ರಾಷ್ಟ್ರಧ್ವಜಕ್ಕೆ ಅಗೌರವ, ನಟಿ ಮಲ್ಲಿಕಾ ಮೇಲೆ ಕೇಸ್

ಹೈದರಾಬಾದ್,ಸೆ.5 : ಬಾಲಿವುಡ್​ ನ ವಿವಾದಿತ ಹಾಟ್ ನಟಿ ಮಲ್ಲಿಕಾ ಶೆರಾವತ್​ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಮಲ್ಲಿಕಾ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣ ಇದಾಗಿದೆ. ಡರ್ಟಿ ಪಾಲಿಟಿಕ್ಸ್ ಚಿತ್ರದ ಪ್ರಚಾರಕ್ಕಾಗಿ ಬೆತ್ತಲೆ ದೇಹವನ್ನು ಮುಚ್ಚಲು ತ್ರಿವರ್ಣಧ್ವಜವನ್ನು ಮಲ್ಲಿಕಾ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಡರ್ಟಿ ಪಾಲಿಟಿಕ್ಸ್ ಚಿತ್ರದ ಪೋಸ್ಟರ್ ನಲ್ಲಿ ತ್ರಿವರ್ಣ ಧ್ವಜವನ್ನು ಬಟ್ಟೆಯಂತೆ ಮೈಮೇಲೆ ಸುತ್ತಿಕೊಂಡು ಪೋಸ್ ನೀಡಿರುವ ಮಲ್ಲಿಕಾಳನ್ನು ಕಂಡು ಕೆರಳಿದ ಸಾಮಾಜಿಕ ಕಾರ್ಯಕರ್ತ ಟಿ ಧನಗೋಪಾಲ್ ರಾವ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತ್ರಿವರ್ಣಧ್ವಜಕ್ಕೆ ಅಪಮಾನ ಮಾಡಿ ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ವಾದಿಸಿದ್ದರು. ಹೈದರಾಬಾದಿನ ಹೈಕೋರ್ಟ್ ಆಗಸ್ಟ್ ಮೊದಲ ವಾರದಲ್ಲಿ ನಟಿ ಮಲ್ಲಿಕಾ, ಚಿತ್ರದ ನಿರ್ಮಾಪಕ ಕೆಸಿ ಬೊಕಾಡಿಯಾ ಅವರಿಗೂ ನೋಟಿಸ್ ಜಾರಿ ಮಾಡಿತ್ತು. ಈಗ ಹೈದರಾಬಾದಿನ ಫಾಲೂಕುನಂ ಠಾಣೆಯಲ್ಲಿಮತ್ತೊಂದು ಪ್ರಕರಣ ದಾಖಲಾಗಿದೆ.[ರಾಷ್ಟ್ರಧ್ವಜಕ್ಕೆ ಅಪಮಾನ, ಮಲ್ಲಿಕಾಗೆ ನೋಟಿಸ್]

Case against Mallika Sherawat for insulting national flag

ರಾಷ್ಟ್ರೀಯ ಗೌರವ ಕಾಯ್ದೆ 1971ರ ಅನ್ವಯ ರಾಷ್ಟ್ರ ಧ್ವಜವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಹಾಗೂ ದೇಶಕ್ಕೆ ಅಪಮಾನ ಮಾಡುವುದು ಶಿಕ್ಷಾರ್ಹವಾಗುತ್ತದೆ. ಈ ನಿಯಮಗಳನ್ನು ಪರಿಗಣಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಮಹಮ್ಮದ್ ಅಬ್ದುಲ್ ಬಾರಿ ಹೇಳಿದ್ದಾರೆ.

ಖಾದೀರ್ ಹಾಗೂ ಸಮಿಯುದ್ದೀನ್ ಎಂಬ ವ್ಯಕ್ತಿಗಳು ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಟ್ಟಿಲೇರಿ ಡರ್ಟಿ ಪಾಲಿಟಿಕ್ಸ್ ಚಿತ್ರದ ಪ್ರಚಾರಕ್ಕೆ ಬಳಸಲಾದ ಪೋಸ್ಟರ್ ಗಳಲ್ಲಿ ಮಲ್ಲಿಕಾ ಶೆರಾವತ್ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಜರುಗಿಸಬೇಕಿದೆ ಎಂದು ಮನವಿ ಸಲ್ಲಿಸಿದ್ದರು.

ಡರ್ಟಿ ಪಾಲಿಟಿಕ್ಸ್ ಚಿತ್ರದ ಪಾತ್ರವರ್ಗದಲ್ಲಿ ಓಂ ಪುರಿ, ರಾಜ್ ಪಾಲ್ ಯಾದವ್ ಮುಂತಾದವರಿದ್ದಾರೆ. ಪ್ರಸ್ತುತ ರಾಜಕೀಯ ಸನ್ನಿವೇಶಗಳ ಸುತ್ತ ಕಥೆ ಸುತ್ತುತ್ತದೆ ಎನ್ನಲಾಗಿದೆ. ಮಲ್ಲಿಕಾ ಶೆರಾವತ್ ಅವರು ಅನೂಕಿ ದೇವಿ ಪಾತ್ರವನ್ನು ಚಿತ್ರದಲ್ಲಿ ಪೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+