GHMC Election results:ಯಾವ ವಾರ್ಡ್‌ನಿಂದ ಮೊದಲ ಫಲಿತಾಂಶ?
ಹೈದರಾಬಾದ್, ಡಿ 4: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಭಾರಿ ಕುತೂಹಲ ಕೆರಳಿಸಿದ್ದು, ಇವಿಎಂ ಬದಲಿಗೆ ಮತಪತ್ರಗಳನ್ನು ಬಳಸಿ ಡಿ. 1ರಂದು ಮತದಾನ ನಡೆಸಲಾಗಿತ್ತು. ಡಿ.4ರಂದು ಹೈದರಾಬಾದ್ ನಗರದ 30 ಮತ ಎಣಿಕೆ ಕೇಂದ್ರಗಳಲ್ಲಿ 8,152 ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಮೊದಲ ಫಲಿತಾಂಶ ಯಾವ ಪ್ರದೇಶದಿಂದ ಬರಲಿದೆ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ.
ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರ ಬಂದಿದ್ದು, ಹೈದರಾಬಾದ್ ಚುನಾವಣೆಯನ್ನು ಮತ್ತೊಮ್ಮೆ ತೆಲಂಗಾಣ ರಾಷ್ಟ್ರ ಸಮಿತಿ ಗೆಲ್ಲಲಿದೆ ಎಂಬ ವರದಿ ಬಂದಿದೆ. ಆದರೆ, ಆರಂಭಿಕ ಟ್ರೆಂಡ್ ನಂತೆ ಬಿಜೆಪಿ 88 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದರೆ ಟಿಆರ್ ಎಸ್ 32 ನಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಅಂಚೆ ಮತಗಳ ಎಣಿಕೆ ಮುಗಿದಿದ್ದು, ಬಿಜೆಪಿ ಮುನ್ನಡೆ ಪಡೆದು ಗೆಲುವಿನ ಹೊಸ್ತಿಲಲ್ಲಿದೆ.
ಮೊದಲ ಸುತ್ತಿನ ಎಣಿಕೆಯಂತೆ ಮುನ್ನಡೆ ಸಮಯ 12;00- TRS 42; ಬಿಜೆಪಿ 18; ಎಂಐಎಂ: 20, ಕಾಂಗ್ರೆಸ್ 1
ಬಿಜೆಪಿ : ಗೋಶಮಹಲ್, ಬೇಗಂಬಜಾರ್, ದತ್ತಾತ್ರೇಯ ನಗರ,ಐಎಸ್ ಸದನ್, ಹಯಾತ್ ನಗರ, ಹಸ್ತಿನಪುರಂ, ಚೈತನ್ಯಪುರಿ, ಗದ್ದಿಯಾರಂ.
ಟಿಆರ್ ಎಸ್: ಆರ್ ಸಿ ಪುರಂ, ಪತನ್ ಚೇರು, ಚಂದಾನಗರ್, ಹಫೀಜ್ ಪೇಟ್, ಹೈದರ್ ನಗರ್,ಜ್ಯುಬಿಲಿ ಹಿಲ್ಸ್, ಖೈರಾತಾಬಾದ್,ಓಲ್ಡ್ ಬೊರೆನ್ ಪಲ್ಲಿ, ಬಾಲನಗರ್, ಚೆರ್ಲಪಲ್ಲಿ, ಕಾಪ್ರ ಹಾಗೂ ಮೀರ್ ಪೇಟ್

ಮೆಹ್ದಿಪಟ್ನಂನಲ್ಲಿ ಮೊದಲು ಫಲಿತಾಂಶ
ಎಂಐಎಂ ಪ್ರಾಬಲ್ಯ ಹೊಂದಿರುವ ಮೆಹ್ದಿಪಟ್ನಂನಲ್ಲಿ ಮೊದಲು ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚಿದೆ. ಮೆಹ್ದಿಪಟ್ನಂನಲ್ಲಿ ಅಂಚೆ ಮತಗಳ ಎಣಿಕೆ ಮುಕ್ತಾಯವಾಗಿದೆ. ಡಿ.1ರಲ್ಲಿ ಇಲ್ಲಿ ಕೇವಲ 11,818 ಮತಗಳು ಮಾತ್ರ ಬಿದ್ದಿವೆ. ಹೀಗಾಗಿ ಮೊದಲಿಗೆ ಫಲಿತಾಂಶ ನೀಡುವ ಸಾಧ್ಯತೆಯಿದೆ.

136 ವಾರ್ಡ್ ಗಳ ಫಲಿತಾಂಶ ಮಧ್ಯಾಹ್ನವೇ ಫಲಿತಾಂಶ
ಈ ನಡುವೆ 150 ವಾರ್ಡ್ ಪೈಕಿ 136 ವಾರ್ಡ್ ಗಳ ಫಲಿತಾಂಶ ಮಧ್ಯಾಹ್ನದ ವೇಳೆಗೆ ಬರುವ ಸಾಧ್ಯತೆ ನಿಚ್ಚಳವಾಗಿದೆ. ಈ ವಾರ್ಡ್ ಗಳಲ್ಲಿ 12 ಸಾವಿರ ಮಾತ್ರ ಮತಗಳು ದಾಖಲಾಗಿವೆ. ಇದೇ ರೀತಿ ಮರು ಚುನಾವಣೆ ಕಂಡ ಓಲ್ಡ್ ಮಲಕ್ ಪೇಟ್ ನಲ್ಲಿ ಕೊನೆಯದಾಗಿ ಫಲಿತಾಂಶ ಹೊರ ಬರಲಿದೆ.

2016ರಲ್ಲಿ ಟಿಆರ್ ಎಸ್ 99
2016ರಲ್ಲಿ ಟಿಆರ್ ಎಸ್ 99(43%), ಎಂಐಎಂ 44(15.85%), ಕಾಂಗ್ರೆಸ್ 1(10.40%), ಟಿಡಿಪಿ 2 (13.11%) ಹಾಗೂ ಬಿಜೆಪಿ 4 (10.34%) ಫಲಿತಾಂಶ ಬಂದಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 24 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಆಡಳಿತಾರೂಢ ಟಿಆರ್ ಎಸ್ ಅಲ್ಲದೆ, ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಕೂಡಾ ಪಾಲಿಕೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಸೆಣಸಾಟ ನಡೆಸಿದ್ದವು. ಡಿ.1ರಂದು ಶೇ 46ರಷ್ಟು ಮತದಾನ ದಾಖಲಾಗಿತ್ತು. ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ.

ಟಿಆರ್ ಎಸ್ ನೂರಕ್ಕೂ ಅಧಿಕ ಸ್ಥಾನ ಗಳಿಸಲಿದೆ
ಟಿಆರ್ ಎಸ್ ನೂರಕ್ಕೂ ಅಧಿಕ ಸ್ಥಾನ ಗಳಿಸಲಿದೆ. ಬಿಜೆಪಿಯ ದೊಡ್ಡ ನಾಯಕರು ಬಂದು ಸುಳ್ಳು ಆಶ್ವಾಸನೆ ನೀಡಿ ಹೋಗಿದ್ದಾರೆ. ಹೈದರಾಬಾದ್ ಜನರು ಸುಳ್ಳನ್ನು ನಂಬದೆ ಕೆಸಿಆರ್ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂಬುದು ಸಂತೋಷದ ಸಂಗತಿ ಎಂದು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಪುತ್ರಿ ಕೆ ಕವಿತಾ ಪ್ರತಿಕ್ರಿಯಿಸಿದ್ದಾರೆ. ಕಳೆದ ಬಾರಿ 99 ಸ್ಥಾನ ಗಳಿಸಿದ್ದ ಟಿಆರ್ ಎಸ್ ಈ ಬಾರಿ ಎಕ್ಸಿಟ್ ಪೋಲ್ ಗಳಲ್ಲಿ ಸರಾಸರಿ 75ಪ್ಲಸ್ ಗಳಿಸಬಹುದು ಎಂಬ ವರದಿ ಬಂದಿದೆ. ಆದರೆ, ಫಲಿತಾಂಶದ ದಿನದ ಟ್ರೆಂಡ್ ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications