ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಕಾಡಲಿದೆ ಪ್ರಳಯಾಂತಕ Phailin Cyclone

By Srinath
|
Google Oneindia Kannada News

ಹೈದರಾಬಾದ್‌/ಭುವನೇಶ್ವರ, ಅ.12: ಇಂದು ಶನಿವಾರ ಸಂಜೆಯ ವೇಳೆಗೆ ಭಾರತದ ಪೂರ್ವ ಕರಾವಳಿಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುವ ಲಕ್ಷಣಗಳು ಹೆಚ್ಚಾಗಿವೆ ಎಂದು ಹವಾಮಾನ ಇಲಾಖೆ ವರದಿ ಸ್ಪಷ್ಟಪಡಿಸಿದೆ. ಇದು ಅಮೆರಿಕವನ್ನು ಇತ್ತೀಚೆಗೆ ಅಲ್ಲಾಡಿಸಿದ ರುದ್ರಭೀಕರ 'ಕತ್ರೀನಾ ಚಂಡಮಾರುತ'ಕ್ಕಿಂತಲೂ ಭೀಕರವಾಗಿ ಕಾಡಲಿದೆಯಂತೆ.

ಈ ಚಂಡಮಾರುತಕ್ಕೆ ಅದಾಗಲೇ 'ಫೈಲಿನ್‌' ಎಂದು ನಾಮಕರಣ ಮಾಡಲಾಗಿದ್ದು, ಥಾಯ್ಲೆಂಡ್ ಭಾಷೆಯಲ್ಲಿ ಇದಕ್ಕೆ 'ಇಂದ್ರನೀಲ ಮಣಿ' ಎಂಬರ್ಥವಿದೆ. ಥಾಯ್ಲೆಂಡ್ ಬಳಿಯೇ ಇದು ಹುಟ್ಟುಪಡೆದಿರುವುದರಿಂದ ಆ ಹೆಸರು ಪಡೆದುಕೊಂಡಿದೆ.

ಇನ್ನು ಇದರಿಂದ ಸಂಭವಿಸಬಹುದಾದ ಭೀಕರತೆ ಇಂತಿಷ್ಟೇ ಎಂದು ಇನ್ನೂ ಹೇಳಲಾಗದಿದ್ದರೂ ಅನಾಹುತ ಮಾತ್ರ ಭಾರಿ ಪ್ರಮಾಣದಲ್ಲಿರುತ್ತದೆ ಎಂದು ಎಚ್ಚರಿಸಲಾಗಿದೆ. ಆದರೆ ಇದು ಬೆಂಗಳೂರು ಸೇರಿದಂತೆ ಕರ್ನಾಟಕದ ಯಾವುದೇ ಭಾಗದ ಮೇಲೆ ತೀವ್ರ ಪರಿಣಾಮ ಉಂಟುಮಾಡುವುದಿಲ್ಲ ಎಂದು ಆಶಿಸಲಾಗಿದ್ದು ಒಂದಷ್ಟು ಮಳೆಯಾಗುವ ನಿರೀಕ್ಷೆಯಿದೆ.

ಈಗಾಗಲೇ ಮೊದಲು ಒಡಿಶಾ ನಂತರ ಆಂಧ್ರಪ್ರದೇಶದಲ್ಲಿ ಕಾಲಿಟ್ಟಿರುವ 'Phailin' ಸಂಜೆ ವೇಳೆಗೆ ಭೀಕರವಾಗುವುದು ಖಚಿತ ಎಂಬುದು ಅಧಿಕಾರಿಗಳ ಸ್ಪಷ್ಟೋಕ್ತಿ. ಹಾಗಾಗಿ ಆ ಎರಡೂ ರಾಜ್ಯಗಳು ಯುದ್ಧಸನ್ನದ್ಧ ರೀತಿಯಲ್ಲಿ ಕಟ್ಟೆಚ್ಚರದಲ್ಲಿವೆ.

Cyclone Phailin

Cyclone Phailin

ಗಂಟೆಗೆ 220 ಕಿ.ಮೀ. ವೇಗದಲ್ಲಿ ಬರುತ್ತಿರುವ 'ಫೈಲಿನ್‌' ಚಂಡಮಾರುತವು ಆಗಾಗ್ಗೆ ತನ್ನ ವೇಗವನ್ನು ಹೆಚ್ಚು-ಕಡಿಮೆ ಮಾಡುತ್ತಿದೆ. ಇದರ ವೇಗ ಹೆಚ್ಚಳವಾದರೂ ಕೂಡ ಯಾವುದೇ ಪರಿಣಾಮ ಆಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಇದು 1999ರ ನಂತರದ ಭಾರತದ ಅತಿಭೀಕರ ಚಂಡಮಾರುತವಾಗುವ ಭೀತಿ ಇದೆ.

Indian Meteorological Department (IMD)

Indian Meteorological Department (IMD)

ಚಂಡಮಾರುತವು ಪ್ರಚಂಡ ವೇಗದಿಂದ ಬಂಗಾಳ ಕೊಲ್ಲಿಯ ಕರಾವಳಿಗೆ ಮುನ್ನುಗ್ಗುತ್ತಿದೆ. ಶನಿವಾರ ಸಂಜೆ 6 ಗಂಟೆಗೆ ಆಂಧ್ರಪ್ರದೇಶದ ಕಳಿಂಗಪಟ್ಟಣ ಮತ್ತು ಒಡಿಶಾದ ಗೋಪಾಲಪುರದ ನಡುವೆ ಅಪ್ಪಳಿಸಲಿದೆ. ಶುಕ್ರವಾರ ಗಂಟೆಗೆ ಸುಮಾರು 220 ಕಿ.ಮೀ. ವೇಗದಲ್ಲಿ ಬೀಸುತ್ತಿರುವ 'ಫೈಲಿನ್‌' ಒಡಿಶಾ ಮತ್ತು ಆಂಧ್ರದ ಕರಾವಳಿಗೆ ಅಪ್ಪಳಿಸುವಾಗ ತಾಸಿಗೆ 265 ಕಿ.ಮೀ. ವೇಗ ಪಡೆದುಕೊಳ್ಳುವ ಭೀತಿಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Hurricane Katrina

Hurricane Katrina

ಕತ್ರೀನಾ 5ನೇ ದರ್ಜೆ (ಅತ್ಯಂತ ಅಪಾಯಕಾರಿ- ಗಂಟೆಗೆ 280-300 ಕಿ.ಮೀ. ವೇಗ) ಚಂಡಮಾರುತ ಆಗಿತ್ತು. ಈಗ ಬೀಸುತ್ತಿರುವ 'ಫೈಲಿನ್‌' ಅದಕ್ಕಿಂತ ಸ್ವಲ್ಪ ಕಮ್ಮಿ ಅಪಾಯಕಾರಿಯಾದ 4ನೇ ದರ್ಜೆಯ (ಗಂಟೆಗೆ 250-260 ಕಿ.ಮೀ. ವೇಗ) ಚಂಡಮಾರುತವಾಗಿದೆ. ಆದರೆ ಪರಿಣಾಮ ಕತ್ರೀನಾಗಿಂತ ಹೆಚ್ಚು. ವಿದೇಶಿ ಮಾಧ್ಯಮಗಳು ಫೈಲಿನ್‌ ನನ್ನು ಕತ್ರೀನಾ ಜತೆಗೆ ಹೋಲಿಸಿವೆ.

260 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೆ ಎದುರು ಸಿಕ್ಕಿದೆಲ್ಲ ಧರಾಶಾಯಿಯಾಗಲಿದೆ. ಜತೆಗೆ ದಿನಕ್ಕೆ ಸರಾಸರಿ 25 ಸೆಂ.ಮೀ.ಗಿಂತಲೂ ಅಧಿಕ ಮಳೆ ಸುರಿಯುವ ಸಾಧ್ಯತೆಯಿರುವುದರಿಂದ ಪ್ರವಾಹದ ಅಪಾಯವೂ ಇದೆ. ಸಮದ್ರದಲ್ಲಿ ಮೂರು ಮೀಟರ್‌ ಎತ್ತರದ ತೆರೆಗಲೇಳಲಿವೆ.

IMD Director-General LS Rathore

IMD Director-General LS Rathore

ಆಂಧ್ರ ಮತ್ತು ಒಡಿಶಾ ಸರ್ಕಾರಗಳು ಫೈಲಿನ್‌ ಎದುರಿಸಲು ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಟ್ಟೆಚ್ಚರದಿಂದ ಇರಲು ಸೂಚಿಸಿವೆ. ಒಡಿಶಾ ಮತ್ತು ಆಂಧ್ರಪ್ರದೇಶದ ಅಪಾಯಕಾರಿ ಪ್ರದೇಶಗಳಲ್ಲಿರುವ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 'ಫೈಲಿನ್‌ ಅತ್ಯಂತ ಉಗ್ರ ಚಂಡಮಾರುತವಾಗಿದೆ. ಭಾರಿ ಅಪಾಯ ತರುವ ಸಂಭವವಿದೆ' ಎಂದು ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥ ಡಾ| ಎಲ್ಎಸ್ ರಾಠೊಡ್‌ ಹೇಳಿದ್ದಾರೆ.

Phailin- strongest cyclone ever in Indian Ocean

Phailin- strongest cyclone ever in Indian Ocean

ಆಂಧ್ರದ ಶ್ರೀಕಾಕುಲಂ, ವಿಜಯನಗರ, ವಿಶಾಖಪಟ್ಟಣ ಜಿಲ್ಲೆಗಳಿಂದ 64,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸಲಾಗಿದೆ. ಫೈಲಿನ್‌ ಕರಾವಳಿ ದಾಟಿ ಬರುವಾಗ ಭೀಕರ ಸ್ವರೂಪ ತಾಳಲಿದೆ ಹಾಗೂ ಅದರ ವೇಗ ತಾಸಿಗೆ 240 ಕಿ. ಮೀ. ಇರಬಹುದು ಎಂದು ಆಂಧ್ರದ ಕಂದಾಯ ಸಚಿವ ಎನ್‌. ರಘುವೀರ ರೆಡ್ಡಿ ಹೇಳಿದ್ದಾರೆ. ಪ್ರಸ್ತುತ ಫೈಲಿನ್‌ ವಿಶಾಖಪಟ್ಟಣದಿಂದ 500 ಕಿ. ಮೀ. ದೂರದಲ್ಲಿದೆ.

Global Disaster Alert and Coordination System (GDACS)

Global Disaster Alert and Coordination System (GDACS)

ಒಡಿಶಾದ ಗಂಜಾಂ, ಪುರಿ, ಖುರ್ದಾ, ಜಗತ್‌ಸಿಂಗ್‌ಪುರ ಜಿಲ್ಲೆಗಳು ಚಂಡಮಾರುತದ ಹೊಡೆತಕ್ಕೆ ಹೆಚ್ಚು ಪ್ರಭಾವಕ್ಕೊಳಗಾಗುವ ಅಪಾಯವಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಒಡಿಶಾ ಸರ್ಕಾರ, '1999ರಲ್ಲಿ 10 ಸಾವಿರಕ್ಕೂ ಹೆಚ್ಚು ಜನರನ್ನು ಬಲಿಪಡೆದ ಚಂಡಮಾರುತದಿಂದ ನಾವು ಪಾಠ ಕಲಿತಿದ್ದೇವೆ. ಈಗಿನಿಂದಲೇ ತೆರವು ಮತ್ತು ರಕ್ಷಣಾ ಕಾರ್ಯ ಆರಂಭಿಸಲಾಗಿದ್ದು 'ಶೂನ್ಯ ಸಾವು-ನೋವು' ನಮ್ಮ ಗುರಿಯಾಗಿದೆ' ಎಂದು ಹೇಳಿದೆ. ಒಡಿಶಾದಲ್ಲಿ ಈಗಾಗಲೇ ಗಂಟೆಗೆ 65 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು ದಟ್ಟ ಮೋಡಗಳು ಮೇಳೈಸಿ ಮಳೆ ಆರಂಭವಾಗಿದೆ. ಒಡಿಶಾ ಸರ್ಕಾರ ತನ್ನ ಎಲ್ಲ 30 ಜಿಲ್ಲೆಗಳಲ್ಲಿ ಸರ್ಕಾರಿ ನೌಕರರಿಗೆ ನೀಡಿದ್ದ ನವರಾತ್ರಿ ರಜೆಯನ್ನು ರದ್ದುಗೊಳಿಸಿ ತುರ್ತು ಪರಿಹಾರ ಕಾರ್ಯಕ್ಕೆ ನಿಯೋಜಿಸಿದೆ.

ರೈಲು ಸಂಚಾರ ಏರುಪೇರು

ರೈಲು ಸಂಚಾರ ಏರುಪೇರು

ಭೀಕರ ಚಂಡಮಾರುತದ ಹಿನ್ನೆಲೆಯಲ್ಲಿ ಪೂರ್ವ ರೈಲ್ವೆ ಮತ್ತು ದಕ್ಷಿಣ ಮಧ್ಯ ರೈಲ್ವೆಗಳು ಹಲ ರೈಲುಗಳ ಸಂಚಾರವನ್ನು ರದ್ದುಪಡಿಸಲು ಅಥವಾ ನಿಯಂತ್ರಿಸಲು ನಿರ್ಧರಿಸಿದ್ದು, ದಸರಾ ಹಬ್ಬದ ಸಂದರ್ಭದ ಪ್ರಯಾಣಿಕರಿಗೆ ತೊಂದರೆಯಾಗುವ ಆತಂಕ ಎದುರಾಗಿದೆ.

ಸೇನೆ ಸನ್ನದ್ಧ

ಸೇನೆ ಸನ್ನದ್ಧ

ರಕ್ಷಣಾ ಸಚಿವ ಎ. ಕೆ. ಆ್ಯಂಟನಿ ಸೂಚನೆ ಮೇರೆಗೆ ಸೇನೆ, ನೌಕಾಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿಭಾವಣೆ ಪಡೆ ಸಿಬ್ಬಂದಿಗಳು ಈಗಾಗಲೇ ಕರಾವಳಿ ಜಿಲ್ಲೆಗಳಿಗೆ ತಲುಪಿ ಫೈಲಿನ್‌ ಎದುರಿಸಲು ಸಿದ್ಧರಾಗಿದ್ದಾರೆ. ರಾಯಪುರ, ನಾಗಪುರ, ಜಗದಾಳಪುರ,ಬರಾಕ್‌ಪುರ, ರಾಂಚಿ ಮತ್ತು ಗ್ವಾಲಿಯರ್‌ ಮತ್ತಿತರ ವಾಯನೆಲೆಗಳಲ್ಲಿ ವಾಯುಪಡೆಯ ವಿಮಾನಗಳನ್ನು ಸಿದ್ಧವಾಗಿಡಲಾಗಿದೆ. ಎರಡು ಸಿ130ಜೆ ವಿಮಾನಗಳು, 18 ಹೆಲಿಕಾಪ್ಟರುಗಳು, 2 ಎಎನ್‌-32 ವಿಮಾನಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲುದ್ದೇಶಿಸಲಾಗಿದೆ. 1999ರಲ್ಲಿ ಒಡಿಶಾದಲ್ಲಿ ಸುಮಾರು 10,000 ಜನರನ್ನು ಬಲಿತೆಗದುಕೊಂಡ ಭೀಕರ ಚಂಡಮಾರುತದಷ್ಟೇ ಬಿರುಸು ಫೈಲಿನ್‌ ಗಿದೆ.

ಸೂಪರ್‌ ಸೈಕ್ಲೋನ್‌ ಹಾಗೆಂದರೇನು?

ಸೂಪರ್‌ ಸೈಕ್ಲೋನ್‌ ಹಾಗೆಂದರೇನು?

ಚಂಡಮಾರುತವು ಸುರುಳಿ ಸುತ್ತುತ್ತ ಬೀಸುತ್ತದೆ. ಸುರುಳಿಯ ಮಧ್ಯದಲ್ಲಿ ಕಡಮೆ ಒತ್ತಡ ಇರುತ್ತಿದ್ದು, ಇದರಿಂದ ಭಾರಿ ಪ್ರಮಾಣದ ಬಿರುಗಾಳಿ ಸೃಷ್ಟಿಯಾಗಿ ಪ್ರಚಂಡವಾದ ಮಳೆಯನ್ನು ಸುರಿಸುತ್ತದೆ. ಸಮುದ್ರದ ವಿಶಾಲ ಮೇಲ್ಮೆ ಭಾಗದ ಬೆಚ್ಚನೆಯ ನೀರಿರುವ ಭಾಗದಲ್ಲಿ ಇದು ಹೆಚ್ಚಾಗಿ ಉಂಟಾಗುತ್ತದೆ. ಸಾಮಾನ್ಯ ಚಂಡಮಾರುತವು ಗಂಟೆಗೆ 90-100 ಕಿ.ಮೀ. ವೇಗದಲ್ಲಿ ಬೀಸುತ್ತ ಮಳೆ ಸುರಿಸುತ್ತದೆ. ಆದರೆ, 'ಸೂಪರ್‌ ಸೈಕ್ಲೋನ್‌' ಸುಮಾರು 250 ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಬೀಸುತ್ತದೆ.

ಇಷ್ಟಕ್ಕೂ 'ಫೈಲಿನ್‌' ಎಂದರೇನು?

ಇಷ್ಟಕ್ಕೂ 'ಫೈಲಿನ್‌' ಎಂದರೇನು?

ಚಂಡಮಾರುತಗಳನ್ನು ಸುಲಭವಾಗಿ ಹೆಸರಿನಿಂದ ಗುರುತಿಸುವ ಸಲುವಾಗಿ ಅವುಗಳಿಗೆ ನಾಮಕರಣ ಮಾಡಲಾಗುತ್ತದೆ. ಈಗ ಆಂಧ್ರ, ಒಡಿಶಾ ಕರಾವಳಿಗೆ ಅಪ್ಪಳಿಸಿರುವ ಚಂಡಮಾರುತಕ್ಕೆ 'ಫೈಲಿನ್‌' ಎಂಬ ಹೆಸರಿಡಲಾಗಿದೆ. ಫೈಲಿನ್‌ ಎಂದರೆ ಥಾಯ್ಲೆಂಡ್‌ ಭಾಷೆಯಲ್ಲಿ 'ಇಂದ್ರನೀಲ ಮಣಿ' ಎಂದರ್ಥ. ಥಾಯ್ಲೆಂಡ್‌ ಬಳಿಯೇ ಈ ಚಂಡಮಾರುತದ ಉಗಮವಾಗಿದ್ದರಿಂದ ಆ ದೇಶದ ಭಾಷೆಯಲ್ಲಿ ನಾಮಕರಣ ಮಾಡಲಾಗಿದೆ.

1999ರಲ್ಲೂ 10 ಸಾವಿರ ಮಂದಿ ಸತ್ತಿದ್ದರು..

1999ರಲ್ಲೂ 10 ಸಾವಿರ ಮಂದಿ ಸತ್ತಿದ್ದರು..

1999ರ ಅಕ್ಟೋಬರ್‌ ಕೊನೆಯ ವಾರದಲ್ಲೂ ಒಡಿಶಾ ಕರಾವಳಿಗೆ ಇಂಥದ್ದೇ 'ಸೂಪರ್‌ ಚಂಡಮಾರುತ' ಬೀಸಿತ್ತು. ಒಡಿಶಾ ಪ್ರವೇಶಿಸುವ ಮುನ್ನ ಮಲಯ ಪರ್ಯಾಯ ದ್ವೀಪ ಭಾಗದಲ್ಲಿ ಗಂಟೆಗೆ 305 ಕಿ.ಮೀ. ವೇಗದಲ್ಲಿ ಬೀಸಿದ್ದ ಚಂಡಮಾರುತ ಭಾರತಕ್ಕೆ ಅಪ್ಪಳಿಸುವ ವೇಳೆ 250-260 ಕಿ.ಮೀ. ವೇಗದಲ್ಲಿತ್ತು. ಈ ಚಂಡಮಾರುತದ ವೇಳೆ ಒಡಿಶಾದಲ್ಲಿ ಸುಮಾರು 10 ಸಾವಿರ ಜನ ಪ್ರಾಣ ಕಳೆದುಕೊಂಡಿದ್ದರು. ಅನಧಿಕೃತ ಅಂಕಿ-ಅಂಶಗಳ ಪ್ರಕಾರ ಸಾವಿನ ಸಂಖ್ಯೆ 15 ಸಾವಿರ ಆಗಿತ್ತು. 2.75 ಲಕ್ಷ ಮನೆಗಳು ನಾಶವಾಗಿದ್ದವು. 16 ಲಕ್ಷ ಜನ ಬೀದಿಪಾಲಾಗಿದ್ದರೆ, 2 ಕೋಟಿ ಜನ ಬಾಧಿತರಾಗಿದ್ದರು.

English summary
Cyclone Phailin would be worse than Katrina US meteorologist warns. The weather office may be underestimating the severity of a cyclone which is hurtling towards the east coast, a meteorologist warned on Friday, adding that it could be worse than Hurricane Katrina which devastated parts of the United States in 2005. But both London-based Tropical Storm and the US Navy's Joint Typhoon Warning Centre forecast winds reaching 315 km per hour (195 mph) on landfall, classifying Phailin as a Category 5 storm - the most powerful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X