ಪೆನಕೊಂಡ: ಕಂದಕಕ್ಕೆ ಬಸ್ ಉರುಳಿ 20 ಜನರ ಸಾವು

ಬೆಂಗಳೂರು, ಜ, 7: ಆಂಧ್ರದ ಹಿಂದೂಪುರ ಸಮೀಪದ ಮಡಕಶಿರದ ಬಳಿ ಆಂಧ್ರದ ಸಾರ್ವಜನಿಕ ಸಾರಿಗೆ ಬಸ್ ವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಬುಧವಾರ ಮುಂಜಾನೆ ಸ್ಥಳದಲ್ಲೇ 20 ಜನ ಸಾವಿಗೀಡಾಗಿದ್ದಾರೆ.

ಬಸ್ ನಲ್ಲಿ ಒಟ್ಟು 60 ಜನ ಪ್ರಯಾಣಿಸುತ್ತಿದ್ದರು. ಇವರಲ್ಲಿದ್ದ ಬಹುತೇಕರು ವಿದ್ಯಾರ್ಥಿಗಳಾಗಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕ್ರೇನ್ ಮೂಲಕ ಬಸ್ ಮೇಲೆತ್ತಲಾಗಿದೆ.

andfra pradesh

ಮಡಕಶಿರದಿಂದ ಪೆನಗೊಂಡಕ್ಕೆ ತೆರಳುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದು ಪಕ್ಕದಲ್ಲಿಯೇ ಕಂದಕ ತೋಡಲಾಗಿತ್ತು. ಕಿರಿದಾದ ರಸ್ತೆಯಲ್ಲಿ ಬಸ್ ಸಂಚರಿಸಬೇಕಾಗಿದ್ದು ಜಿಲ್ಲಾಡಳಿತ ಯಾವ ರೀತಿಯ ರಕ್ಷಣಾ ಕ್ರಮ ತೆಗೆದುಕೊಂಡಿರಲಿಲ್ಲ. ಇದು ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಗಂಭೀರ ಗಾಯಗೊಂಡವರನ್ನು ಬೆಂಗಳೂರಿನ ವಿಕ್ಟೋರಿಯಾ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ಬೇಜವಾಬ್ದಾರಿತನವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದ್ದು ಚಾಲಕ ಮತ್ತು ನಿರ್ವಾಹಕನ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+