ಹುಬ್ಬಳ್ಳಿಯಲ್ಲಿ ಮೂವರು ಅಪ್ರಾಪ್ತ ಬಾಲಕರು ನಾಪತ್ತೆ, ಇತರೆ ಸುದ್ದಿ

Posted By:
Subscribe to Oneindia Kannada

ಹುಬ್ಬಳ್ಳಿ, ಡಿಸೆಂಬರ್, 3: ಇಲ್ಲಿಯ ಸೋನಿಯಾ ಗಾಂಧಿ ನಗರದ ಮೂವರು ಬಾಲಕರು ಮನೆಯಲ್ಲಿದ್ದ ಹಣವನ್ನು ಕಳ್ಳತನ ಮಾಡಿ ನ. 25 ರಂದು ನಾಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸುಶಾಂತ ಮಾರುತಿ ಬಿಲಾನ (16), ಶಿವಾ ವಜ್ಜಣ್ಣನವರ (16) ವಿನಾಯಕ ದಾವಲ್ ವಜ್ಜಣ್ಣವರ (17) ನಾಪತ್ತೆಯಾದ ಬಾಲಕರಾಗಿದ್ದಾರೆ.

Three children theft the money and missing from Hubballi

ಸುಶಾಂತ ಎಂಬಾತ ತನ್ನ ಮನೆಯಲ್ಲಿದ್ದ 12 ಸಾವಿರ ರೂ.ಗಳನ್ನು ತೆಗೆದುಕೊಂಡು ಇತರ ಇಬ್ಬರ ಜೊತೆಗೆ ಮನೆಯಿಂದ ನಾಪತ್ತೆಯಾಗಿದ್ದಾನೆ ಎಂದು ಹಳೇಹುಬ್ಬಳ್ಳಿಯ ಕರಿಯಮ್ಮ ಮಾರುತಿ ಬಿಲಾನಾ ಎಂಬುವವರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಭಾರಿ ಕಳ್ಳತನ :

ಹಳೇಹುಬ್ಬಳ್ಳಿಯ ಆರ್. ಎಂ. ಲೋಹಿಯಾನಗರದ ವಿಶಾಲ ಬೊಂಗಲೆ ಎಂಬುವವರ ಮನೆ ಕೀಲಿ ಮುರಿದು 27 ಗ್ರಾಂ. ತೂಕದ ಬಂಗಾರದ ಆಭರಣ ಮತ್ತು 675 ಗ್ರಾಂ ತೂಕದ ಬೆಳ್ಳಿ, ನಗದು ಸೇರಿದಂತೆ ಒಟ್ಟು 1,47,750 ರೂ.ಮೌಲ್ಯದ ವಸ್ತುಗಳನ್ನು ನ.3 ರಂದು ಕಳ್ಳತನ ಮಾಡಲಾಗಿದೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಂಡ:

ಸಂಚಾರ ನಿಯಮ ಉಲ್ಲಂಘನೆ ಮಾಡಿದ 641 ಕೇಸ ದಾಖಲಿಸಿ 97,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three children missing from Hubballi, On November 25th after theft Money worth Rs. 12 Thousand, from there self houses. parents lodged compliant in Bandigeri police station.
Please Wait while comments are loading...