ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ : ಕಿಮ್ಸ್‌ನಲ್ಲಿ ಬೈಕ್, ಮೊಬೈಲ್ ಕಳ್ಳರ ಪಾಲು

By ನಮ್ಮ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 11 : ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಸಂಜೀವಿನಿ ಎಂದು ಖ್ಯಾತಿ ಪಡೆದಿದೆ. ರೋಗಿಗಳ ಜೀವ ಉಳಿಸುವ ಆಸ್ಪತ್ರೆಯಲ್ಲಿ, ರೋಗಿಗಳ ಜೊತೆ ಬರುವವರಿಗೆ ರಕ್ಷಣೆ ಇಲ್ಲದಂತಾಗಿದೆ. ಆಸ್ಪತ್ರೆಯಲ್ಲಿ ಕಳ್ಳರ ಕಾಟ ಹೆಚ್ಚಾಗುತ್ತಿದೆ.

ಕಿಮ್ಸ್ ಆಸ್ಪತ್ರೆಗೆ ಪ್ರತಿದಿನ ನೂರಾರು ರೋಗಿಗಳು ಬರುತ್ತಾರೆ. ಆಸ್ಪತ್ರೆಗೆ ಬರುವ ರೋಗಿಗಳ ಹಾಗೂ ಸಂಬಂಧಿಕರ ಅಮೂಲ್ಯವಾದ ವಸ್ತುಗಳು ಕಳ್ಳರ ಪಾಲಾಗುತ್ತಿವೆ. ಕಳ್ಳರ ಹಾವಾಳಿಯಿಂದ ರೋಗಿಗಳು ಹಾಗೂ ಅವರ ಜೊತೆ ಬರುವವರು ಹೈರಾಣಾಗಿದ್ದಾರೆ.

ಹುಬ್ಬಳ್ಳಿ ಕಿಮ್ಸ್ ನಲ್ಲಿ ಪಾರ್ಕಿಂಗ್ ನಿರ್ವಹಣೆ ಬೇಕಿತ್ತಾ?ಹುಬ್ಬಳ್ಳಿ ಕಿಮ್ಸ್ ನಲ್ಲಿ ಪಾರ್ಕಿಂಗ್ ನಿರ್ವಹಣೆ ಬೇಕಿತ್ತಾ?

hubballi

ಆಸ್ಪತ್ರೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಮೊಬೈಲ್, ಹಣ, ಬೈಕ್ ಕಳ್ಳರ ಪಾಲಾಗುತ್ತದೆ. ಕಿಮ್ಸ್ ಆಸ್ಪತ್ರೆಯ ಚಿಕ್ಕ ಮಕ್ಕಳ ಆಸ್ಪತ್ರೆಯಲ್ಲಿ ಮೊಬೈಲ್ ಹಾಗೂ ಬೈಕ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಕಿಮ್ಸ್ ಆಸ್ಪತ್ರೆಗೆ ಬರುವ ಜನರು ಕಳ್ಳರ ಹಾವಳಿಯಿಂದ ಬೇಸತ್ತು ಹೋಗಿದ್ದು, ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಜಯದೇವ ನೆರವಿನಿಂದ ಕಿಮ್ಸ್ ಹೃದ್ರೋಗ ವಿಭಾಗ ಅಭಿವೃದ್ಧಿಜಯದೇವ ನೆರವಿನಿಂದ ಕಿಮ್ಸ್ ಹೃದ್ರೋಗ ವಿಭಾಗ ಅಭಿವೃದ್ಧಿ

ಎರಡು ವಾರದ ಹಿಂದೆ ಬೈಕ್‌ಗಳ ಸರಣಿ ಕಳ್ಳತನ ನಡೆದಿತ್ತು. ಇಂದು ಮತ್ತೆ ಗದಗ ಮೂಲದ ಬಸವರಾಜ್ ಎಂಬುವರ ಬೈಕ್ ಕಳ್ಳತನವಾಗಿದೆ. ಆಸ್ಪತ್ರೆಗೆ ಬರುವವರನ್ನು ಟಾರ್ಗೆಟ್ ಮಾಡಿ ಕಳ್ಳತನ ನಡೆಸುವ ದೊಡ್ಡ ಜಾಲವೇ ಇರಬಹುದು ಎಂದು ಶಂಕಿಸಲಾಗಿದೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಬಡ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಅವರಿಗೆ ರಕ್ಷಣೆ ನೀಡಿ, ಕಳ್ಳರ ಕಾಟಕ್ಕೆ ತಡೆ ಹಾಕಬೇಕಾದ ಕೆಲಸವನ್ನು ಕಿಮ್ಸ್ ಆಸ್ಪತ್ರೆ ಭದ್ರತಾ ಸಿಬ್ಬಂದಿ ಮತ್ತು ವಿದ್ಯಾನಗರ ಪೊಲೀಸರು ಮಾಡಬೇಕಿದೆ.

English summary
Cash, mobile phone, Bike series of incidents of alleged theft reported at Hubballi Karnataka Institute of Medical Sciences (KIMS) hospital. Patients demanded for security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X