Get Updates
Get notified of breaking news, exclusive insights, and must-see stories!

ಇಂಗ್ಲಿಷ್ ಮಾತನಾಡಿಸುವ ಚಾಲೆಂಜ್: 35 ವರ್ಷಗಳಿಂದ ಸೋಲಿಲ್ಲದ ಸರದಾರ ಈ ದೇವಪ್ಪಜ್ಜ

ಹುಬ್ಬಳ್ಳಿ, ಅಕ್ಟೋಬರ್ 31: ಕನ್ನಡ ಕನ್ನಡ ಎಲ್ಲೆಲ್ಲೂ ಕನ್ನಡ ಅನ್ನುವ ನಾವು ಈಗ ಕನ್ನಡವನ್ನು ಹುಡುಕುವ ಸಂದರ್ಭ ಬಂದೊದಗಿದೆ. ಇಂಗ್ಲಿಷ್ ವ್ಯಾಮೋಹ ಹಾಗೂ ಬೇರೆ ಭಾಷೆಗಳ ದಬ್ಬಾಳಿಕೆಯಿಂದ ಕನ್ನಡ ನಿಧಾನವಾಗಿ ಕಣ್ಮರೆಯಾಗುತ್ತಾ ಹೋಗುತ್ತಿದೆ. ಈಗಾಗಲೇ ಕನ್ನಡ ಭಾಷೆಯೊಳಗೆ ಹಲವಾರು ಭಾಷೆಯ ಪದಗಳು ಹೊಕ್ಕಿದ್ದು, ನಾವು ಕನ್ನಡದಲ್ಲಿ ಉಚ್ಛರಿಸುವುದಕ್ಕಿಂದ ಆ ಭಾಷೆಗಳಲ್ಲೇ ಮಾತನಾಡುವುದನ್ನು ರೂಢಿಸಿಕೊಂಡಿದ್ದೇವೆ.

ಸುಲಿದ ಬಾಳೆಹಣ್ಣಿನಷ್ಟೇ ಸುಲಭ ನಮ್ಮ ಕನ್ನಡ ಭಾಷೆ ಮಾತನಾಡುವುದು. ಭಾಷೆ ಕಲಿತಷ್ಟೂ, ಬಳಸಿದಷ್ಟೂ ಇದರ ಹರಿವು ಹೆಚ್ಚಾಗುತ್ತಲೇ ಹೋಗುತ್ತದೆ. ಆದರೆ, ಅನೇಕ ವರ್ಷಗಳಿಂದ ನಮಗೇ ಗೊತ್ತಿಲ್ಲದಂತೆ ಕನ್ನಡ ಭಾಷೆ ಮಾತನಾಡುತ್ತಾ ಅದರೊಳಗೆ ಆಂಗ್ಲ ಪದಗಳನ್ನು ಸೇರಿಸಿಕೊಂಡು ಬಿಟ್ಟಿದ್ದೇವೆ. ನಮಗರಿವಿಲ್ಲದೆ ಒಂದಷ್ಟು ಆಂಗ್ಲ ಪದಗಳು ನಮ್ಮ ಮಾತುಗಳ, ಚರ್ಚೆಗಳ ನಡುವೆ ಬಂದು ಹೋಗುತ್ತವೆ. ಹೀಗಾಗಿ ನಾವೀಗ ಸ್ವಚ್ಛ ಕನ್ನಡ ಮಾತನಾಡುತ್ತಿಲ್ಲ.ಬದಲಾಗಿ ಕಂಗ್ಲೀಷ್‌ ಮಯವಾಗಿದ್ದೇವೆ.

ಆದರೆ ಇದಕ್ಕೆ ಅಪವಾಧ ಎನ್ನುವಂತೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ದಕ್ಷಿಣ ವೈಷ್ಣೋದೇವಿ ಮಂದಿರದ ಧರ್ಮದರ್ಶಿ ದೇವಪ್ಪಜ್ಜ ಮಾತು ಮತ್ತು ನಡೆ ಕನ್ನಡವಾಗಿಸಿ ಬದುಕುತ್ತಿದ್ದಾರೆ. ಅವರಿಗೆ ಮಧ್ಯರಾತ್ರಿಯಲ್ಲಿ ಎಬ್ಬಿಸಿ ಮಾತಿಗೆಳೆದರೂ ಅವರಿಂದ ಸ್ವಚ್ಛ, ಅಚ್ಛ ಕನ್ನಡದ ಪದಗಳೇ ಹೊರಡುತ್ತವೆ. 'ಅಭಿನಯ ಅಂಡಯ್ಯ' ಎಂದೇ ಹೆಸರಾಗಿರುವ ದೇವಪ್ಪಜ್ಜ ಅವರ ಬಾಯಿಂದ ಆಂಗ್ಲ ಪದಗಳನ್ನು ಹೇಳಿಸಬೇಕು ಎಂದು ಭಾರತದ ಹಲವಾರು ರಾಜ್ಯಗಳಲ್ಲಿ, ವಿದೇಶಗಳಲ್ಲಿ ಸ್ಪರ್ಧೆಗಳು ನಡೆದಿವೆ. ಪ್ರತಿ ನವೆಂಬರ್‌ ಬಂತೆಂದರೆ ಅವರನ್ನು 'ಸೋಲಿಸಲು' ಸ್ಪರ್ಧೆಗಳು ಆಯೋಜನೆಯಾಗುತ್ತಲೇ ಇರುತ್ತವೆ. ಆದರೆ ಒಮ್ಮೆಯೂ ಅವರನ್ನು ಸೋಲಿಸಲು ಸಾಧ್ಯವಾಗಿಲ್ಲ.

ಕನ್ನಡ ಕಂಗ್ಲಿಷ್‌ ಮಯವಾಗಿರುವ ಕಾಲದಲ್ಲಿ ಕನ್ನಡದ ಮಾತಿನ ನಡುವೆ ಆಂಗ್ಲ ಪದಗಳು ನುಸುಳಿಸುವುದು ಕಷ್ಟವೇನಲ್ಲ ಎಂದುಕೊಂಡು ಅನೇಕರು ದೇವಪ್ಪಜ್ಜ ಅವರನ್ನು ಸೋಲಿಸುವ ಹುಮ್ಮಸ್ಸಿನಿಂದ ಬಂದು, ಅವರ ಕನ್ನಡ ಪದಗಳ ಪಾಂಡಿತ್ಯವನ್ನು ಅಪ್ಪಿಕೊಂಡಿದ್ದಾರೆ. 35 ವರ್ಷಗಳಿಂದ ಅವರ ಬಾಯಿಂದ ಆಂಗ್ಲ ಪದಗಳನ್ನು ಹೇಳಿಸಲು ಪೈಪೋಟಿ ನಡೆಯುತ್ತಲೇ ಇವೆ.

ಒಂದು ಕೋಟಿ ಚಾಲೆಂಜ್‌ನಲ್ಲೂ ಸೋಲದ ದೇವಪ್ಪಜ್ಜ

ಒಂದು ಕೋಟಿ ಚಾಲೆಂಜ್‌ನಲ್ಲೂ ಸೋಲದ ದೇವಪ್ಪಜ್ಜ

ದೇವಪ್ಪಜ್ಜ ಅವರಿಂದ ಆಂಗ್ಲ ಪದಗಳನ್ನು ನುಡಿಸುವ ಸ್ಪರ್ಧೆಗೆ ಸಾಹಿತಿಗಳು, ಕಲಾವಿದರು, ಭಾಷಾ ತಜ್ಞರು, ಶಿಕ್ಷಕರು, ರಾಜಕಾರಣಿಗಳು, ವಿದ್ಯಾರ್ಥಿಗಳು ಹೀಗೆ ಎಲ್ಲರೂ ಪ್ರಯತ್ನಿಸಿ ಸೋತಿದ್ದಾರೆ. ಇವರು 'ಕನ್ನಡದ ಕಾಯಕ' ಆರಂಭಿಸಿದ ವರ್ಷಗಳಲ್ಲಿ 500 ರೂ.ಗಳಿದ 700 ರ ತನಕ ಬಾಜಿ ಕಟ್ಟಲಾಗುತ್ತಿತ್ತು. 2006-07ರ ನವೆಂಬರ್‌ನಲ್ಲಿ 1 ಕೋಟಿ ಬಹುಮಾನ ಮೊತ್ತ ನಿಗದಿ ಮಾಡಿದ್ದರೂ, ಅವರನ್ನು ಸೋಲಿಸಲು ಸಾಧ್ಯವಾಗಿಲ್ಲ.

ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಚಂದ್ರಶೇಖರ ಪಾಟೀಲ, ಮಾತೆ ಮಹಾದೇವಿ, ಚನ್ನವೀರ ಕಣವಿ, ಚಂದ್ರಕಾಂತ ಬೆಲ್ಲದ, ಸಿ.ಎಸ್‌. ಶಿವಳ್ಳಿ, ಖುಷ್ವಂತ್‌ ಸಿಂಗ್‌, ರಾಮಕೃಷ್ಣ ಹೆಗಡೆ, ಎಂ.ಪಿ. ಪ್ರಕಾಶ, ಪಾಟೀಲ ಪುಟ್ಟಪ್ಪ ಹೀಗೆ ಅನೇಕರು ಅಜ್ಜನಿಂದ ಆಂಗ್ಲ ಪದ ನುಡಿಸಲಾಗದೆ ಸೋಲೊಪ್ಪಿಕೊಂಡಿದ್ದಾರೆ.

11 ಭಾಷೆಗಳಲ್ಲಿ ಪ್ರಾವಿಣ್ಯ

11 ಭಾಷೆಗಳಲ್ಲಿ ಪ್ರಾವಿಣ್ಯ

ಕುಸುಗಲ್‌ ಮತ್ತು ಹುಬ್ಬಳ್ಳಿಯಲ್ಲಿ ಬದುಕು ಕಳೆದಿರುವ ಅವರು ರಷ್ಯನ್‌ ಭಾಷೆಯಲ್ಲಿ (ಹಿಂದಿ ಮೂಲಕ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಪತ್ನಿ ಮತ್ತು ಪುತ್ರಿ ಇಬ್ಬರೂ ವೈದ್ಯರು. ಆದರೂ ಕುಟುಂಬದವರ ಜೊತೆ ಆಂಗ್ಲ ಭಾಷೆಯ ಸೊಲ್ಲಿಲ್ಲ. 58 ವರ್ಷದ ದೇವಪ್ಪಜ್ಜ ಕನ್ನಡದ ಜೊತೆಗೆ ರಷ್ಯನ್‌, ಮಲೆಯಾಳಂ, ಗುಜರಾತಿ, ರಾಜಸ್ಥಾನಿ, ಉರ್ದು, ತೆಲುಗು, ಇಂಗ್ಲಿಷ್‌, ಹಿಂದಿ ಸೇರಿದಂತೆ 11 ಭಾಷೆಗಳಲ್ಲಿ ಮಾತನಾಡುತ್ತಾರೆ. ಇವರು ವ್ಯವಹಾರಿಕವಾಗಿ ಮತ್ತು ಕಂಪನಿಯ ಹೆಸರುಗಳನ್ನು ಹೇಳಲು ಮಾತ್ರ ಆಂಗ್ಲ ಪದಗಳನ್ನು ಬಳಸುತ್ತಾರೆ. ಉಳಿದ ಸಮಯದಲ್ಲಿ ಎಲ್ಲವೂ ಕನ್ನಡಮಯ.

ಇಂಗ್ಲಿಷ್ ಭಾಷೆಯಲ್ಲಿ ವಿದ್ಯಾಬ್ಯಾಸ ಪಡೆದರೂ ಕನ್ನಡದಲ್ಲಿ ಪ್ರಾವೀಣ್ಯತೆ

ಇಂಗ್ಲಿಷ್ ಭಾಷೆಯಲ್ಲಿ ವಿದ್ಯಾಬ್ಯಾಸ ಪಡೆದರೂ ಕನ್ನಡದಲ್ಲಿ ಪ್ರಾವೀಣ್ಯತೆ

ಫೋನ್‌ ಮಾಡಿದಾಗಲೆಲ್ಲ ಮೊದಲು ಸಹಜವಾಗಿ 'ಹಲೊ' ಎನ್ನುತ್ತೇವೆ. ಇದಕ್ಕೆ ಪ್ರತಿಯಾಗಿ ಯಾರೇ ಕರೆ ಮಾಡಿದರೂ ಅಜ್ಜ 'ಶರಣರೀ' ಎಂದು ಮಾತು ಆರಂಭಿಸುತ್ತಾರೆ. ಇಲ್ಲಿಂದಲೇ ಅವರ ಕನ್ನಡ ಭಾಷಾಭಿಮಾನ ಅನಾವರಣಗೊಳ್ಳುತ್ತ ಹೋಗುತ್ತದೆ. ದೇವಪ್ಪಜ್ಜ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದು ಇಂಗ್ಲಿಷ್‌ ಮಾಧ್ಯಮದಲ್ಲಿ. ಆಂಗ್ಲ ಭಾಷೆಗಳಲ್ಲಿ ಪ್ರಶ್ನೆಗಳನ್ನು ಕೇಳಿದರೂ ಕನ್ನಡದಲ್ಲಿ ಉತ್ತರ ನೀಡುತ್ತಾರೆ.

ನನ್ನಿಂದ ಆಂಗ್ಲ ಪದಗಳನ್ನು ಮಾತನಾಡಿಸುವ ಪ್ರಯತ್ನ ಮಾಡಲಾಗಿತ್ತು. ಕಾಲ ಬದಲಾದಂತೆ ಹೊಸ, ಹೊಸ ತಾಂತ್ರಿಕ ಶಬ್ದಗಳು ಬಂದಂತೆ ಕನ್ನಡದಲ್ಲಿ ಪದಗಳನ್ನು ಜೋಡಿಸುವುದು ಕೂಡ ಸವಾಲಾಗಿದೆ. ಹೆಸರುಗಳು ಮತ್ತು ಕಂಪನಿ ಹೆಸರುಗಳನ್ನು ಬಿಟ್ಟು ಬೇರೆ ಎಲ್ಲಿಯೂ ಆಂಗ್ಲ ಪದ ಬಳಸುವುದಿಲ್ಲ. ಯಾರು ಎಲ್ಲೇ ಸ್ಪರ್ಧೆ ಏರ್ಪಡಿಸಿದರೂ ನಾನು ಸಿದ್ಧನಿದ್ದೇನೆ ಎನ್ನುತ್ತಾರೆ.

 ಕನ್ನಡ ಕಟ್ಟಾಳು ಪ್ರಶಸ್ತಿ

ಕನ್ನಡ ಕಟ್ಟಾಳು ಪ್ರಶಸ್ತಿ

ಉಚ್ಚ ನ್ಯಾಯಾಲಯದಿಂದ 'ಕನ್ನಡ ಕಲಿ'. 1994 ರಲ್ಲಿ ಕವಿವಿಯಿಂದ "ಅಭಿನವ ಅಂಡಯ್ಯ, ಸ್ವಾಮೀಗಳ ಒಕ್ಕೂಟದಿಂದ 'ನುಡಿ ಸಾರ್ವಭೌಮ' ಬೆಳಗಾವಿ ಗಡಿನಾ‌ಡು ಕನ್ನಡಗರಿಂದ 'ಕನ್ನಡ ನುಡಿ ಸಿರಿ'. ಭಾಷಾವಾರು ವ್ಯಕ್ತಿಗಳಿಂದ 'ಭಾಷಾ ಭೀಷ್ಮ'ಕೇಂದ್ರದ ಮಾಜಿ ಸಚಿವರಾಗಿದ್ದ ಬಸವರಾಜೇಶ್ವರ ಅವರಿಂದ 'ಕನ್ನಡ ಕಟ್ಟಾಳು' ಉಪರಾಷ್ಟ್ರಪತಿಗಿದ್ದ ಜತ್ತಿ ಅವರಿಂದ ಕನ್ನಡದ‌ ಮುಕುಟು ಸೇರಿದಂತೆ ಅನೇಕ ಪ್ರಶಸ್ತಿಗಳು ಈ ಕನ್ನಡದ ಕಟ್ಟಾಳುವಿಗೆ ಒಲಿದು ಬಂದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+