Ganesh chaturthi 2023: ನಮಾಜ್ ವಿಷಯಕ್ಕೆ ಕೋರ್ಟ್‌ಗೆ ಹೋಗಬೇಕಾಗುತ್ತದೆ, ಮುತಾಲಿಕ್ ಹೀಗೆ ಹೇಳಿದ್ದು ಯಾರಿಗೆ ಮತ್ತು ಯಾಕೆ?
ಹುಬ್ಬಳ್ಳಿ, ಸೆಪ್ಟೆಂಬರ್, 21: ರಾಣಿ ಚೆನ್ನಮ್ಮ( ಈದ್ಗಾ) ಮೈದಾನದಲ್ಲಿ ನಮಾಜ್ ಮಾಡದಂತೆ ಕೋರ್ಟ್‌ಗೆ ಹೋಗುತ್ತೇವೆ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ
ಪ್ರಮೋದ್ ಮುತಾಲಿಕ್ ಅಂಜುಮನ್ ಕಮಿಟಿ ವಿರುದ್ಧ ವಾಗ್ದಾಳಿ ನಡೆಸಿದರು.
ಈದ್ಗಾ ಮೈದಾನದಲ್ಲಿನ ಗಣಪತಿ ದರ್ಶನ ಪಡೆದು ಮಾತನಾಡಿದ ಅವರು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಯಾವುದೇ ಗೊಂದಲ್ಲ ಇಲ್ಲದೆ ಹಿಂದೂ ಸಮಾಜ ಶಾಂತಿಯಿಂದ ಗಣೇಶ ಪ್ರತಿಷ್ಠಾಪನೆ ಮಾಡಿದೆ. ಇದರಿಂದ ಈದ್ಗಾ ಮೈದಾನ ಶುದ್ಧಿಯಾಗಿದೆ ಎಂದು ಹೇಳಿದರು.

ದೇಶ ವಿರೋಧಿಗಳು, ಅಧರ್ಮಿಯರು ಗಣೇಶ ಉತ್ಸವಕ್ಕೆ ವಿರೋಧ ಮಾಡಿದ್ದರು. ನಾವು ಅದನ್ನು ಮೆಟ್ಟಿ ನಿಂತು ಆಚರಣೆ ಮಾಡಿದ್ದೇವೆ ಎಂದು ಹೇಳುವ ಮೂಲಕ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದ ಅಂಜುಮನ್ ಕಮಿಟಿ ವಿರುದ್ಧ ಮುತಾಲಿಕ್ ವಾಗ್ದಾಳಿ ನಡೆಸಿದರು. ಅಲ್ಲದೆ ಹಿಂದೂ ಸಮಾಜವನ್ನು ಕೆಣಕಿದರೆ ನಾವು ಮಸೀದಿಯಲ್ಲಿ ಗಣಪತಿ ಕೂರಿಸುತ್ತೇವೆ. ಮಸೀದಿಯಲ್ಲಿ ಗಣೇಶ ಕೂರಿಸುವ ತಾಕತ್ತು ನಮಗಿದೆ. ನೀವು ಮಾಡುವ ನಮಾಜ್ ವಿರುದ್ದ ಕೋರ್ಟ್‌ಗೆ ಹೋಗುತ್ತೇವೆ. ಹಿಂದೂ ಸಮಾಜ ಜಾಗೃತಿ ಆಗಿದ್ದು, ಇಂದು ಗಣೇಶ ವಿಸರ್ಜನೆ ಶಾಂತಿಯುತವಾಗಿ ಆಗುತ್ತದೆ ಎಂದರು.
ನಾವು 100 ಕೋಟಿ ಹಿಂದೂಗಳಿದ್ದೇವೆ. ಅಂಜುಮನ್ ಕೋರ್ಟ್‌ಗೆ ಹೋಗುತ್ತನೇ ಅನ್ನುವುದು ಸರಿಯಲ್ಲ. ಇದೇನು ಪಾಕಿಸ್ತಾನ ಅಲ್ಲ, ಅಫಘಾನಿಸ್ತಾನ ಅಲ್ಲ.
ಇದು ನಮ್ಮ ನೆಲ, ಮೈದಾನ ಪಾಲಿಕೆ ಆಸ್ತಿ ಎಂದರು. ಇನ್ನು ನಿನ್ನೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯೂಸುಫ್ ಸವಣೂರ ಕೇಸ್ ಇನ್ನು ಮುಗಿದಲ್ಲ, ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದರು. ಆದ್ದರಿಂದ ಅಂಜುಮನ್ ಅಧ್ಯಕ್ಷರಿಗೆ ಮುತಾಲಿಕ್ ತಿರುಗೇಟು ನೀಡಿದ್ದು, ನಾವು ನಮಾಜ್ ವಿಷಯಕ್ಕೆ ಕೋರ್ಟ್‌ಗೆ ಹೋಗಬೇಕಾಗತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications