Huvina Hadagali Elections : ಕಾಂಗ್ರೆಸ್ ಅಭ್ಯರ್ಥಿಗೆ ಪೈಪೋಟಿ ನೀಡುವರಾರು?
ಹೂವಿನ ಹಡಗಲಿ, ಮಾರ್ಚ್ 24: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಎಸ್‌ಸಿ ಮೀಸಲು ಕ್ಷೇತ್ರವಾಗಿದೆ. ಮಲ್ಲಿಗೆ ನಾಡು ಎಂದೇ ಪ್ರಸಿದ್ದವಾಗಿರುವ ಹೂವಿನ ಹಡಗಲಿದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ ರಾಜಕೀಯ ಚಟುವಟಿಕೆ ಬಿರುಸಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರ ಪರಿಚಯ ಇಲ್ಲಿದೆ.
ಹಿಂದೆ ವಿಜಯನಗರ ರಾಜರ ಕಾಲದಲ್ಲಿ ಮಲ್ಲಿಗೆ ಹೂವುಗಳನ್ನು ದೋಣಿಯಲ್ಲಿ ತುಂಬಿ ವಿಜಯನಗರದ ಶ್ರೀ ವಿರುಪಾಕ್ಷ ದೇವರ ಪೂಜೆಗೆ ಪ್ರತಿನಿತ್ಯ ಈ ಊರಿನಿಂದ ತುಂಗಭದ್ರಾ ನದಿ ಮೂಲಕ ಕಳಿಸಿಕೊಡಲಾಗುತಿತ್ತು. ಈ ಹೂವಿನ ಹಡಗು ಇಂದ ಹೂವಿನ ಹಡಗಲಿ ಎಂಬ ಹೆಸರು ಇಲ್ಲಿಗೆ ಬಂತು ಎನ್ನುವ ಪ್ರತೀತಿ ಇದೆ.

ಈ ಊರಿಗೆ ಹೂವಿನ ಹಡಗಲಿ ಎಂದು ಹೆಸರು ಬರಲು ಈ ಊರಿನಿಂದ ಹಂಪೆಗೆ ಹೂ ಕಾರಣ ಅಲ್ಲ. ಹಂಪಿ ವಿಜಯನಗರ ನಗರ ಸಾಮ್ರಾಜ್ಯ ಸ್ಥಾಪನೆಯಾದ ಸುಮಾರು 300 ವರ್ಷಗಳ ಮೊದಲೇ ಈ ಊರಿಗೆ ಊವಿನ ಹಡಗಲಿ (ಪೂವಿನ ಪಡಂಗಿಲೆ) ಎಂದು ಕಲ್ಯಾಣಿ ಚಾಲುಕ್ಯ ದೊರೆ ಆರನೆ ವಿಕ್ರಮಾದಿತ್ಯನ ಕಾಲದ ಕೇಶವ ಲ್ಮತ್ತು ಕಲ್ಲೇಶ್ವರ ದೇವಸ್ಥಾನದ ಶಾಸನಗಳಲ್ಲಿ ದಾಖಲಾಗಿದೆ.
ಮಲ್ಲಿಗೆ ನಾಡು ಎಂದೇ ಪ್ರಸಿದ್ದಿ ಹೊಂದಿರುವ ಹೂವಿನಹಡಗಲಿ ಕ್ಷೇತ್ರವನ್ನು ಈ ಹಿಂದೆ ಎಂ.ಪಿ. ಪ್ರಕಾಶ ಹಾಗೂ ಈ.ಟಿ. ಶಂಬುನಾಥ ಅವರಂತಹ ಪ್ರಬುದ್ಧ ರಾಜಕಾರಣಿಗಳು ಪ್ರತಿನಿಧಿಸಿದ್ದಾರೆ. ಸದ್ಯ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. 2008ರಿಂದಲೂ ಇಲ್ಲಿ ಕಾಂಗ್ರೆಸ್‌ನ ಪಿ.ಟಿ.ಪರಮೇಶ್ವರ ನಾಯ್ಕ ಅವರು ಈ ಕ್ಷೇತ್ರದ ಶಾಸಕರಾಗಿದ್ದಾರೆ. ಹೂವಿನ ಹಡಗಲಿ ತಾಲೂಕಿನಲ್ಲಿ ಹಿರೇ ಹಡಗಲಿ ಎಂಬ ಗ್ರಾಮದಲ್ಲಿ ಐತಿಹಾಸಿಕ ಕಲ್ಲೆಶ್ವರ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಜಕ್ಕಣಚಾರಿ ಕೆತ್ತಿದನೆಂದು ಹೇಳುತ್ತಾರೆ, ಈ ದೇವಸ್ಥಾನದಲ್ಲಿ ಶಾತವಾಹನರ ಮೂಲ ಯಾವುದೆಂದು ತಿಳಿಸುತ್ತದೆ. ಶಾತವಾಹನರ ಮೂಲ ಕನ್ನಡ ಎಂಬುದನ್ನು ಇದು ತಿಳಿಸುತ್ತದೆ.

ಎರಡು ಬಾರಿ ಗೆದ್ದಿರುವ ಅವರು ಈ ಬಾರಿ ಮತ್ತೆ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ. ಈ ಬಾರಿಯೂ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ. ಕ್ಷೇತ್ರದಲ್ಲಿ ಪಿಟಿಪಿ ಎಂದೇ ಖ್ಯಾತವಾಗಿರುವ ಅವರು ನಿರಂತರವಾಗಿ ಜನಸಂಪರ್ಕದಲ್ಲಿ ಇದ್ದಾರೆ. ಪರಮೇಶ್ವರ ನಾಯ್ಕ ವಿರುದ್ಧ ಸತತ ಎರಡು ಬಾರಿ ಸೋತಿರುವ ಚಂದ್ರನಾಯ್ಕ ಅವರು ಈ ಬಾರಿ ಮತ್ತೆ ಬಿಜೆಪಿ ಟಿಕೆಟ್ ಪಡೆದು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಪಕ್ಷದಲ್ಲಿ ಇನ್ನೂ ಹಲವು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು ತೀವ್ರ ಪೈಪೋಟಿ ಇದೆ. ಜೆಡಿಎಸ್‌ನಿಂದ ಕೂಡ ಪ್ರಬಲ ಸ್ಪರ್ಧೆ ಒಡ್ಡಿದೆ. ಆಮ್ ಆದ್ಮಿ ಪಕ್ಷ, ಕೆಆರ್‌ಎಸ್ ಪಕ್ಷ ಕೂಡ ಸ್ಪರ್ಧಿಸುವ ಉತ್ಸಾಹ ತೋರಿಸುತ್ತಿದೆ.
ಕಾಂಗ್ರೆಸ್‌ನಲ್ಲಿ ಒಳಜಗಳ ಹೆಚ್ಚೆ ಇದೆ. ಇದು ಬಿಜೆಪಿಯಲ್ಲೂ ಇದೆ. ಕಾಂಗ್ರೆಸ್‌ನಿಂದ ಶಾಸಕ ಪಿಟಿ ಪರಮೇಶ್ವರ ನಾಯ್ಕ ವಿರುದ್ಧ ಮಾಜಿ ಸಂಸದ ಕೆಸಿ ಕೊಂಡಯ್ಯ ಸಮರ ಸಾರಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಿಟಿ ಪರಮೇಶ್ವರ ನಾಯ್ಕ ಅವರಿಗೆ ಟಿಕೆಟ್ ನೀಡದಂತೆ ಅವರು ದೂರನ್ನು ಕೊಟ್ಟಿದ್ದಾರೆ. ಪಿಟಿ ಪರಮೇಶ್ವರ ನಾಯ್ಕ ಅವರನ್ನು ಬೆಳೆದಿದ್ದೆ ಕೊಂಡಯ್ಯ. ಆದರೆ ಈಗ ಅವರೇ ಪಿಟಿಪಿ ವಿರುದ್ಧ ತಿರುಗಿಬಿದ್ದಿದ್ದಾರೆ. 2008ರಲ್ಲಿ ಮೀಸಲು ಕ್ಷೇತ್ರವಾಗಿ ಹೂವಿನ ಹಡಗಲಿ ಬದಲಾದಗಲೂ ಪಿಟಿಪಿ ಬೆನ್ನಿಗೆ ಕೊಂಡಯ್ಯ ನಿಂತಿದ್ದಾರೆ. ಇದೆಲ್ಲಕ್ಕೂ ಕಾರಣ 2021ರಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಕೆಸಿ ಕೊಂಡಯ್ಯನವರಿಗೆ ಟಿಕೆಟ್ ಕೊಡಬಾರದು ಎಂದು ಪಿಟಿಪಿ ಒತ್ತಾಯಿಸಿದ್ದರು ಹಾಗಾಗಿ ಪಿಟಿ ಪರಮೇಶ್ವರ ನಾಯ್ಕ ವಿರುದ್ಧ ಕೊಂಡಯ್ಯ ತಿರುಗಿಬಿದ್ದಿದ್ದಾರೆ. ಹೀಗಾಗಿ ಹಲವು ಸ್ಥಳೀಯ ನಾಯಕರ ವಿರೋಧ ಕಟ್ಟಿಕೊಂಡಿರುವ ಪಿಟಿ ಪರಮೇಶ್ವರ ನಾಯ್ಕ ಕ್ಷೇತ್ರದಲ್ಲಿ ಗೆಲ್ಲುವುದು ತುಸು ತ್ರಾಸದಾಯಕವೇ.
Huvina Hadagli Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಪಿಟಿ ಪರಮೇಶ್ವರ ನಾಯ್ಕ (ಕಾಂಗ್ರೆಸ್) | 54,097 | ಒದೋ ಗಂಗಪ್ಪ(ಪಕ್ಷೇತರ) | 44,919 |
| 2013 | ಪಿಟಿ ಪರಮೇಶ್ವರ ನಾಯ್ಕ (ಕಾಂಗ್ರೆಸ್) | 59,336 | ಬಿ ಚಂದ್ರ ನಾಯಕ್(ಬಿಜೆಪಿ) | 18,526 |
| 2008 | ಬಿ ಚಂದ್ರ ನಾಯಕ್(ಬಿಜೆಪಿ) | 43,992 | ಪಿಟಿ ಪರಮೇಶ್ವರ ನಾಯ್ಕ (ಕಾಂಗ್ರೆಸ್) | 37,474 |
2011 ರ ಜನಗಣತಿಯ ಪ್ರಕಾರ ಹೂವಿನ ಹಡಗಲ್ಲಿ ಎಸ್‌ಸಿ ಮತದಾರರು ಸರಿಸುಮಾರು 48,821 ರಷ್ಟಿದ್ದಾರೆ. ಎಸ್‌ಟಿ ಮತದಾರರು ಸರಿಸುಮಾರು 14,804, ಮುಸ್ಲಿಂ ಮತದಾರರು ಸರಿಸುಮಾರು 15,749ರಷ್ಟಿದ್ದಾರೆ. ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಮತದಾರರು ಸರಿಸುಮಾರು 162,175 ರಷ್ಟಿದ್ದಾರೆ. ನಗರ ಮತದಾರರು ಸರಿಸುಮಾರು 23,104ರಷ್ಟಿದ್ದಾರೆ. ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,85,279.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್‌ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications