ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾರು ಕುರ್ಚಿ, ಜೀಪು ಟೇಬಲ್!

Posted By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 27 : ನೂರು ವರ್ಷದ ಹಿಂದಿನ ಜೀಪು ಇದೆ. ಓಬಿರಾಯನ ಕಾಲದ ಕಾರು ಇದೆ. ಇದನ್ನು ನೋಡಿ ಒಂದು ರೈಡ್ ಹೋಗಬೇಕು ಅನಿಸುತ್ತೆ. ಆದರೆ, ಇದರಲ್ಲಿ ರೈಡ್ ಹೋಗಲು ಸಾಧ್ಯವಿಲ್ಲ. ಕುಳಿತು ಊಟ ಮಾಡಬಹುದು.

ಹುಬ್ಬಳ್ಳಿ ಹೊರವಲಯದ ಕಲಘಟಗಿ ರಸ್ತೆಯಲ್ಲಿರುವ 'ಫುಡ್ ವಿಲೇಜ್' ಹೋಟೆಲ್ ತನ್ನ ವಿಶೇಷ ವಿನ್ಯಾಸದಿಂದಲೇ ಜನರನ್ನು ಸೆಳೆಯುತ್ತಿದೆ. ಮಾಲೀಕರು ಚಾಣಾಕ್ಷತನದಿಂದ ಅದ್ಭುತವಾದ ಹೋಟೆಲ್ ನಿರ್ಮಿಸಿದ್ದು, ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

ರೆಸ್ಟೋರೆಂಟ್ ಗಳಲ್ಲಿ ಬೆಲೆ ಇಳಿಕೆ, ಇಡ್ಲಿ, ಕಾಫಿ ಬೆಲೆ ಎಷ್ಟು?

ವಾಹನಗಳ ಕವಚವನ್ನು ಉಪಯೋಗಿಸಿಕೊಂಡು ಹೋಟೆಲ್ ವಿನ್ಯಾಸ ಮಾಡಿರುವುದು ವಿಶೇಷ. ವಾಹನಗಳ ಕವಚವನ್ನು ಕೂರುವ ಕುರ್ಚಿ, ಬೇಂಜುಗಳನ್ನಾಗಿ ಮಾಡಲಾಗಿದೆ. ಸುಮಾರು ಎರಡು ವರ್ಷಗಳ ಪರಿಶ್ರಮದ ಬಳಿಕ ಹೋಟೆಲ್ ಸಿದ್ಧವಾಗಿದೆ.

ಮಲ್ಲೇಶ್ವರದ ಬ್ರಾಹ್ಮಿನ್ಸ್ ಚಾಟ್ಸ್ ಸೆಂಟರ್ ನಲ್ಲಿ 10 ರುಪಾಯಿಗೆ ಊಟ

ಗ್ರಾಹಕರನ್ನು ಸೆಳೆಯಲು ಏನಾದರೂ ವಿನೂತನ ಪ್ರಯೋಗ ಮಾಡಬೇಕು ಎಂಬುದು 'ಫುಡ್ ವಿಲೇಜ್' ಮಾಲೀಕ ಅಕ್ಷಯ್ ಅಗರವಾಲ್ ಅವರ ಕನಸಾಗಿತ್ತು. ಆದ್ದರಿಂದ, ವಿನೂತನ ವಿನ್ಯಾಸವನ್ನು ಮಾಡಿಸಿದ್ದಾರೆ. ವಾರಾಂತ್ಯದಲ್ಲಿ ಈ ಹೋಟೆಲ್‌ ಜನರಿಂದ ತುಂಬಿ ತುಳುಕುತ್ತಿರುತ್ತದೆ.

ಬಿಡಿ ಭಾಗಗಳು ಚೇರ್, ಬೇಂಚ್

ಬಿಡಿ ಭಾಗಗಳು ಚೇರ್, ಬೇಂಚ್

ಗ್ಯಾರೇಜ್‌ಗಳಲ್ಲಿ ಮೂಲೆಗೆ ಬಿದ್ದಿರುವ ವಾಹನಗಳ ಬಿಡಿ ಭಾಗಗಳನ್ನು ಖರೀದಿಸಿ, ವಿನೂತನ ವಿನ್ಯಾಸ ಮಾಡಿಸಿ ಬಳಸಲಾಗಿದೆ. ಇದರಿಂದಾಗಿ ಇಡೀ ಹೋಟೆಲ್ ಹೊಸ ಅನುಭವವನ್ನು ನೀಡುತ್ತದೆ. ಇದಕ್ಕೆ 'ಫುಡ್ ವಿಲೇಜ್' ಅಂತ ಹೆಸರಿಡಲಾಗಿದೆ. ಬೇರೆ ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಇರುವ ವೆರೈಟಿ ಫುಡ್ ಬಿಟ್ಟು ಬೇರೆ ರೀತಿಯಲ್ಲಿ ಇಲ್ಲಿ ವೆಜ್ ಮತ್ತು ನಾನ್ ವೆಜ್ ಖಾದ್ಯಗಳು ಸಿಗುತ್ತವೆ.

ಕಣ್ಣಿಗೆ ಆನಂದ, ಹೊಟ್ಟೆಗೆ ತಂಪು

ಕಣ್ಣಿಗೆ ಆನಂದ, ಹೊಟ್ಟೆಗೆ ತಂಪು

ಕುರ್ಚಿ, ಬೆಂಚು ಸೇರಿದಂತೆ ಇಲ್ಲಿರೋ ಪ್ರತಿಯೊಂದು ವಸ್ತುಗಳೂ ಇಲ್ಲಿಗೆ ಬರುವ ಜನರನ್ನು ಆಕರ್ಷಿಸುತ್ತವೆ. ತಿನ್ನಲು ಏನಾದರೂ ಆರ್ಡರ್ ಮಾಡಿದ ಮೇಲೆ ಅವುಗಳನ್ನ ತರುವ ಟ್ರೇ ಕೂಡ ತುಂಬಾ ವಿಶಿಷ್ಟವಾಗಿದೆ.

ಮಾಲೀಕರ ಶ್ರಮ

ಮಾಲೀಕರ ಶ್ರಮ

ಅಕ್ಷಯ್ ಅಗರವಾಲ್ 'ಫುಡ್ ವಿಲೇಜ್' ಆರಂಭಿಸಲು ಸಾಕಷ್ಟು ಶ್ರಮ ಪಟ್ಟಿದ್ದಾರೆ.

ಗೋವಾ, ಮಹಾರಾಷ್ಟ್ರ, ಪಂಜಾಬ್ ಹಾಗೂ ಹಂಪಿ ಸೇರಿದಂತೆ ಬೇರೆ-ಬೇರೆ ಕಡೆ ಇಂತಹ ವಿಶೇಷ ವಿನ್ಯಾಸದ ಹೋಟೆಲ್‌ಗಳಿಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಈ ಹೋಟೆಲ್ ನಿರ್ಮಾಣವಾಗಿದೆ.

ಕಾರು, ಟ್ರಾಕ್ಟರ್ ಎಲ್ಲಾ ಇದೆ

ಕಾರು, ಟ್ರಾಕ್ಟರ್ ಎಲ್ಲಾ ಇದೆ

ಅಂಬಾಸಿಡರ್ ಕಾರಿನ ಮುಂಭಾಗ, ಸೀಟುಗಳು, ಟ್ರಾಕ್ಟರ್, ಕಾರಿನ ಬಾನೆಟ್ ಮತ್ತು ಸ್ಕೂಟರ್ ಬಳಸಿ ಆಸನ ಹಾಗೂ ಟೇಬಲ್‌ಗಳನ್ನು ನಿರ್ಮಾಣ ಮಾಡಲಾಗಿದೆ. ವಾರಂತ್ಯದಲ್ಲಂತೂ 'ಫುಡ್ ವಿಲೇಜ್‌'ನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ.

ಪಂಜಾಬ್‌ನಿಂದ ತಂದಿದ್ದಾರೆ

ಪಂಜಾಬ್‌ನಿಂದ ತಂದಿದ್ದಾರೆ

ಮೂರುವರೆ ಸಾವಿರ ಚದರಡಿ ಜಾಗದಲ್ಲಿ ಇಂತಹ ಒಂದು ವಿನ್ಯಾಸದ ಹೋಟೆಲ್ ನಿರ್ಮಾಣವಾಗಿದೆ. ಇದಕ್ಕಾಗಿ 2 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಪಂಜಾಬ್‌ ರಾಜ್ಯದಿಂದ ಹಲವು ವಸ್ತುಗಳನ್ನು ಖರೀದಿ ತಂದು ಹೋಟೆಲ್ ನಿರ್ಮಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Village food a unique hotel in Hubballi, Kalghatgi road. Old vehicle parts used as table and chair in this hotel.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ