• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದ್ರಾಬಾದ್ ಉಗ್ರಗಾಮಿಗಳ ರಾಜಧಾನಿಯಾಗುತ್ತಿದೆಯೇ?

|

ಹೈದ್ರಾಬಾದ್ ಅಲ್ ಖೈದಾ ಉಗ್ರಗಾಮಿಗಳ ರಾಜಧಾನಿಯಾಗುತ್ತಿದೆಯೇ? ಹೀಗೊಂದು ಪ್ರಶ್ನೆ ಭಾರತದ ಗುಪ್ತಚರ ದಳದಲ್ಲಿ ಮೂಡಿದೆ. ಹೈದ್ರಾಬಾದ್ ನ್ನು ದಕ್ಷಿಣ ಭಾರತದ ಕೇಂದ್ರ ಸ್ಥಾನವಾಗಿರಿಸಿಕೊಂಡು ಉಗ್ರಗಾಮಿಗಳು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಯುವಕರಿಗೆ ಬಲೆ ಬೀಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

ಯುವಕರನ್ನು ತಮ್ಮ ಕೃತ್ಯಗಳಿಗೆ ಬಳಸಿಕೊಳ್ಳುವ ಉದ್ದೇಶದಿಂದ ಅಲ್ ಖೈದಾ ಅನೇಕ ದಿನಗಳಿಂದ ಕಾರ್ಯನಿರತವಾಗಿದೆ ಎಂಬ ಮಾಹಿತಿ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ. ಸೈನ್ಯದ ಅನೇಕ ಅಧಿಕಾರಿಗಳು ರಹಸ್ಯ ಮಾಹಿತಿಯನ್ನು ಅಲ್ ಖೈದಾ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಆಧರಿಸಿಯೇ ಹೈದ್ರಾಬಾದ್ ನಮಗೆ ಸುರಕ್ಷಿತ ಸ್ಥಳ ಎಂಬ ಅಭಿಪ್ರಾಯಕ್ಕೆ ಉಗ್ರಗಾಮಿಗಳು ಬಂದಿದ್ದಾರೆ ಎನ್ನಲಾಗಿದೆ.[ಯುವಕರ ಸೆಳೆಯಲು ಆನ್ ಲೈನ್ ಬಳಸಿಕೊಂಡ ಸಿಮಿ]

ಹೈದ್ರಾಬಾದ್ ನೊಂದಿಗೆ ಉಗ್ರರ ನಂಟು ಹೊಸದೇನಲ್ಲ

ಸುಬೇದಾರ್ ಒಬ್ಬರು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಎದೆ ಝಲ್ ಎನಿಸುವಂಥ ಮಾಹಿತಿಗಳು ಹೊರಬಂದಿವೆ. ಉಗ್ರರು ಹೈದ್ರಾಬಾದನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆಯೂ ಆತ ವಿವರಣೆ ನೀಡಿದ್ದಾನೆ. ದಕ್ಷಿಣ ಭಾರತದ ಎಲ್ಲ ಪ್ರಮುಖ ನಗರಗಳಿಗೆ ಮತ್ತು ರಾಜ್ಯಗಳಿಗೆ ಹೈದ್ರಾಬಾದ್ ಸಂಪರ್ಕ ಸೇತುವಾಗಿರುವುದೇ ಇದಕ್ಕೆ ಕಾರಣ.

ಸಿಮಿ ಮತ್ತು ಅಲ್ ಖೈದಾ ಈ ಕಾರಣಕ್ಕೆ ಹೈದ್ರಾಬಾದ್ ನಲ್ಲಿ ತಮ್ಮದೊಂದು ಸಂಘಟನೆ ಸಿದ್ಧಮಾಡಲು ಮುಂದಾಗಿವೆ. ಸ್ಥಳೀಯ ಸಂಘಟನೆಗಳಾದ ಮೌಸ್ತೀಮ್ ಮತ್ತು ರಿಕ್ರ್ಯುಟ್ ಸಹಾಯ ಪಡೆಯಲು ಮುಂದಾಗಿವೆ. ಗುಪ್ತಚರ ದಳ ಹೇಳುವಂತೆ ಉಗ್ರಗಾಮಿಗಳಿಗೆ ನೆರವು ನೀಡುವ ಎಂಟಕ್ಕಿಂತಲೂ ಹೆಚ್ಚಿನ ಸಂಘಟನೆಗಳು ಮುತ್ತಿನ ನಗರಿಯಲ್ಲಿ ಕಾರ್ಯನಿರತವಾಗಿವೆ.[ಭಾರತ ದುರ್ಬಲಗೊಳಿಸಲು ಪಾಕ್ ಬಳಿ ಹೊಸ ಅಸ್ತ್ರ]

ಉಗ್ರಗಾಮಿಗಳಿಗೆ ಹೈದ್ರಾಬಾದ್ ನಲ್ಲಿ ತಮ್ಮ ಶಾಖೆ ಭದ್ರಪಡಿಸಿಕೊಳ್ಳುವುದು ಕಷ್ಟ ಸಾಧ್ಯವೇನಲ್ಲ. ಈ ಮೊದಲು ಶಾಹಿದ್ ಬಿಲಾವಲ್ ನೇತೃತ್ವದ ಹರ್ ಕತ್-ಉಲ್-ಜಿಹಾದಿ ನಗರದಲ್ಲಿ ಕ್ರಿಯಾಶೀಲವಾಗಿತ್ತು. ಇದಲ್ಲದೇ ಹುಜಿ, ಜಮಾತ್-ಉಲ್-ಬಾಂಗ್ಲಾ ಮುಂತಾದ ಸಂಘಟನೆಗಳು ಕೆಲಸ ಮಾಡಿದ್ದಕ್ಕೆ ಅನೇಕ ದಾಖಲೆಗಳಿವೆ.

ಇಷ್ಟೇ ಅಲ್ಲದೇ ಉಗ್ರಗಾಮಿ ಸಂಘಟನೆಗಳ ನೆರವಿಗೆ ರಾಜಕೀಯ ಶಕ್ತಿಗಳು ಸಹಕಾರ ನೀಡಿದ್ದು ಕಂಡುಬಂದಿದೆ. ಅಮಾಯಕ ಯುವಕರು ಉಗ್ರಗಾಮಿ ಸಂಘಟನೆಗಳ ಜತೆ ಕೈಜೋಡಿಸಿದ್ದನ್ನು ಪೊಲೀಸ್ ಇಲಾಖೆ ದೃಢಪಡಿಸಿದ್ದು ಇದೆ. ಪೊಲೀಸರು ತನ್ನ ಸ್ನೇಹಿತನನ್ನು ಗುಂಡಿಕ್ಕಿ ಸಾಯಿಸಿದರು ಎಂದು ಹುಜಿ ಸಂಘಟನೆಗೆ ಸೇರಿದ ರಿಯಾಜುದ್ದೀನ್ ಎಂಬ ಯುವಕ ಇದಕ್ಕೆ ಉತ್ತಮ ಉದಾಹರಣೆಯಾಗುತ್ತಾನೆ.[ವಿದೇಶಿ ಪ್ರವಾಸಿಗರ ಮೇಲೆ ಬಿತ್ತು ಉಗ್ರರ ವಕ್ರದೃಷ್ಟಿ]

ಸುಮಾರು 350 ಜನ ಯುವಕರು ಉಗ್ರಗಾಮಿ ಸಂಘಟನೆಗೆ ಸೇರಲು ಸಿದ್ಧರಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಮತ್ತು ಹೈದ್ರಾಬಾದ್ ಪೊಲೀಸರು ವರದಿ ನೀಡಿದ್ದಾರೆ. ಉಗ್ರಗಾಮಿ ಚಟುವಟಿಕೆ ಆರೋಪದಲ್ಲಿ ಬಂಧಿತನಾಗಿರುವ ಮುದಾಸೀರ್ ಬಾಯಿ ಬಿಟ್ಟಿರುವ ಪ್ರಕಾರ ಮೌಸೀಮ್ ಎಂಬಾತ ಈ ಎಲ್ಲ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದು ಯುವಕರಿಗೆ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾನೆ. ಇಲ್ಲವೇ ಒತ್ತಾಯ ಪೂರ್ವಕವಾಗಿ ಸಂಘಟನೆಗೆ ಸೇರಿಸಿಕೊಳ್ಳುತ್ತಾನೆ ಎಂದು ಹೇಳಿದ್ದಾನೆ.[ಒಸಾಮಾ ಅಂತಿಮ ಯಾತ್ರೆ ರಹಸ್ಯ ಬಹಿರಂಗ]

ಹಳೆಯ ನಗರದ ಸುರಕ್ಷತೆಗೆ ಎದುರಾದ ಆತಂಕ

ಅತ್ಯಂತ ಹಳೆಯ ನಗರವೆಂದೇ ಖ್ಯಾತಿ ಪಡೆದಿರುವ ಹೈದ್ರಾಬಾದ್ ಗೆ ಭದ್ರತೆ ಕೊರತೆ ಎದುರಾಗಿರುವುದೆಂತೂ ನಿಜ. ರಿಯಾಜುದ್ದೀನ್ ನಜೀರ್ ಮತ್ತು ಶಾಹಿದ್ ಬಿಲಾವಲ್ ಅಂಥವರು ಹಿಂದೊಮ್ಮೆ ನಗರವನ್ನು ತಮ್ಮ ಹಿತಕ್ಕೆ ಬಳಸಿಕೊಂಡಿದ್ದರು. ಅನೇಕರು ಅಲ್ ಖೈದಾ ಮತ್ತು ಲಷ್ಕರ್ ಇ ತೊಯಿಬಾ ಜತೆ ಸಂಪರ್ಕ ಹೊಂದಿರುವ ಸಾಧ್ಯತೆಯೂ ಇದೆ ಎಂದು ಕುಟುಕು ಕಾರ್ಯಾಚರಣೆ ಮಾಹಿತಿ ಹೇಳಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hyderabad was to be the epicentre of the Al-Qaeda through which it was decided to target several youth from Kerala, Tamil Nadu and Karnataka. National Investigating Agency officials informed that it appears that the Al-Qaeda has been planning this operation for quite some time and a lot of information was leaked by the Subedar who was honey trapped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more