ಕರ್ನಾಟಕದಲ್ಲಿ ಪ್ರಾಣ ಬಿಟ್ಟ ತಮಿಳುನಾಡಿನ 'ಸಂಪಂಗೆರೆ ರಣಬೇಟೆಗಾರ': ಹೋರಿ ಪುಣ್ಯಸ್ಮರಣೆಗೆ ರಕ್ತದಾನ, ಅನ್ನದಾನ
ಹಾವೇರಿ, ಆಗಸ್ಟ್ 29: ಅದು ತಮಿಳುನಾಡಿನ ಸಂಪಂಗೆರೆ ರಣಬೇಟೆಗಾರ ಕೊಬ್ಬರಿ ಹೋರಿ. ಕರ್ನಾಟಕದ ಹೋರಿ ಹಬ್ಬಕ್ಕೆ ಬಂದ ಆ ಹೋರಿ ಅನಾರೋಗ್ಯಕ್ಕೆ ತುತ್ತಾಗಿ ಕರ್ನಾಟಕದಲ್ಲಿ ತನ್ನ ಜೀವ ಕಳೆದುಕೊಂಡಿತು. ಹೀಗಾಗಿ ಕಣ್ಮರೆಯಾದ ಹೋರಿ ನೆನಪಿನಲ್ಲಿ ೧ನೇ ವರ್ಷದ ಪುಣ್ಯಸ್ಮರಣೆಯ ಜೊತೆಗೆ ಯುವಕರ ತಂಡ ಮಾಡಿದ ಸಾಮಾಜಿಕ ಕಾರ್ಯಕ್ಕೆ ಈಗ ಮೆಚ್ಚುಗೆ ವ್ಯಕ್ತವಾಗಿದೆ.
ತಮಿಳುನಾಡಿನ ಮೂಲದ ಶಶಿಕುಮಾರ್ ಅವರು ಕರ್ನಾಟಕದ ಹಾವೇರಿ ಜಿಲ್ಲೆಯ ಹೋರಿ ಹಬ್ಬಕ್ಕೆ ಹೋರಿ ತಂದಿದ್ದರು. ಅದರ ಅಭಿಮಾನಿಯಾಗಿದ್ದ ಹಾವೇರಿ ಶಿವಾಜಿ ನಗರದ ಶಿವು ಹಾವೇರಿಯಲ್ಲಿ ಹೋರಿ ಹಬ್ಬ ಮಾಡಲು ಅದನ್ನು ತನ್ನ ಬಳಿ ಇರಿಸಿಕೊಳ್ಳುತ್ತಾರೆ. ಇನ್ನು ಸುಮಾರು ಹಬ್ಬ ಮಾಡಿದ ಬಳಿಕ ಹೋರಿ ಅನಾರೋಗ್ಯಕ್ಕೆ ತುತ್ತಾಗಿ ಹಾವೇರಿಯಲ್ಲಿ ಸಾವನ್ನಪ್ಪಿತ್ತದೆ. ಹೀಗಾಗಿ ಹೋರಿ ನೆನೆದು ಮೊದಲನೇ ವರ್ಷದ ಪುಣ್ಯಸ್ಮರಣೆಗೆ ತಮಿಳುನಾಡಿನಿಂದ ಬಂದು ಸಮಾಜಮುಖಿ ಕೆಲಸ ಮಾಡಿದ್ದಾರೆ.

ಹೋರಿ ನೆನಪಲ್ಲಿ ಅಂಧ ಮಕ್ಕಳಿಗೆ ಊಟ, & ರಕ್ತದಾನ ಶಿಬಿರ ಆಯೋಜನೆ
ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ. ಈ ಜಿಲ್ಲೆಯಲ್ಲಿ ಕೃಷಿ ಜೊತೆಗೆ ಯುವಕರು ಹೋರಿ ಬೇದರಿಸೋ ಹಬ್ಬಕ್ಕೂ ಮಹತ್ವ ನೀಡುತ್ತಾರೆ. 1 ಬಾರಿ ಈ ಜಿಲ್ಲೆಯ ಜನರು ಹೋರಿ ಅಭಿಮಾನಿಯಾದರೆ. ಹೋರಿ ಜೊತೆ ಸೇರಿ ನೂರಾರು ಯುವಕರು ಹೋರಿ ಅಖಾಡಕ್ಕೆ ಇಳಿಯುತ್ತಾರೆ. ಕೃಷಿ ಜೊತೆ ದಷ್ಟ ಪುಷ್ಟವಾದ ಹೋರಿಗೆ ಹೋರಿ ಬೇದರಿಸೋ ಟ್ರೈನ್ ಇಲ್ಲಿನ ಯುವಕರು ಮಾಡಿ ಸಂತೋಷ ಪಡ್ತಾರೆ. ಹೀಗೆ ಹಾವೇರಿ ಜಿಲ್ಲೆ ಯುವಕರ ತಂಡ, ಪ್ರತಿ ಹೋರಿ ಹಬ್ಬದಲ್ಲಿ ತಮ್ಮ ತಮ್ಮ ಹೋರಿ ಜೊತೆಗೆ ಹೋರಿ ಮೈದಾನಕ್ಕೆ ಯಂಗ್ ಮ್ಯಾನ್ಸ್ ಇಳಿಯುತ್ತಾರೆ. ಹೀಗೆ ಹಾವೇರಿ ಜಿಲ್ಲೆಯಲ್ಲಿ ಸಂಪಂಗರೆ ರಣಬೇಟೆಗಾರ ಹೋರಿಯೂ ಒಂದಾಗಿದೆ.
ಈ ಹೋರಿ ಹಾವೇರಿ ಜಿಲ್ಲೆ ಅಷ್ಟೇ ಅಲ್ಲದೇ ಬೇರೆ ಬೇರೆ ಜಿಲ್ಲೆಯಲ್ಲಿ ಅದ್ಭುತ ಹೆಸರು ಮಾಡಿತ್ತು. ಈ ಹೋರಿ ಮೈದಾನಕ್ಕೆ ಇಳಿದರೆ. ಹೋರಿ ಅಭಿಮಾನಿಗಳು ಕೇಕೆ ಸಿಳೆ ಹೋಡುದು ಕುಣಿದು ಕುಪ್ಪಳಿಸುತ್ತಿದ್ದರು. ಈ ಹೋರಿ ಕಳೆದ ವರ್ಷ ಅಚಾನಕ್ ಆಗಿ ಮರಣ ಹೊಂದಿತ್ತು. ಇದರ ನೆನಪಿಗಾಗಿ ಯುವಕರು ಅಂಧ ಮಕ್ಕಳಿಗೆ ಊಟ ವ್ಯವಸ್ಥೆ ಜೊತೆ ರಕ್ತದಾನ ಶಿಬಿರ ಮಾಡಿದರು.

ಹಾವೇರಿ ಜಿಲ್ಲೆಯಲ್ಲಿ ಸಂಪಂಗೆರೆ ರಣಬೇಟೆಗಾರ ಅಂದರೆ ಹೋರಿ ಅಭಿಮಾನಿಗಳಿಗೆ ಪ್ರೀತಿ. ಈ ಹೋರಿ ಮೂಲತಃ ತಮಿಳುನಾಡಿದ್ದ ಹಾವೇರಿ ಹೋರಿ ಹಬ್ಬಕ್ಕೆ ತರಲಾಗಿತ್ತು. ಈ ಹೋರಿ ಹಬ್ಬ ಮಾಡುವದನ್ನು ಕಂಡು ಅಭಿಮಾನಿಗಳು ಇದಕ್ಕಾಗಿ ಅಭಿಮಾನಿಗಳ ಗುಂಪು ಹೆಚ್ಚುತ್ತಿತ್ತು.
ಹಾವೇರಿ ಜಿಲ್ಲೆ ಅಷ್ಟೇ ಅಲ್ಲದೇ ಇಡೀ ರಾಜ್ಯಾದ್ಯಂತ ಹೋರಿ ಹಬ್ಬ ಆಚರಿಸಿ, ಬಂಗಾರ, ಬೆಳ್ಳಿ, ಬೈಕ್, ಪಲಂಗ್, ಟಿಜೇರಿ ಹಲವಾರು ಬಹುಮಾನ ಪಡೆದಿತ್ತು. ಹೀಗಾಗಿ ಈ ಹೋರಿ ಫೋಟೋ ನೋಡಿದರೆ ಈಗಲು ಕಣ್ಣೀರು ಬರುತ್ತದೆ ಎಂದು ಅಗಲಿದ ಹೋರಿ ನೆನೆದು ಮಾಲೀಕ ಶಶಿಕುಮಾರ್ ಭಾವುಕರಾಗಿದ್ದಾರೆ. ಸಂಪಂಗೆರೆ ರಣಬೇಟೆಗಾರ ನಮ್ಮನ್ನ ಅಗಲಿ ಒಂದು ವರ್ಷವಾದರು ನಮ್ಮ ಬಳಿಯೇ ಇರುವ ಭಾವನೆ ಇದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಹೋರಿ ಪುಣ್ಯಸ್ಮರಣೆ ಹೆಸರಿನಲ್ಲಿ ಯುವಕರ ತಂಡ ಅಂಧ ವಿದ್ಯಾರ್ಥಿಗಳಿಗೆ ಅನ್ನದಾನ ಹಾಗೂ ದಾನದಲ್ಲಿಯೇ ಮಹಾದಾನವಾಗಿರುವ ರಕ್ತದಾನ ಶಿಬಿರ ಏರ್ಪಡಿಸಿರುವ ಬಗ್ಗೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳ ಸರದಾರ ಸಂಪಂಗೆರೆ ರಣಬೇಟೆಗಾರ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.












Click it and Unblock the Notifications