ಪಾಕಿಸ್ತಾನದ ಲಾಹೋರ್‌ನಲ್ಲಿ ಗಣೇಶನ ಮೂರ್ತಿ ಕೂರಿಸುತ್ತೇವೆ-ಬಸನಗೌಡ ಪಾಟೀಲ್‌ ಯತ್ನಾಳ್‌

ಹುಬ್ಬಳ್ಳಿ, 21: 2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಆಗ ಪಾಕಿಸ್ತಾನದ ಲಾಹೋರಿನಲ್ಲಿಯೂ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತೇವೆ. ತಡೆಯುವ ತಾಕತ್ತಿದ್ದರೆ ತಡೆಯಿರಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸವಾಲು ಹಾಕಿದ್ದಾರೆ.

ಹುಬ್ಬಳ್ಳಿ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಕೇಳುವ ಅವಶ್ಯಕತೆ ಇಲ್ಲ. ಪಾಕಿಸ್ತಾನದಲ್ಲಿ ತಿನ್ನೋಕೆ ಅನ್ನವಿಲ್ಲ. ಹೀಗಿರುವಾಗ ಕೆಲವರು ಪಾಕಿಸ್ತಾನಕ್ಕೆ ಜೈ ಅಂತಾರೆ. ಮೋದಿಯವರು ಇನ್ನೊಮ್ಮೆ ಪ್ರಧಾನಿ ಆಗುತ್ತಾರೆ. ಆಗ, ಪಾಕಿಸ್ತಾನ ದಾಟಿ ಅಪ್ಘಾನಿಸ್ತಾನ್ ಬಾರ್ಡರ್‌ವರೆಗೆ ಹೋಗುತ್ತೇವೆ ಎಂದರು.

We Will Install Ganesha Idol In Pakistan-MLA Basanagouda Patil Yatnal

ಇನ್ನು ಮುಂದೆ ಹುಬ್ಬಳ್ಳಿಯ ಈ ಮೈದಾನಕ್ಕೆ ಈದ್ಗಾ ಮೈದಾನ ಎಂದರೆ ಅನ್ಯ ಕೋಮಿನವರಿಗೆ ಹುಟ್ಟಿದಂತೆ. ಈದ್ಗಾ ಬದಲು ವೀರ ರಾಣಿ ಕಿತ್ತೂರು ಚನ್ನಮ್ಮ ಮೈದಾನ ಎಂದು ಕರೆಯಬೇಕು, ಸನಾತನ ಧರ್ಮದ ವಿರುದ್ಧ ಮಾತನಾಡುವವರಿಗೆ ಏಡ್ಸ್ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಈದ್ಗಾ ಮೈದಾನ ಯಾರಪ್ಪನ ಆಸ್ತಿಯೂ ಅಲ್ಲ. ಗಣೇಶೋತ್ಸವದ ಬಳಿಕ ಶೋಕ ಸಭೆ ಮಾಡುವುದಾಗಿ ಹೇಳಿದ್ದ ಅಂಜುಮನ್ ಸಂಸ್ಥೆಗೆ ತಿರುಗೇಟು ನೀಡಿ, ಮಾರನೆ ದಿನವೇ ನಾವು ಗೋಮೂತ್ರ ಸಿಂಪಡಿಸಿ, ಹನುಮಾನ ಚಾಲೀಸ ಪಠಣ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡಿಎಂಕೆ ಜೊತೆಗೆ ಕಾಂಗ್ರೆಸ್ ಒಳ ಒಪ್ಪಂದ ಫಲವಾಗಿ ತಮಿಳುನಾಡಿಗೆ ನೀರು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ರೀತಿಯ ರೈತರ ಬಗ್ಗೆ ಕಾಳಜಿ ಇಲ್ಲ ಕೇವಲ ಸ್ವ ಹಿತಾಸಕ್ತಿಗೋಸ್ಕರ ರಾಜ್ಯವನ್ನು ಬಲಿಕೊಡಲಾಗುತ್ರಿದ್ದು, ಡಿಎಂಕೆ ಜೊತೆಗೆ ಕಾಂಗ್ರೆಸ್ ಒಳ ಒಪ್ಪಂದ ಫಲವಾಗಿ ಕಾವೇರಿ ನೀರು ತಮಿಳುನಾಡಿಗೆ ಬಿಡಲಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದ್ದಾರೆ.

We Will Install Ganesha Idol In Pakistan-MLA Basanagouda Patil Yatnal

ಕಾಂಗ್ರೆಸ್‌ನವರದ್ದು ಡಿಎಂಕೆ ಜೊತೆ ಒಳ ಒಪ್ಪಂದವಿದ್ದು, ಮೊದಲಿನಿಂದಲೂ ಇದು ಇದೆ. ಚುನಾವಣೆ ಸಲುವಾಗಿ ತಮಿಳುನಾಡಿನಿಗೆ ನೀರು ರಾಜ್ಯ ಸರ್ಕಾರ ಬಿಡುತ್ತಿದೆ. ಲೋಕಸಭಾ ಚುಣಾವಣೆಗಾಗಿ ಕಾಂಗ್ರೆಸ್ ಕರ್ನಾಟಕ ಜನತೆಗೆ ಮೋಸ ಮಾಡುತ್ತಿದ್ದು,ಕರ್ನಾಟಕದ ಜನತೆಗೆ ದ್ರೋಹ ಮಾಡುವುದು ಸರಿಯಲ್ಲ ಎಂದು ಹೇಳಿದರು.

ನಮಲ್ಲಿ ದಟ್ಟವಾದ ಬರಗಾಲ ಇದೆ ಇಂತಹ ಸಂದರ್ಭದಲ್ಲಿ ನೀರು ಬಿಡುವುದು ಯಾವ ನ್ಯಾಯ. ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾಗಿ ರಾಜ್ಯ ಸರ್ಕಾರ ವಾದ ಮಾಡಿಲ್ಲ. ಕರ್ನಾಟಕದ ರೈತರು ಆತ್ಮಹತ್ಯೆ ದಾರಿ ಹಿಡಿಯಲು ಕಾಂಗ್ರೆಸ್ ಸರ್ಕಾರ ಕಾರಣ. ಕಾಂಗ್ರೆಸ್‌ ಸರ್ಕಾರ ಕೂಡಲೇ ವಿಧಾನಸಭೆ ವಿಸರ್ಜನೆ ಮಾಡಬೇಕು ಎಂದು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+