ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ಟೆಕ್ಕಿ ವಿಷ್ಯ ಮುಚ್ಚಿಟ್ಟಿದ್ದೇಕೆ?

By Mahesh
|
Google Oneindia Kannada News

ಹೈದರಾಬಾದ್, ಅ.23: ಇಲ್ಲಿನ ಯುವ ಮಹಿಳಾ ಟೆಕ್ಕಿ ಮೇಲೆ ಇಬ್ಬರು ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿರುವ ಘಟನೆಯನ್ನು ಟೆಕ್ಕಿ ಬಚ್ಚಿಡಲು ಯತ್ನಿಸಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ. ಕಿಡ್ನಾಪ್ ಹಾಗೂ ಅತ್ಯಾಚಾರದಿಂದ ಯುವತಿ ಬೆಚ್ಚಿದ್ದಳು ಹೀಗಾಗಿ ವಿಷಯವನ್ನು ಪೊಲೀಸರ ಮುಂದೆ ಮೊದಲಿಗೆ ಹೇಳಿಕೊಳ್ಳಲಿಲ್ಲ ಎನ್ನಲಾಗಿದೆ.

ನಗರದ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರುವ ಮಹಿಳೆಯೊಬ್ಬರನ್ನು ಆರೋಪಿಗಳಾದ ಸತೀಶ್ ಮತ್ತು ವೆಂಕಟೇಶ್ವರಲು ಎಂಬವರು ಸತತ ಆರು ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯಕ್ಕೊಳಪಡಿಸಿದ್ದರು. ಇಬ್ಬರ ಪೈಕಿ ಸತೀಶ್ ಕಾರು ಡ್ರೈವರ್ ಆಗಿದ್ದು ಇಬ್ಬರು 25 ವರ್ಷ ವಯೋಮಿತಿಯವರಾಗಿದ್ದಾರೆ.

ಶನಿವಾರ ರಾತ್ರಿ ಶಾಪಿಂಗ್ ಮುಗಿಸಿಕೊಂಡು ಮನೆಗೆ ತೆರಳುವಾಗ ಮಾದಾಪುರ್ ಓಪನ್ ಮೈಂಡ್ ಸ್ಪೇಸ್ ಶಾಲೆ ಬಳಿ ಈ ದುರ್ಘಟನೆ ನಡೆದಿತ್ತು. ಘಟನೆ ನಡೆಯುವುದಕ್ಕೂ ಮುನ್ನ ಟೆಕ್ಕಿ ಬೆಂಗಳೂರಿನಲ್ಲಿರುವ ತನ್ನ ಭಾವಿ ಪತಿ ಜತೆ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕಳೆದೆರಡು ದಿನಗಳಿಂದ ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು ಈ ಪ್ರಕರಣದ ಸತ್ಯಾಸತ್ಯತೆ ಹೊರಹಾಕಿದ್ದಾರೆ. ಸೈಬರಾಬಾದಿನ ಪೊಲೀಸ್ ಆಯುಕ್ತ ಸಿವಿ ಆನಂದ್ ಅವರು ಸುದ್ದಿಗೋಷ್ಠಿ ನಡೆಸಿ ವಿವರಿಸಿದ್ದಾರೆ.

ಗೊಂದಲಮಯ ಕೇಸ್

ಗೊಂದಲಮಯ ಕೇಸ್

22 ವರ್ಷದ ಮಹಿಳಾ ಸಾಫ್ಟ್ ವೇರ್ ಇಂಜಿನಿಯರ್ ಅವರು ಅತ್ಯಾಚಾರ ಹಾಗೂ ಕಿಡ್ನಾಪ್ ನಿಂದ ಸ್ವಲ್ಪದರಲ್ಲೇ ಬಚಾವಾದರು ಎಂದು ಸ್ಥಳೀಯ ಮಾಧ್ಯಮ ಹಾಗೂ ಪ್ರಮುಖ ಪತ್ರಿಕೆಗಳಲ್ಲಿ ಈ ಮುಂಚೆ ವರದಿಯಾಗಿತ್ತು.ಮಾಧ್ಯಮಗಳಿಗೆ ಈ ರೀತಿ ಮಾಹಿತಿ ನೀಡಿದ್ದರು.

ಗಾಚಿಬೌಲಿ ಪ್ರದೇಶದ ಸಮೀಪ 22 ವರ್ಷದ ಯುವ ಟೆಕ್ಕಿಯೊಬ್ಬರನ್ನು ಇಬ್ಬರು ದುಷ್ಕರ್ಮಿಗಳು ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಈ ಪೈಕಿ ಒಬ್ಬ ಕ್ಯಾಬ್ ಡ್ರೈವರ್ ಆಗಿದ್ದು ಅವನು ಆಕೆ ಮೇಲೆ ರೇಪ್ ಮಾಡುವ ಉದ್ದೇಶ ಹೊಂದಿದ್ದ ನಾನು ಬಚಾವಾದೆ ಎಂದು ಮೊದಲಿಗೆ ಯುವತಿ ದೂರು ನೀಡಿದ್ದಳು. ಆದರೆ, ಕೇಸ್ ಬುಕ್ ಮಾಡಬೇಡಿ ಎಂದಿದ್ದಳು

ಯಾರದು ಕಾರು?

ಯಾರದು ಕಾರು?

24/7 ಟ್ರಾನ್ಸ್ ಲೈನ್ ಟ್ರಾವೆಲ್ಸ್ ಹೆಸರಿನ ಎಪಿ 09 TVA 2762 ನೋಂದಣಿ ಸಂಖ್ಯೆಯ ಈ ಕ್ಯಾಬ್ ಸ್ಥಳೀಯ ಬಿಲ್ಡರ್ ಒಬ್ಬರದ್ದ್ದು ಎಂದು ತಿಳಿದು ಬಂದಿದೆ. ಆತನ ಬಳಿ ಸತೀಶ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಘಟನೆ ನಡೆದ ದಿನ ವೆಂಕಟೇಶ್ವರಲು ಜತೆ ಪ್ರಯಾಣಿಸುತ್ತಿದ್ದಾಗ ಸಂತ್ರಸ್ತ ಯುವತಿಗೆ ಡ್ರಾಪ್ ನೀಡುವ ನೆಪದಲ್ಲಿ ಇಬ್ಬರು ಪ್ರಯಾಣಿಕ ಹಾಗೂ ಡ್ರೈವರ್ ರೀತಿ ನಟಿಸಿ ಯುವತಿಗೆ ನಂಬಿಕೆ ಹುಟ್ಟುವಂತೆ ಮಾಡಿದ್ದಾರೆ.

ಆದರೆ ಗೌಲಿದೊಡ್ಡಿ ಬಳಿ ಹಾಸ್ಟೆಲ್ ಕಡೆಗೆ ತೆರಳ ಬೇಕಿದ್ದ ಕಾರು ಎಡಕ್ಕೆ ತಿರುಗಿ ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ಆದರೂ ಯುವತಿಗೆ ದಿಕ್ಕು ತಪ್ಪಿರುವುದು ಗೊತ್ತಾಗಿಲ್ಲ.

ಕೆಟ್ಟ ಮೇಲೆ ಬುದ್ಧಿ ಬಂತೇ?

ಕೆಟ್ಟ ಮೇಲೆ ಬುದ್ಧಿ ಬಂತೇ?

ಕಾರು ಹತ್ತಿದ ಕ್ಷಣದಿಂದ ಬೆಂಗಳೂರಿನಲ್ಲಿರುವ ತನ್ನ ಬಾಯ್ ಫ್ರೆಂಡ್ ಜತೆ ಚಾಟ್ ಮಾಡುತ್ತಿದ್ದಳು ಎನ್ನಲಾಗಿದೆ. ಬಾಯ್ ಫ್ರೆಂಡ್ ಜತೆ ಶೀಘ್ರದಲ್ಲೇ ಮದುವೆಯಾಗುವ ಕನಸು ಕಾಣುತ್ತಿದ್ದ ಯುವತಿಗೆ ತಾನು ದಿಕ್ಕು ತಪ್ಪಿದ್ದೇನೆ ಎಂದು ಅರಿವಾಗಿದ್ದು ಕಾರು ಔಟರ್ ರಿಂಗ್ ರೋಡ್ ಮೇಲ್ಸೇತುವೆ ಏರಿದ ಮೇಲೆ.

ಡ್ರೈವರ್ ದಬಾಯಿಸಿದ ಯುವತಿಗೆ ವೆಂಕಟೇಶ್ವರಲು ಕೂಡಾ ಸಾಥ್ ನೀಡಿ ಸರಿಯಾದ ದಾರಿ ಹುಡುಕುವಂತೆ ನಟಿಸಿದ್ದಾನೆ. ಆದರೆ, ಬಿರ್ಲಾ ಓಪನ್ ಮೈಂಡ್ ಸ್ಪೇಸ್ ಬಳಿ ಬಂದಾಗ ಕಾರು ನಿಂತಿದೆ. ಆಲ್ಲಿಂದ ಮುಂದೆ ನಡೆದಿದ್ದು ಘೋರ ದುರಂತ

ದೂರು ಪ್ರತಿ ದೂರು

ದೂರು ಪ್ರತಿ ದೂರು

ದಿಕ್ಕು ತಪ್ಪಿದ ಕ್ಷಣವೇ ಎಚ್ಚೆತ್ತುಕೊಂಡು ಯುವತಿ ತನ್ನ ಗೆಳೆಯನಿಗೆ ಕರೆ ಮಾಡಿ, ಚಾಟ್ ಮೆಸೇಜ್ ಮಾಡಿ ಪರಿಸ್ಥಿತಿ ವಿವರಿಸಿದ್ದಾಳೆ. ಆದರೆ, ಯಾವ ಏರಿಯಾ ಎಂದು ಹೇಳುವಷ್ಟರಲ್ಲಿ ಡ್ರೈವರ್ ಸತೀಶ್ ಮೊಬೈಲ್ ಕಿತ್ತುಕೊಂಡಿದ್ದಾನೆ.

ನಂತರ ಸತತ 6 ಗಂಟೆ ಕಾಲ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ತಿಂಗಳ ಮೂರು ದಿನಗಳ ನೋವು ಅನುಭವಿಸುತ್ತಿದ್ದ ಯುವತಿಗೆ ಅತ್ಯಾಚಾರ ಇನ್ನಷ್ಟು ಹಿಂಸೆ ಕೊಟ್ಟಿದೆ.

ದಿಗ್ಭ್ರಮೆಗೆ ಒಳಗಾದ ಯುವತಿ ಪೊಲೀಸರ ಹತ್ತಿರ ದೂರು ಕೊಡಲು ಹಿಂಜರೆದಿದ್ದಾಳೆ. ಹೀಗಾಗಿ ಪೊಲೀಸರು ಕೂಡಾ ವೈದ್ಯಕೀಯ ಪರೀಕ್ಷೆ ನಡೆಸದ ಹೊರತು ದೂರು ದಾಖಲಿಸುವುದಿಲ್ಲ ಎಂದಿದ್ದಾರೆ. ಅಯುಕ್ತ ಅನಂದ್ ಮಧ್ಯ ಪ್ರವೇಶಿಸಿದ ನಂತರ ಅತ್ಯಾಚಾರ ನಡೆದಿರುವುದು ಗೊತ್ತಾಗಿ, ಆರೋಪಿಗಳ ಬಂಧನವಾಗಿದೆ.

English summary
In a new twist to the 'kidnap attempt' on a 22-year-old techie in Hyderabad, it has been established that the girl was kidnapped and gang raped. But the girl out of fear kept the gang rape a secret.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X