ಏಪ್ರೀಲ್ 7 ರೊಳಗೆ ಕೊರೊನಾವನ್ನು ಒದ್ದೋಡಿಸುತ್ತೇವೆ..!
ಹೈದರಾಬಾದ್, ಮಾರ್ಚ್ 30: ಏಪ್ರಿಲ್ 7ರೊಳಗೆ ಕೊರೊನಾ ವೈರಸ್ ಸೋಂಕಿನಿಂದ ತೆಲಂಗಾಣ ರಾಜ್ಯ ಮುಕ್ತವಾಗಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಘೋಷಿಸಿರುವ 21 ದಿನಗಳ ಲಾಕ್ ಡೌನ್ ಬಗ್ಗೆ ಒತ್ತಡಕ್ಕೊಳಗಾಗದೆ ಸ್ವಯಂ ನಿಯಂತ್ರಣದಲ್ಲಿರುವುದು ಮುಖ್ಯ, ಏಪ್ರಿಲ್ 7ರ ನಂತರ ಒಂದು ವೇಳೆ ಹೊಸ ಪ್ರಕರಣಗಳು ಪತ್ತೆಯಾಗದಿದ್ದರೆ ತೆಲಂಗಾಣ ರಾಜ್ಯ ಕೊರೊನಾ ವೈರಸ್ ಸೋಂಕಿನಿಂದ ಮುಕ್ತವಾಗಲಿದೆ ಎಂದು ಹೇಳಿದರು.
ತೆಲಂಗಾಣದಲ್ಲಿ ಪ್ರಸ್ತುತ 70 ಜನ ಸೋಂಕು ಪೀಡಿತರಿದ್ದಾರೆ. ಅದರಲ್ಲಿ ಹನ್ನೊಂದು ಮಂದಿ ಚೇತರಿಸಿಕೊಂಡಿದ್ದು, ನೆಗೆಟೀವ್ ವರದಿ ಬಂದಿದೆ. ಚೇತರಿಸಿಕೊಂಡವನ್ನು ಸೋಮವಾರ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ 58 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದೇಶದಿಂದ ರಾಜ್ಯಕ್ಕೆ ಮರಳಿದ 25,937 ಮಂದಿ ಸರ್ಕಾರದ ನಿಗಾದಲ್ಲಿದ್ದಾರೆ. ಅವರ ಕ್ವಾರಂಟೈನ್ ಸಮಯ ಏಪ್ರಿಲ್ 7ರಂದು ಮುಕ್ತಾಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲಾ ರೀತಿಯ ವೈದ್ಯಕೀಯ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಎಲ್ಲಾ ಔಪಚಾರಿಕ ಕಾರ್ಯದ ನಂತರ ರೋಗಿಗಳನ್ನು ಡಿಸ್ ಚಾರ್ಜ್ ಮಾಡಲಾಗುವುದು ಎಂದಿದ್ದಾರೆ.
ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಲು ಬಂದಾಗ ಅವರು ತಮ್ಮ ಪಾಸ್ ಬುಕ್ ಅನ್ನು ಪಡೆಯಬಹುದಾಗಿದೆ. ಹಣವನ್ನು ಆನ್ ಲೈನ್ ಮೂಲಕ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದರು. ಎಲ್ಲಾ ಆಹಾರ ಧಾನ್ಯಗಳನ್ನು ಗ್ರಾಮಗಳಿಂದ ಖರೀದಿಸಲಾಗುವುದು. ಕೂಪನ್ ದಿನಾಂಕ ಪ್ರಕಾರದ ಬೆಳೆಯನ್ನು ಖರೀದಿಸಲಾಗುವುದು. ಒಂದು ವೇಳೆ ಈ ಶಿಸ್ತನ್ನು ಪಾಲಿಸಿದರೆ ನಾವು ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.












Click it and Unblock the Notifications