ಹೈದರಾಬಾದ್ ನಲ್ಲಿ ಆರಂತಸ್ತಿನ ಕಟ್ಟಡ ಕುಸಿತ, ನಾಲ್ವರ ಸಾವು

Posted By:
Subscribe to Oneindia Kannada

ಹೈದರಾಬಾದ್, ಡಿಸೆಂಬರ್ 9: ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡವೊಂದು ಗುರುವಾರ ರಾತ್ರಿ ಕುಸಿದು, ನಾಲ್ವರ ಮೃತದೇಹ ಸಿಕ್ಕಿದ್ದು, ಬದುಕುಳಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಶುಕ್ರವಾರ ಬೆಳಗ್ಗೆ ಮಹಿಳೆ ಮತ್ತು ಮಗುವೊಂದನ್ನು ರಕ್ಷಿಸಲಾಯಿತು. ಕಟ್ಟಡ ಕುಸಿದ ವೇಳೆ ಒಳಗೆ ಹದಿನಾಲ್ಕು ಮಂದಿ ಇದ್ದರು ಎಂದು ವರದಿಯಾಗಿದೆ.

ಹೆಚ್ಚು ಮಂದಿ ಬದುಕಿರುವ ಸಾಧ್ಯತೆಗಳಿಲ್ಲ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ಐದು ಕುಟುಂಬಗಳು ಕಟ್ಟಡದಲ್ಲಿದ್ದವು. ಆ ಪೈಕಿ ನಾಲ್ಕು ಕುಟುಂಬ ಟೈಲ್ಸ್ ಕಾರ್ಮಿಕರದು ಮತ್ತು ಪ್ಲಂಬರ್ ಗಳದು. ಇನ್ನೊಂದು ಕಟ್ಟಡದ ಕಾವಲುಗಾರರ ಕುಟುಂಬ.[ಕಟ್ಟಡದ ಅವಶೇಷಗಳಡಿ ಸಿಲುಕಿ ಇಬ್ಬರು ಸಾವು, 4 ಮಂದಿ ರಕ್ಷಣೆ]

4 Dead After 6-Storey Building Collapses In Hyderabad

ಎನ್ ಡಿಆರ್ ಎಫ್ ತಂಡವು ರಕ್ಷಣಾ ಕಾರ್ಯದಲ್ಲಿ ಪೊಲೀಸರಿಗೆ ನೆರವಾಗುತ್ತಿದೆ. ಕಟ್ಟಡ ನಿರ್ಮಾಣದಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪೊಲೀಸ್ ಅಧಿಕಾರಿ ವಿಶ್ವಪ್ರಸಾದ್ ತಿಳಿಸಿದ್ದಾರೆ. "ಕಟ್ಟಡ ನಿರ್ಮಾಣ ಕಳಪೆಯಾಗಿತ್ತು. ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರಿಂದ ಕಟ್ಟಡ ಕುಸಿದಿದೆ" ಎಂದು ಹೈದರಾಬಾದ್ ನ ಮೇಯರ್ ಬೊಂತಾ ರಾಮ್ ಮೋಹನ್ ಹೇಳಿದ್ದಾರೆ.

ತೆಲಂಗಾಣ ಗೃಹಸಚಿವ ಎನ್.ನರಸಿಂಹ ರೆಡ್ಡಿ, ಅಬಕಾರಿ ಸಚಿವರಾದ ಪದ್ಮಾ ರಾವ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bodies of four people have been pulled out of the rubble of a six-storey building which collapsed on Thursday night in Nanakramguda, Hyderabad.
Please Wait while comments are loading...