ರಸ್ತೆಯಲ್ಲೇ ಹೆರಿಗೆ: ವಿಡಿಯೋವಾದರೂ ಅಧಿಕಾರಿಗಳ ಮನಕಲಕಲಿ!

ವಿಜಯನಗರಂ, ಸೆಪ್ಟೆಂಬರ್ 07: ಕಳಪೆ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಾಗದ ಕಾರಣ ಜೋಲಿಯಲ್ಲಿ ಗರ್ಭಿಣಿ ಮಹಿಳೆಯನ್ನು ಹೊತ್ತೊಯ್ದು, ಆಕೆ ರಸ್ತೆಯಲ್ಲೇ ಶಿಶುವಿಗೆ ಜನ್ಮ ನೀಡಿದ ಘಟನೆ ಆಂಧ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಮಸಾಕಾ ಎಂಬ ಹಳ್ಳಿಯಿಂದ 7 ಕಿ.ಮೀ.ದೂರವಿರುವ ಆಸ್ಪತ್ರೆಗೆ ತೆರಳಲು ರಸ್ತೆಯೇ ಸರಿಯಿಲ್ಲದ ಕಾರಣ ವಾಹನ ಸಂಚಾರ ಸಾಧ್ಯವಿರಲಿಲ್ಲ. ಆದ್ದರಿಂದ ಮಹಿಳೆಯನ್ನು ಜೋಲಿಯ ಮೂಲಕ ಹೊತ್ತೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಹೆರಿಗೆ ನೋವಿನಿಂದ ಬಳಲಿದ ಮಹಿಳೆ ರಸ್ತೆಯಲ್ಲೇ ಶಿಶುವಿಗೆ ಜನ್ಮನೀಡಿದ್ದರು.

ಈ ಘಟನೆ ಸೆಪ್ಟೆಂಬರ್ 4 ರಂದು ನಡೆದಿದ್ದು. ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ಜೋಲಿಯಲ್ಲಿ ಕೊಡೋಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ನೋಡಿಯಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ. ರಸ್ತೆಯನ್ನು ಸರಿಪಡಿಸಲು ಮನಸ್ಸು ಮಾಡಲಿ ಎಂದು ಊರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Andhra Pradesh: Woman delivers baby in road as poor road caused delay

ಈಗಾಗಲೇ ಹಲವು ಬಾರಿ ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ, ಊರಿಗೆ ರಸ್ತೆ ಕಲ್ಪಿಸುವ ಕೆಲಸವನ್ನು ಮಾತ್ರ ಮಾಡಿಲ್ಲ.

ಜುಲೈ 29 ರಂದು ಸಹ ಇಂಥದೇ ಘಟನೆ ಇದೇ ಊರಿನಲ್ಲಿ ನಡೆದಿತ್ತು. ಇಷ್ಟಾದರೂ ಸರ್ಕಾರದ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಬೇಸರದ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+