Government Employees: ರೈಲ್ವೆ ನೌಕರರ ಚುನಾವಣೆಗೆ ಹುಬ್ಬಳ್ಳಿ ಕಚೇರಿಯಲ್ಲಿ ಸಿದ್ಧತೆ, ದಿನಾಂಕಗಳು
ಹುಬ್ಬಳ್ಳಿ, ಡಿಸೆಂಬರ್ 03: ಕರ್ನಾಟಕ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಆರಾಮದಾಯಕ ಸೇವೆ ನೀಡುವ ನೈಋತ್ಯ ರೈಲ್ವೆ ವಲಯವು ಇದೀಗ ಚುನಾವಣೆ ಸಿದ್ಧತೆಯಲ್ಲಿ ತೊಡಗಿದೆ. ಸುಮಾರು 11 ವರ್ಷಗಳ ಬಳಿಕ ನಡೆಯುತ್ತಿರುವ ರೈಲ್ವೆ ಯೂನಿಯನ್ ಚುನಾವಣೆ ಇದಾಗಿದೆ. ಹುಬ್ಬಳ್ಳಿಯ ಕಚೇರಿಯಲ್ಲಿ ರೈಲ್ವೆ ಅಧಿಕಾರಿಗಳು ಚುನಾವಣೆ ಎದುರಿಸಲು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ.
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಂದು ದಶಕದ ಬಳಿಕ ಇದೇ ಡಿಸೆಂಬರ್ 4, 5 ಹಾಗೂ 6ರಂದು ರೈಲ್ವೆ ಅಧಿಕಾರಿಗಳು ಚುನಾವಣೆ ಸಂಬಂಧ ಮತದಾನ ನಡೆಯಲಿದೆ. ಈ ಸಂಬಂಧ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ನೈಋತ್ಯ ರೈಲ್ವೆ ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ.

ಡಿ. 4 ಮತ್ತು 5ರಂದು ಮತದಾನ ನಾನ್ ರನ್ನಿಂಗ್ ಸ್ಟಾಫ್ ಹಾಗೂ 6ರಂದು ರನ್ನಿಂಗ್ ಸ್ಟಾಫ್ (ಲೋಕೋಪೈಲಟ್ಸ್, ಗಾರ್ಡ್ಸ್) ಮತದಾನ ಮಾಡಲಿದ್ದಾರೆ. ಬಹಿರಂಗ ಪ್ರಚಾರಕ್ಕೆ ಸೋಮವಾರವೇ ತೆರೆ ಬಿದ್ದಿದೆ. ಅಧಿಕಾರಿಗಳು ಮತದಾರರನ್ನು ಸೆಳೆಯಲು ತೆರೆಮರೆಯ ಕಸರತ್ತು ಮುಂದುವರೆಸಿದ್ದಾರೆ.
ಈ ಚುಣಾವಣೆಯಲ್ಲಿ ಗ್ರೂಪ್ ಎ.ಬಿ ಹಾಗೂ ಆರ್‌ಪಿಎಫ್ ಸಿಬ್ಬಂದಿಗೆ ಮತದಾನ ಮಾಡಲು ಅವಕಾಶ ಇಲ್ಲ. ಉಳಿದಂತೆ ವಲಯದ ಎಲ್ಲ ರೈಲ್ವೆ ವಲಯದ 37, 000ಕ್ಕೂ ಅಧಿಕ ನೌಕರರು ಮತದಾನ ಹಕ್ಕುಹೊಂದಿದ್ದಾರೆ ಎಂದು ರೈಲ್ವೆ ವಲಯವು ಮಾಹಿತಿ ನೀಡಿದೆ.
70 ಮತಗಟ್ಟೆ ಕೇಂದ್ರ ಸ್ಥಾಪನೆ
ನೈಋತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ ವಿಭಾಗದಲ್ಲಿ 23, ಬೆಂಗಳೂರು ವಿಭಾಗದಲ್ಲಿ 22, ಮೈಸೂರು ವಿಭಾಗದಲ್ಲಿ 19, ಹುಬ್ಬಳ್ಳಿ ವರ್ಕ್‌ಶಾಪ್ ನಲ್ಲಿ 4, ಮೈಸೂರು ವರ್ಕ್ ಶಾಪ್‌ನಲ್ಲಿ 2 ಸೇರಿ ಒಟ್ಟು 70 ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿದೆ. ಆಂಧ್ರಪ್ರದೇಶದ ಹಿಂದುಪುರ, ತಮಿಳುನಾಡಿನ ಹೊಸೂರು, ಗೋವಾದ ವಾಸ್ಕೊ ಸಹ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಇದ್ದು, ಅಲ್ಲಿನ ರೈಲ್ವೆ ನೌಕರರು ಸಹ ಮತದಾನ ಮಾಡುತ್ತಾರೆ.
ಇನ್ನೂ ರಾಜ್ಯದ ಬೀದರ್, ಕಲಬುರ್ಗಿ, ರಾಯಚೂರು ಗಳು ಮೀರಜ್ ರೈಲ್ವೆ ನೌಕರರು ಸೌಥ್ ಸೆಂಟ್ರಲ್ ರೈಲ್ವೆ ವ್ಯಾಪ್ತಿಯಲ್ಲಿ ಬರುವುದರಿಂದ ಇಲ್ಲಿಯ ನೌಕರರು ಮತದಾನ ಹಕ್ಕು ಹೊಂದಿರುವುದಿಲ್ಲ.
ರೈಲ್ವೆ ನೌಕರರ ಚುನಾವಣೆಯು ಪ್ರತಿ 5 ವರ್ಷಕ್ಕೊಮ್ಮೆ ನಡೆಯಬೇಕಿದೆ. ಆದರೆ ಕಾರಣಾಂತರಗಳಿಂದ ಹನ್ನೊಂದು ವರ್ಷದ ಬಳಿಕ ಪುನಃ ಈಗ ನಡೆಯುತ್ತಿದೆ. 2007ರಲ್ಲಿ ಮೊದಲ ಬಾರಿಗೆ ನಡೆದಿದ್ದ ಚುನಾವಣೆ ನಂತರ 2013, 2018ರಲ್ಲಿ ಜಗುರಗಿತ್ತು. ಅದಾದ ಬಳಿಕ 2024ರಲ್ಲಿ ನಡೆಯುತ್ತಿದೆ.
ಯಾವೆಲ್ಲ ನೌಕರರು ಸಂಘಟನೆಗಳು ಸ್ಪರ್ಧಿಸಿವೆ
ಸೌಥ್ ವೆಸ್ಟರ್ನ್ ರೈಲ್ವೆ ಎಂಪ್ಲಾಯಿಸ್ ಸಂಘ, ಬಿಎಂಎಸ್‌ನ ನೈಋತ್ಯ ರೈಲ್ವೆ ಮದ್ದೂರ ಸಂಘ, ಸೌಥ್ ವೆಸ್ಟರ್ನ್ ಎಂಪ್ಲಾಯಿಸ್ ಯೂನಿಯನ್, ಸೌಥ್ ವೆಸ್ಟರ್ನ್ ರೈಲ್ವೆ ಮಣ್ಣೂರ ಯೂನಿಯನ್‌ಗಳು ಸ್ಪರ್ಧಿಸಿವೆ. ಚುನಾಯಿತ ಸಂಘಟನೆ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದಿಂದ ಮಾನ್ಯತೆ ಪಡೆಯಲಿದೆ. ಈ ಚುನಾವಣೆಯಲ್ಲಿ ಹಳೇ ಪಿಂಚಣಿ ಮರು ಜಾರಿ ಈಡೇರಿಸುವ ಭರವಸೆ ಮತದಾರರಿಗೆ ನೀಡಲಾಗಿದೆ.
ಈ ಚುನಾವಣೆಯ ಫಲಿತಾಂಶ ಇದೇ ಡಿಸೆಂಬರ್ 12ರಂದು ಪ್ರಕಟಗೊಳ್ಳಲಿದೆ. ಚುನಾವಣೆಯಲ್ಲಿ ಗೆಲ್ಲುವ ಸಂಘಟನೆಯು ಮುಂದಿನ ಐದು ವರ್ಷಗಳವರೆಗೆ ರೈಲ್ವೆ ಇಲಾಖೆಯೊಂದಿಗೆ ಅಧಿಕೃತವಾಗಿ ಮಾತುಕತೆ ನಡೆಸುವ ಹಕ್ಕು ಪಡೆಯುತ್ತದೆ.












Click it and Unblock the Notifications