ಹು-ಧಾ ಎಸ್ಸಿ, ಎಸ್ಟಿ ಸಮುದಾಯದ 45 ಕೋಟಿ ನೀರಿನ ಬಿಲ್ ಬಾಕಿ ಮನ್ನಾ

Written By: Basavaraj
Subscribe to Oneindia Kannada

ಹುಬ್ಬಳ್ಳಿ, ಜುಲೈ 12: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರು ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಅದೇನು ಅಂತೀರಾ? ಕೊಳೆಗೇರಿ ವಾಸಿಗಳು ಹಾಗೂ ಎಸ್ ಸಿ-ಎಸ್ ಟಿ ವರ್ಗದವರ ಕುಡಿಯವ ನೀರಿನ ಬಿಲ್ ಬಾಕಿಯನ್ನು ಮನ್ನಾ ಮಾಡಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಇನ್ಮುಂದೆ SC/ST ಗುತ್ತಿಗೆದಾರರಿಗೆ ಟೆಂಡರ್ ನಲ್ಲೂ ಮೀಸಲಾತಿ

ಈಗಾಗಲೇ ಹಲವು ಭಾಗ್ಯಗಳನ್ನು ಕಲ್ಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಚುನಾವಣೆ ಗುಂಗಿನಲ್ಲಿ ಈ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಎಸ್ಸಿ, ಎಸ್ಟಿ ಮತ್ತು ಕೊಳಗೇರಿ ಪ್ರದೇಶಗಳು, ರೈತಾಪಿ ಜನರು ವಾಸಿಸುವ ಗ್ರಾಮೀಣ ಜನರು ಹೊಂದಿರುವ ನೀರಿನ ಬಾಕಿ ಮೊತ್ತ ಹಾಗೂ ಕುಟುಂಬಗಳ ಬಗ್ಗೆ ಮಾಹಿತಿ ನೀಡುವಂತೆ ಕಳೆದ ತಿಂಗಳು ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯು ಜಲಮಂಡಳಿಗೆ ನಿರ್ದೇಶನ ನೀಡಿದೆ.

Water bill pending of SC, ST's in Hubballi- Dharwad waive off by government

ನಲವತ್ತೈದು ಕೋಟಿ ರುಪಾಯಿ ಮನ್ನಾ
ಇಲಾಖೆಯ ಸೂಚನೆಯಂತೆ ಒಂದು ತಿಂಗಳಿಂದ ಜಲಮಂಡಳಿಯ ಹುಬ್ಬಳ್ಳಿ ಮತ್ತು ಧಾರವಾಡ ವಿಭಾಗದ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ದೊರೆತ ಮಾಹಿತಿ ಪ್ರಕಾರ ಅವಳಿ ನಗರದಲ್ಲಿ ನಳ ಸಂಪರ್ಕ ಹೊಂದಿರುವವರ ಶೇ. 37ರಷ್ಟು ಕುಟುಂಬಗಳ 45 ಕೋಟಿ ರುಪಾಯಿ ಬಾಕಿ ಇದೆ ಎಂದು ಅಂದಾಜಿಸಿದೆ.

ಹೊಂದಾಣಿಕೆ ಹೇಗೆ?
ಖರ್ಚಾಗದೇ ಉಳಿದಿರುವ ಪರಿಶಿಷ್ಟ ಜಾತಿ, ಪಂಗಡದ ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟ ವಿಶೇಷ ಘಟಕ ಯೋಜನೆ ಅನುದಾನವನ್ನು ಈ ನೀರಿನ ಬಿಲ್ ಮನ್ನಾ ಯೋಜನೆಗೆ ಬಳಸಿಕೊಳ್ಳುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಸರಕಾರ ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂಥದ್ದೊಂದು ಪ್ರಯೋಗ ಮಾಡಿ, ನೀರಿನ ಬಿಲ್ ಮನ್ನಾ ಮಾಡಿದೆ.

ಬಿಡಿಎನಿಂದ ಎಸ್ಸಿ, ಎಸ್ ಟಿಗೆ 6.7 ಲಕ್ಷಕ್ಕೆ ಒಂದು ಬಿಎಚ್ ಕೆ ಫ್ಲಾಟ್

ಅಷ್ಟೇ ಅಲ್ಲ, ಹತ್ತು ಲೀಟರ್ ನೀರು ಪುಕ್ಕಟೆ ಪೂರೈಸಲು ವಾಗ್ದಾನ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಮಾಹಿತಿ ಕಷ್ಟ
ಎಸ್ಸಿ, ಎಸ್ಟಿ ಮತ್ತು ಕೊಳಗೇರಿ ಪ್ರದೇಶಗಳ ನಿವಾಸಿಗಳ ನೀರಿನ ಬಿಲ್ ಬಗ್ಗೆ ಮಾಹಿತಿ ಸಂಗ್ರಹಿಸಿ, ಪ್ರಸ್ತಾವ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದ್ದು ನಿಜ. ಆದರೆ ಎಸ್ಸಿ, ಎಸ್ಟಿ ಸಮುದಾಯದವರೇ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಬಗ್ಗೆ ಖಚಿತವಾಗಿ ಗುರುತಿಸುವುದು ಕಷ್ಟಸಾಧ್ಯ.

ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎನ್ನುತ್ತಾರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State government thinking to waive off Water bill pending of SC, ST's in Hubballi- Dharwa.
Please Wait while comments are loading...