ಭಾರತದ ಮೇಲೆ ಹಿಂದೂಗಳಿಗಿರುವಷ್ಟು ಹಕ್ಕು ಮುಸ್ಲಿಂರಿಗೂ ಇದೆ; ಬಾಬಾ ರಾಮದೇವ್
ಹುಬ್ಬಳ್ಳಿ, ಜನವರಿ 29: ''ಭಾರತದ ಮೇಲೆ ಹಿಂದೂಗಳಿಗಿರುವಷ್ಟು ಹಕ್ಕು ಮುಸ್ಲಿಂರಿಗೂ ಇದೆ. ಶೇ 99 ರಷ್ಟು ಮುಸ್ಲಿಂರು ಒಳ್ಳೆಯವರೇ. ಆದರೆ, ಶೇ 1 ರಷ್ಟು ಮುಸ್ಲಿಂರಿಂದ ಇಡೀ ಮುಸ್ಲಿಂ ಧರ್ಮಕ್ಕೆ ಕೆಟ್ಟ ಹೆಸರು ಬರುತ್ತಿದೆ'' ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದರು.
ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಿಎಎ ಹಾಗೂ ಎನ್‌ಆರ್‌ಸಿ ಬಗ್ಗೆ ಮುಸ್ಲಿಂರಲ್ಲಿ ತಪ್ಪು ಭಾವನೆ ಮೂಡಿಸಲಾಗುತ್ತಿದೆ. ಸಿಎಎ ಬಂದರೆ ಯಾರ ಪೌರತ್ವವೂ ರದ್ದಾಗುವುದಿಲ್ಲ. ಒಂದು ವೇಳೆ ಯಾರದೇ ಪೌರತ್ವ ರದ್ದಾದರೂ ನಾನೇ ಮುಂದು ನಿಂತು ಹೋರಾಟ ಮಾಡುತ್ತೇನೆ'' ಎಂದು ಹೇಳಿದರು.
''ಸ್ವಾಮಿ ವಿವೇಕಾನಂದ ಹಾಗೂ ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು'' ಎಂದು ಇದೇ ವೇಳೆ ಬಾಬಾ ರಾಮದೇವ ಒತ್ತಾಯಿಸಿದರು.

ಜನವರಿ 30 ರಿಂದ ಫೆ 3 ರವರೆಗೆ ಹುಬ್ಬಳ್ಳಿಯ ಗದಗ ರಸ್ತೆಯ ರೈಲು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ ಯೋಗ ಶಿಬಿರದ ಬಗ್ಗೆ ಮಾಹಿತಿ ನೀಡಲು ಹುಬ್ಬಳ್ಳಿ ಪ್ರೆಸ್‌ಕ್ಲಬ್‌ನಲ್ಲಿ ರಾಮದೇವ್ ಅವರು ಸುದ್ದಿಗೋಷ್ಟಿ ಏರ್ಪಡಿಸಿದ್ದರು. ಉದ್ಯಮಿ ಆನಂದ ಸಂಕೇಶ್ವರ ಹಾಗೂ ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ ಭವ್ವರಲಾಲ್ ಆರ್ಯ ಇದ್ದರು.












Click it and Unblock the Notifications