ಭಾರಿ ಮಳೆಗೆ ಗೋಡೆ ಕುಸಿದು 2 ತಿಂಗಳ ಕಂದಮ್ಮ ಸೇರಿ 9 ಮಂದಿ ಸಾವು
ಹೈದರಾಬಾದ್, ಅಕ್ಟೋಬರ್ 14: ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿದು 10 ಮನೆಗಳ ಮೇಲೆ ಬಿದ್ದ ಕಾರಣ 2 ತಿಂಗಳ ಮಗು ಸರಿ 9 ಮಂದಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಗೋಡೆಯ ಅವಶೇಷಗಳಡಿ ಶವಗಳು ಸಿಲುಕಿವೆ. ತೆಲಂಗಾಣ ಹಾಗೂ ಆಂಧ್ರಪ್ರದೇಶದ ಆಸುಪಾಸಿನ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.
ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಪ್ರದೇಶಗಳಲ್ಲಿ ನೀರು ನಿಂತು ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ. ತೆಲಂಗಾಣದ 14 ಜಿಲ್ಲೆಗಳಿಗೆ ಮಳೆಯಿಂದ ಹಾನಿಯುಂಟಾಗಿದೆ.

ಹೈದರಾಬಾದ್ ಲೋಕಸಭಾ ಎಂಪಿ ಅಸಾದುದ್ದೀನ್ ಓವೈಸಿ ಕಾಂಪೌಂಡ್ ಗೋಡೆ ಕುಸಿದಿರುವ ಕುರಿತು ಟ್ವೀಟ್ ಮಾಡಿದ್ದಾರೆ.ಹೆಚ್ಚು ಮಳೆ ಇರುವ ಕಾರಣ ಯಾರೂ ಮನೆಯಿಂದ ಹೊರಹೋಗಬೇಡಿ ಎಂದು ಸೂಚನೆ ನೀಡಲಾಗಿದೆ.
ಉತ್ತರ ಆಂಧ್ರಪ್ರದೇಶದ ಕರಾವಳಿಯಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿರುವ ಕಾರಣ ಅ.14 ಮತ್ತು 15 ರಂದು ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ.












Click it and Unblock the Notifications