ಭತ್ತ ಖರೀದಿಗೆ ಕೇಂದ್ರ ಹಿಂದೇಟು: ತೆಲಂಗಾಣ ಸಿಎಂ ಕೆಸಿಆರ್ ಎಚ್ಚರಿಕೆ

ಹೈದರಾಬಾದ್, ನವೆಂಬರ್ 18: "ರೈತರು ಬೆಳೆದ ಭತ್ತವನ್ನು ಖರೀದಿಸುವ ಭರವಸೆ ನೀಡಿ ಕೇಂದ್ರ ಸರ್ಕಾರ ಮೋಸ ಮಾಡುತ್ತಿದೆ. ಕೊಟ್ಟ ಮಾತಿನಂತೆ ಸರ್ಕಾರ ಭತ್ತ ಖರೀದಿ ಮಾಡುತ್ತಿಲ್ಲ,'' ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಆರೋಪಿಸಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಭತ್ತ ಖರೀದಿ ಮಾಡದೇ ಇದ್ದಲ್ಲಿ ರೈತರು ಕಷ್ಟಪಟ್ಟು ಬೆಳೆದ ಭತ್ತವನ್ನು ಬಿಜೆಪಿ ಕಚೇರಿಯಲ್ಲಿ ಸುರಿಯುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ರಾಜ್ಯ ಬಿಜೆಪಿಯವರು ಭತ್ತ ಬೆಳೆಯುತ್ತಾರೆ ಎಂದು ಹೇಳುತ್ತಾರೆ. ಆದರೆ ಕೇಂದ್ರ ಭತ್ತವನ್ನು ಖರೀದಿಸುತ್ತಿಲ್ಲ. ಇಬ್ಬರು ರಾಜಕೀಯ ಆಟವಾಡುತ್ತಿದ್ದಾರೆ. ನೀವು ಖರೀದಿಸದಿದ್ದರೆ ನಾವು ಬಂದು ಬಿಜೆಪಿ ಕಚೇರಿಗೆ ಭತ್ತ ಸುರಿಯುತ್ತೇವೆ ಎಂದು ಅವರು ಸಂಪುಟ ಸಹೋದ್ಯೋಗಿಗಳು ಮತ್ತು ಇತರರೊಂದಿಗೆ ಪ್ರತಿಭಟನೆ ನಡೆಸಿದರು. ಎನ್‌ಡಿಎ ಸರ್ಕಾರದ ರೈತ ವಿರೋಧಿ ಧೋರಣೆ ಮತ್ತು ಭತ್ತ ಸಂಗ್ರಹಣೆಯಲ್ಲಿ ಸಹಾಯಕಾರಿಯಲ್ಲದ ನಿಲುವಿನ ವಿರುದ್ಧ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕರು ಇಂದು ಪ್ರತಿಭಟನೆ ಮಾಡಿದರು.

ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಕೆ.ಚಂದ್ರಶೇಖರ್ ರಾವ್ ಅವರು ಭತ್ತ ಖರೀದಿಗೆ ಸಂಬಂಧಿಸಿದಂತೆ ಕೇಂದ್ರವು ತನ್ನ ನೀತಿಯನ್ನು ಪ್ರಕಟಿಸಬೇಕೆಂದು ಒತ್ತಾಯಿಸಿ ಗುರುವಾರ ಧರಣಿ ಕುಳಿತು ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದಿರಾ ಪಾರ್ಕ್‌ನಲ್ಲಿ ನಡೆದ 'ಮಹಾ ಧರಣಿ'ಯಲ್ಲಿ ಸಿಎಂ ಜೊತೆಗೆ ರಾಜ್ಯಾದ್ಯಂತ ಸಚಿವರು, ಶಾಸಕರು, ಎಂಎಲ್‌ಸಿಗಳು, ಸಂಸದರು ಮತ್ತು ಇತರ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

Central reluctance to buy paddy: Telangana CM Warning

ಕಳೆದ ವರ್ಷ ಕೇಂದ್ರವು ಮುಂಗಾರು ಅವಧಿಯಲ್ಲಿ ಉತ್ಪಾದನೆಯಾದ ಶೇ.78 ರಷ್ಟು ಬೆಳೆಗಳನ್ನು ಸಂಗ್ರಹಿಸಿತ್ತು. ಈ ವರ್ಷ ಈ ಪ್ರಮಾಣ ಶೇ 59ರಷ್ಟಿದೆ. ರಾಜ್ಯದಲ್ಲಿ 55.75 ಲಕ್ಷ ಮೆಟ್ರಿಕ್ ಟನ್ ಭತ್ತ ಉತ್ಪಾದನೆಯಾಗಿದ್ದು, 32.66 ಲಕ್ಷ ಮೆಟ್ರಿಕ್ ಟನ್ ಮಾತ್ರ ಖರೀದಿ ಮಾಡಲಾಗಿದೆ. ಆದರೆ 40 ಲಕ್ಷ ಮೆಟ್ರಿಕ್ ಟನ್ ಖರೀದಿಸುವುದಾಗಿ ಕೇಂದ್ರ ಹೇಳಿತ್ತು. ಆದರೆ ರೈತರು 90 ಪ್ರತಿಶತದಷ್ಟು ಉತ್ಪನ್ನಗಳನ್ನು ತೆಗೆದುಕೊಳ್ಳಬೇಕೆಂದು ಬಯಸುತ್ತಾರೆ. ಅಲ್ಲದೆ 5 ಲಕ್ಷ ಮೆಟ್ರಿಕ್ ಟನ್ ರಬಿ ಭತ್ತದ ಖರೀದಿಯೂ ಬಾಕಿ ಇದೆ.

ಈ ವೇಳೆ ರಾವ್ 50 ದಿನಗಳ ಹಿಂದೆ ರಾಜ್ಯದಿಂದ ಭತ್ತ ಖರೀದಿಗೆ ಗುರಿ ನಿಗದಿಪಡಿಸುವಂತೆ ಆಹಾರ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದೆ ಎಂದರು. ಆದರೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದರು. ಈ ಕುರಿತು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದೇನೆ ಎಂದರು.

"50 ದಿನಗಳ ಕಾಲ ಅವರು ನಮ್ಮ ಮನವಿಯನ್ನು ನಿರ್ಲಕ್ಷಿಸಿದ್ದಾರೆ. ನಾವು ಈ ಹಿಂದೆ ತೆಲಂಗಾಣ ಹೋರಾಟದ ಸಮಯದಲ್ಲಿ ಪೋಸ್ಟ್‌ಗಳನ್ನು ಎಸೆದಿದ್ದೇವೆ. ನಾವು ಇದರಲ್ಲಿ ನಾಯಕತ್ವವನ್ನು ತೆಗೆದುಕೊಳ್ಳುತ್ತೇವೆ" ಎಂದು ಹೈದರಾಬಾದ್‌ನಲ್ಲಿ ಪ್ರತಿಭಟನಾ ಸ್ಥಳದಲ್ಲಿ ಜನರನ್ನು ಉದ್ದೇಶಿಸಿ ಮುಖ್ಯಮಂತ್ರಿ ಹೇಳಿದರು.

"ಕೇಂದ್ರದ ನೀತಿಗಳಿಂದ ನಮ್ಮ ರೈತ ಸಮುದಾಯವು ಸಂಕಷ್ಟಕ್ಕೆ ಸಿಲುಕಬಹುದು ಎಂಬ ಕಾರಣಕ್ಕಾಗಿ ನಾವು ಈ ಹೋರಾಟವನ್ನು ಪ್ರಾರಂಭಿಸಿದ್ದೇವೆ. ನೀವು ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳಿ. ರೈತರ ರಕ್ಷಣೆಗೆ ಬನ್ನಿ. ಸರ್ವಾಧಿಕಾರದ ಕೃಷಿ ಕಾನೂನುಗಳನ್ನು ಹಿಂಪಡೆಯಿರಿ ಮತ್ತು ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ನೀತಿಯನ್ನು ಬದಲಾಯಿಸಿ ಎಂದು ನಾವು ಹೇಳುತ್ತೇವೆ. ಹೀಗಾಗದೇ ಇದ್ದಲ್ಲಿ ಈ ಕದನ ಇಂದಿಗೆ ಮುಗಿಯುವುದಿಲ್ಲ'' ಎಂದರು.

ಅಧಿಕಾರದಲ್ಲಿದ್ದರೂ ಭತ್ತ ಖರೀದಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಬಿಜೆಪಿ ನಿರಾಸಕ್ತಿ ತೋರುತ್ತಿದೆ ಎಂದು ಬಿಜೆಪಿಯನ್ನು ರಾವ್ ಟೀಕಿಸಿದ್ದಾರೆ. ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿ 2006 ರಲ್ಲಿ 51 ಗಂಟೆಗಳ ಕಾಲ ಪ್ರಧಾನಿ ಮೋದಿ ಪ್ರತಿಭಟನೆ ನಡೆಸಿದರು. ಸಿಎಂ, ಸಚಿವರು, ಶಾಸಕರು ಧರಣಿ ನಡೆಸಬೇಕಾದ ದಯನೀಯ ಪರಿಸ್ಥಿತಿ ಈ ದೇಶದಲ್ಲಿದೆ ಎಂಬ ಸಂದೇಶ ಇದರಿಂದ ಹೊರಬೀಳುತ್ತಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+