ಪೊಲೀಸರಂತೆ ವೇಷ ಹಾಕಿಕೊಂಡು ಮಹಿಳೆ ಅತ್ಯಾಚಾರ ಮಾಡಿದ ಪಾಪಿಗಳು!
ಹೈದರಾಬಾದ್, ಫೆಬ್ರವರಿ 14: ಹೈದರಾಬಾದ್ ಪಶುವೈದ್ಯೆ ದಿಶಾ ಅತ್ಯಾಚಾರದ ಕಹಿ ನೆನಪು ಮಾಸುವ ಮುನ್ನವೇ ತೆಲಂಗಾಣದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಬಸ್‌ನಲ್ಲಿ ಸಂಚರಿಸುತ್ತಿದ್ದ 32 ವರ್ಷದ ಮಹಿಳೆಯನ್ನು ಪೊಲೀಸರ ವೇಷ ಹಾಕಿಕೊಂಡು ಯಾಮಾರಿಸಿದ ಮೂವರು ದುರುಳರು, ಅವಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಚಾರ ಎಸಗಿರುವ ಘಟನೆ ಕಳೆದ ಗುರುವಾರ ರಾತ್ರಿ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಅದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಆರೋಪಿಗಳು ಅತ್ಯಚಾರ ಎಸಗಿ ತಲೆಮರೆಸಿಕೊಂಡು ತಿರುಗಾಡುವಾಗ ಪೊಲೀಸ್ ತಂಡ ಗಮನಿಸಿದ ಸೋಮ ಚಾರೈ ಮತ್ತು ಬ್ರಹ್ಮ ಚಾರೈ ಕಾರಿನಲ್ಲಿ ಪರಾರಿಯಾಗಿದ್ದರು. ಈ ವೇಳೆ ಅವರ ಕಾರ್ ಅಪಘಾತವಾಗಿತ್ತು. ಇಬ್ಬರನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಸಿಸಿಟಿವಿ ನೆರವಿನೊಂದಿಗೆ ಮೂವರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರ ವೇಷ ಧರಿಸಿ ಫಾಲೋ ಮಾಡಿದರು
ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಮಹಿಳೆ ಕರ್ನಾಟಕದ ಬೀದರ್‌ನಲ್ಲಿ ಗುಟಕಾ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಕಳೆದ ಗುರುವಾರ ವಾಪಸ್ ಸೂರ್ಯಪೇಟ್‌ಗೆ ತೆರಳುತ್ತಿದ್ದಳು. ಬಸ್ ಹಿಂಬಾಲಿಸಿದ ಇಬ್ಬರು ಪೊಲೀಸರಂತೆ ವೇಷಧರಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿ ತೆರಳಿ ನಿಷೇಧಿತ ಗುಟ್ಕಾ ಪ್ಯಾಕೇಟ್ ಗಳನ್ನು ಸಾಗಿಸುತ್ತಿರುವುದಾಗಿ ಆರೋಪಿಸಿ ಬಸ್ ನಿಂದ ಕೆಳಗಿಳಿಸಿದ್ದರು.

ನಿರ್ಜನ ಪ್ರದೇಶಕ್ಕೆ ಅಪಹರಣ
ಮತ್ತೊಬ್ಬ ಆರೋಪಿ ಕಾರಿನಲ್ಲಿ ಬಸ್‌ನ್ನು ಹಿಂಬಾಸಿ ಬಂದಿದ್ದ. ನಂತರ ಮೂವರು ಆಕೆಯನ್ನು ಜಹೀರಾಬಾದ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವುದಾಗಿ ತೆಲಂಗಾಣ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಮಹಿಳೆಯನ್ನು ಅಪಹರಿಸುವಾಗ ಆಕೆಯ ನಾಲ್ಕು ವರ್ಷದ ಮಗ ಕೂಡ ಇದ್ದ ಎಂದು ವರದಿ ಹೇಳಿವೆ.

ಆರೋಪಿಗಳನ್ನು ಬೆನ್ನಟ್ಟಿ ಹಿಡಿದ ಪೊಲೀಸ್
ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಾಮೀಲಾಗಿದ್ದ ಮೂವರು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಸಂಗಾರೆಡ್ಡಿ ಪೊಲೀಸರು ಯಶಸ್ವಿಯಾಗಿದ್ದು, ಅಪರಾಧಿಗಳನ್ನು ಹಿಡಿಯುವಾಗ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಒಬ್ಬ ಆರೋಪಿ ಸಾವನ್ನಪ್ಪಿದ್ದಾನೆ. ಸೋಮ ಚಾರೈ ಮತ್ತು ಬ್ರಹ್ಮ ಚಾರೈ ಎಂದು ಪ್ರಮುಖ ಆರೋಪಿಗಳನ್ನು ಗುರುತಿಸಲಾಗಿತ್ತು. ಸೋಮ ಚಾರೈನೇ ಅಪಘಾತದಲ್ಲಿ ಮೃತಪಟ್ಟ ಆರೋಪಿಯಾಗಿದ್ದಾನೆ. ಇನ್ನೊಬ್ಬ ಬೀದರ್‌ನ ಪವನಕುಮಾರ್‌ನ್ನು ಬಂಧಿಸಲಾಗಿದೆ.

ನ್ಯಾಯಾಂಗ ಬಂಧನಕ್ಕೆ ಆರೋಪಿಗಳು
ಆರೋಪಿಗಳು ಅತ್ಯಚಾರ ಎಸಗಿ ತಲೆಮರೆಸಿಕೊಂಡು ತಿರುಗಾಡುವಾಗ ಪೊಲೀಸ್ ತಂಡ ಗಮನಿಸಿದ ಸೋಮ ಚಾರೈ ಮತ್ತು ಬ್ರಹ್ಮ ಚಾರೈ ಕಾರಿನಲ್ಲಿ ಪರಾರಿಯಾಗಿದ್ದರು. ಈ ವೇಳೆ ಅವರ ಕಾರ್ ಅಪಘಾತವಾಗಿತ್ತು. ಇಬ್ಬರನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಸಿಸಿಟಿವಿ ನೆರವಿನೊಂದಿಗೆ ಮೂವರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.












Click it and Unblock the Notifications