BJP Meeting: ಬಿಜೆಪಿ ಡ್ಯಾಮೆಜ್ ಕಂಟ್ರೋಲ್, ಶಾಸಕ ಯತ್ನಾಳ್ ಬಗ್ಗೆ ವಿ.ಸೋಮಣ್ಣ ಹೇಳಿದ್ದೇನು?
ಹುಬ್ಬಳ್ಳಿ, ಡಿಸೆಂಬರ್ 08: ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರಿ ಕಮಿಟಿ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ಎಸ್‌ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ನಿರ್ಧರಿಸಲಾಗಿದೆ. ಇತ್ತ ಶಾಸಕ ಬಸನಗೌಡ್ ಪಾಟೀಲ್ ಯತ್ನಾಳ್ ಅವರ ಕುರಿತು ಚರ್ಚೆ ನಡೆಸಿದೆ. ಹಾಗಾದರೆ ಬಿಜೆಪಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಯಿತಾ? ಏನೆಲ್ಲ ಚರ್ಚೆ ನಡೆಯಿತು ಎಂಬುದರ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿದ್ದಾರೆ.
ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕರ್ನಾಟಕ ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಡ್ಯಾಮೇಜೋ ಇಲ್ಲ ಕಂಟ್ರೋಲ್ ಮಾಡುತ್ತಿಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ದೊಡ್ಡವರ ಸೂಚನೆಯಂತೆ ಸಭೆ ನಡೆಸಲಾಗಿದೆ ಎಂದರು.

ಬಿಜೆಪಿಯಲ್ಲಿ ಡ್ಯಾಮೇಜು ಆಗಿಲ್ಲ, ಯಾವ ಕಂಟ್ರೋಲು ಇಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ. ಇಂದಿನ ಪರಿಸ್ಥಿತಿ ಸಂದರ್ಭವನ್ನು ರಾಜ್ಯ ಸರ್ಕಾರದ ವೈಖರಿ ಅರ್ಥ ಮಾಡಿಕೊಂಡು ಹೋಗಬೇಕಾಗುತ್ತದೆ. ಸಭೆ ಸೇರುವುದು ವರಿಷ್ಠರ ಸೂಚನೆ ಆಗಿದೆ. ರಾಜ್ಯ ಸರ್ಕಾರದ ವೈಪಲ್ಯಗಳ ವಿರುದ್ಧ ಬಿಜೆಪಿಯ ಹೋರಾಟಕ್ಕೆ ಮುಂದುವರಿಯುತ್ತವೆ. ಬಿಜೆಪಿಯಲ್ಲಿ ಒಂದೇ ಬಣ ಎಂದು ಅವರು ಉತ್ತರಿಸಿದರು.
ಬಣ ರಾಜಕಾರಣ ಇಲ್ಲ, ಒಗ್ಗೂಡಬೇಕು
ಹೋರಾಟ ಮುಂದಿನ ಹಂತಕ್ಕೆ ಹೋಗಲಿದೆ. ನಮ್ಮಲ್ಲಿ ಬಣ ಇಲ್ಲ. ವರಿಷ್ಠರ ಸೂಚನೆ ಮೆರೆಗೆ ನಾಯಕರು ಸಭೆ ಸೇರಿದ್ದು, ನೆನ್ನೆಯ ಕೋರ್ ಕಮಿಟಿ ಸಭೆಯಲ್ಲಿ ಯಾವೆಲ್ಲ ವಿಷಯಗಳು ಚರ್ಚೆ ಆಗಿವೆ ಎಂಬುದು ನನಗೆ ಪೂರ್ಣ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಯಾವುದೇ ಬಣ ರಾಜಕಾರಣ ಬಿಜೆಪಿಯಲ್ಲಿ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ಒಗ್ಗಟ್ಟಾಗಿ ಹೋರಾಟದ ಮಾಡುವುದು ಬಿಜೆಪಿ ಉದ್ದೇಶವಾಗಿದೆ. ಎಲ್ಲರೂ ಒಗ್ಗೂಡಿಸಿ ಒಗ್ಗಟ್ಟಾಗಿ ಹೋರಾಟ ನಡೆಸುವುದು ನಮ್ಮ ಕರ್ತವ್ಯ. ಸರ್ಕಾರ ವೈಪಲ್ಯ ವಿರುದ್ಧ ಬಿಜೆಪಿ ಹೋರಾಡಲಿದೆ. ಕಾಂಗ್ರೆಸ್ ಆಡಳಿತ ವೈಖರಿ ಖಂಡಿಸಬೇಕಾಗಿದೆ. ಆದ್ದರಿಂದ ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ.

ಎಂಬಿ ರೇಣುಕಾಚಾರ್ಯ ವಿರುದ್ಧ ಸಚಿವರ ಅಸಮಾಧಾನ
ಈಗಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಹೇಳಿದ್ದು. ಇದಕ್ಕೆ ಇನ್ನಷ್ಟು ಪುಷ್ಟಿ ಕೊಡುವುದು ಬೇಡ. ದೇಶಕ್ಕೆ ಒಳ್ಳೆಯ ಭವಿಷ್ಯ ಇದೆ ಎಂದಷ್ಟೇ ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕಳಕಳಿ ಇದೆ ಅವರ ಸಂದೇಶದಂತೆ ಎಲ್ಲರೂ ನಡೆದುಕೊಳ್ಳಬೇಕು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿರುವ ಎಂ.ಪಿ. ರೇಣುಕಾಚಾರ್ಯ ಅವರು ಕುರಿತು ವಿ.ಸೋಮಣ್ಣ ಅವರು ಪ್ರತಿಕ್ರಿಯಸಲು ನಿರಾಕರಿಸಿದರು. ಜೊತೆಗೆ ಎಂಪಿ ರೇಣುಕಾಚಾರ್ಯ ಅವರ ನಡೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಈ ಸಭೆಯಲ್ಲಿ ಬಸನಗೌಡ ಯತ್ನಾಳ್ ಹೇಳಿಕೆ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಆದರೆ ಈ ವಿಷಾರ ಕೇಂದ್ರ ಹೈಕಮಾಂಡ್ ಮುಂದಿರುವ ಕಾರಣ ಕಾದು ನೋಡೋಣ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ನಾಯಕರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications