ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಮರಗಳಿಗೆ ಕೊಡಲಿ: ಆಕ್ರೋಶ
ಹುಬ್ಬಳ್ಳಿ, ಜನವರಿ 17: ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಮರಗಳ ಮಾರಣ ಹೋಮ ಮಾಡಲಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಜನವರಿ 18 ಕ್ಕೆ ಅಮಿತ್ ಶಾ ಕಾರ್ಯಕ್ರಮವಿದೆ. ಹಾಗಾಗಿ ನೆಹರು ಮೈದಾನವನ್ನು ಸಜ್ಜುಗೊಳಿಸಲಾಗಿದೆ.
ಹೀಗೆ ಸಜ್ಜುಗೊಳಿಸುವಾಗ ನೆಹರೂ ಮೈದಾನ ರಸ್ತೆ ಬದಿಯಲ್ಲಿದ್ದ ಹಲವು ಹೊಂಗೆ ಮರಗಳನ್ನು ಪಾಲಿಕೆ ಸಿಬ್ಬಂದಿ ಕಡಿದುಹಾಕಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಂಗೆ ಮರದ ಟೊಂಗೆಗಳನ್ನು ಕಡಿಯಲು ಪೊಲೀಸ್ ಅಧಿಕಾರಿಗಳು ಸೂಚಿಸಿದ್ದರು. ಭದ್ರತಾ ದೃಷ್ಟಿಯಿಂದ ಟೊಂಗೆಗಳನ್ನು ಕಡಿಯಲು ಸೂಚಿಸಲಾಗಿತ್ತು. ಆದರೆ ಪಾಲಿಕೆ ಸಿಬ್ಬಂದಿ ಮರಗಳನ್ನೇ ಕಡಿದುಬಿಟ್ಟಿದ್ದಾರೆ.
ಬುಡ ಸಮೇತ ಮರಗಳನ್ನು ಕಡಿದಿರುವ ಬಗ್ಗೆ ಸ್ಥಳೀಯರು ಪಾಲಿಕೆ ವಿರುದ್ಧ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಅವರು ಜನವರಿ 18 ಕ್ಕೆ ರಾಜ್ಯಕ್ಕೆ ಬರಲಿದ್ದು, ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆಯೂ ಅಮಿತ್ ಶಾ ಮಾತುಕತೆ ನಡೆಸಲಿದ್ದಾರೆ.











Click it and Unblock the Notifications