವ ದೃಷ್ಟಿಯಿಂದ ನಗರ ಪೊಲೀಸ್ ಪಡೆ, ಇಂಟೆಲಿಜನ್ಸ್ ವಿಂಗ್, ಟಾಸ್ಕ್ ಫೋರ್ಸ್ ನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ತಾಜ್ ಫಲಕ್ನುಮಾ ಹೋಟೆಲ್ ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಪಾಸಣೆ ಕೈಗೊಂಡಿದ್ದಾರೆ. ಆಸುಪಾಸಿನಲ್ಲಿರುವ 3500 ಮನೆಗಳಿಗೆ ಯಾವುದೇ ಸಂಬಂಧಿಕರು, ಪರಿಚಿತರು ಬಾರದಂತೆ ಪೊಲೀಸರು ಸೂಚಿಸಿದ್ದಾರೆ. ಒಂದೊಮ್ಮೆ ಅನಿವಾರ್ಯವಾಗಿ ಬರಬೇಕಿದ್ದರೆ ಪೊಲೀಸರ ಅನುಮತಿ ಪಡೆಯಬೇಕೆಂದು ಸೂಚಿಸಲಾಗಿದೆ.
English summary
Hyderabad police have amped up the security measues in the city and imposed curbs on residents living in and around the Falaknuma palace ahead of the visit of US President Donald Trumps daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X