• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಶಂಕಿತರನ್ನು ಆಸ್ಪತ್ರೆ ದಿಗ್ಬಂಧನದಲ್ಲಿ ಇಟ್ಟರೂ ಸಾಮೂಹಿಕ ಪ್ರಾರ್ಥನೆ

|

ಹೈದ್ರಾಬಾದ್, ಏಪ್ರಿಲ್.02: ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಮಾರಕ ಸೋಂಕಿನ ಲಕ್ಷಣಗಳು ಕಂಡು ಬಂದ ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲಾಕ್ ಡೌನ್: ಬೆಳಗಾವಿಯಲ್ಲಿ ಮದ್ಯ ಸಿಗದಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

ಹೈದ್ರಾಬಾದ್ ನಲ್ಲಿ ಇರುವ ಗಾಂಧಿ ಆಸ್ಪತ್ರೆಯಲ್ಲಿ ದಿಗ್ಬಂಧನದಲ್ಲೇ ಇರಿಸಿದ ಶಂಕಿತರು ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವರ್ತಿಸುತ್ತಿರುವುದಕ್ಕೆ ಇದೀಗ ಸಾಕ್ಷ್ಯ ಲಭ್ಯವಾಗಿದೆ.

ಸಮಾಜದಲ್ಲಿ ಓಡಾಡಿಕೊಂಡಿದ್ದಲ್ಲಿ ಸಾರ್ವಜನಿಕರಿಗೆ ಸೋಂಕು ಹರಡುವ ಅಪಾಯವಿರುತ್ತದೆ ಎಂಬ ಉದ್ದೇಶದಿಂದ ಶಂಕಿತರನ್ನು ದಿಗ್ಬಂಧನದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯೂ ಕೂಡಾ ಶಂಕಿತರು ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ.

ದಿಗ್ಬಂಧನಕ್ಕೆ ಒಳಗಾದ ಆಸ್ಪತ್ರೆಯಲ್ಲಿ ನಮಾಜ್:

ತೆಲಂಗಾಣದ ಹೈದ್ರಾಬಾದ್ ನಲ್ಲಿ ಇರುವ ಗಾಂಧಿ ಆಸ್ಪತ್ರೆಯಲ್ಲಿ ದಿಗ್ಬಂಧನಕ್ಕೆ ಒಳಗಾದ ಕೊರೊನಾ ವೈರಸ್ ಸೋಂಕಿತ ಶಂಕಿತರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ. ಅಕ್ಕಪಕ್ಕದಲ್ಲಿಯೇ ನಿಂತು ಪ್ರಾರ್ಥನೆ ಮಾಡಿದ್ದು, ನಿಯಮವನ್ನು ಉಲ್ಲಂಘಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಇನ್ನು, ರಾಜ್ಯದಲ್ಲಿ ಇದುವರೆಗೂ 6 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದರೆ, 127 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 14 ಮಂದಿ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

English summary
Coronavirus: Peoples Mass Prayer At Quarantine Center Of Hydrabad Gandhi Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X