Hubballi-Bengaluru: ಹೆಚ್ಚುವರಿ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ
ಹುಬ್ಬಳ್ಳಿ, ಆಗಸ್ಟ್ 07: ನೈಋತ್ಯ ರೈಲ್ವೆ (SWR) ವ್ಯಾಪ್ತಿಯಲ್ಲಿ ವಿದ್ಯುದೀಕರಣ ಹಾಗೂ ದ್ವಿಪಥ ಮಾರ್ಗಗಳ ಅಭಿವೃದ್ಧಿ ಬಳಿಕ ರೈಲುಗಳ ಸಂಚಾರ ವೇಗ ವೃದ್ಧಿಸಿದೆ. ಪ್ರಯಾಣದ ಸಮಯ ಉಳಿತಾಯವಾಗುತ್ತಿದೆ. ಅಲ್ಲದೇ ರೈಲು ಸಾರಿಗೆ ಕಡಿಮೆ ವೆಚ್ಚದಾಯಕವಾಗಿದ್ದರಿಂದ ವಿವಿಧ ಮಾರ್ಗಗಳ ರೈಲುಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಈ ಕಾರಣದಿಂದ ಈ ರೈಲ್ವೆ ವಲಯ ಹುಬ್ಬಳ್ಳಿಯಿಂದ ಕೆಲವು ವಿಶೇಷ ರೈಲುಗಳನ್ನು ಕಲ್ಪಿಸಿದೆ.
ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದಿಂದ ಓಡಾಡುವವರು ಹಾಗೂ ಬೇರೆಡೆಯಿಂದ ಇಲ್ಲಿಗೆ ಬರುವವರಿಗೆ ಅನುಕೂಲವಾಗುವಂತೆ ಹಾಗೂ ಪ್ರಯಾಣಿಕರ ದಟ್ಟಣೆ ಇದೇ ಆಗಸ್ಟ್‌ನಲ್ಲಿ ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲುಗಳ ಸಂಚಾರ ಆರಂಭಿಸಿದೆ.

ವಿಶೇಷ ಸೂಪರ್ ಫಾಸ್ಟ್ ರೈಲುಗಳ ವೇಳಾಪಟ್ಟಿ
ಈ ಕುರಿತು ಖುದ್ದು ನೈರುತ್ಯ ರೈಲ್ವೆ ವಿಭಾಗದ (SWR) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಅವರು ಮಾಹಿತಿ ನೀಡಿದ್ದಾರೆ. SSS ಹುಬ್ಬಳ್ಳಿ ಜಂಕ್ಷನ್‌ನಿಂದ -ಯಶವಂತಪುರ ಒನ್ ವೇ ಸೂಪರ್‌ಫಾಸ್ಟ್ ಸ್ಪೇಷಲ್ ರೈಲು ಆ. 13ರಂದು ಹೊರಡಲಿದೆ. ಅಂದು ರಾತ್ರಿ 8.20ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಗ್ಗೆ 4.30ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ- ಬೆಳಗಾವಿ- ಯಶವಂತಪುರ ಸೂಪರ್‌ಫಾಸ್ಟ್ ಸ್ಪೇಷಲ್ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 14ರಂದು ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 5 ಗಂಟೆಗೆ ಬೆಳಗಾವಿಗೆ ಆಗಮಿಸಲಿದೆ. ಬೆಳಗಾವಿಯಿಂದ ಆಗಸ್ಟ್ 15ರಂದು ಸಂಚಾರ ಆರಂಭಿಸಿದೆ ಸಂಜೆ 5.30ಕ್ಕೆ ಹೊರಟು, ಮಾರನೇ ದಿನ ಬೆಳಗಿನಜಾವ 4.30ಕ್ಕೆ ಯಶವಂತಪುರ ನಿಲ್ದಾಣಕ್ಕೆ ಬರಲಿದೆ.
ಇನ್ನೂ ಯಶವಂತಪುರ - ಬೆಳಗಾವಿ- ಯಶವಂತಪುರ ಸೂಪರ್‌ಫಾಸ್ಟ್ ಸ್ಪೇಷಲ್ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 16ರಂದು ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು, ಆಗಸ್ಟ್ 17ರಂದು ಬೆಳಗ್ಗೆ 5 ಗಂಟೆಗೆ ಬೆಳಗಾವಿ ಮುಟ್ಟಲಿದೆ.
ಬೆಳಗಾಗಾವಿಯಿಂದ ಇದೇ ರೈಲು ಮರಳಿ ಆಗಸ್ಟ್ 18ರಂದು ಸಂಜೆ 5.30ಕ್ಕೆ ಸಂಚಾರ ಆರಂಭಿಸಿ, ಆಗಸ್ಟ್ 19ರಂದು ಬೆಳಗ್ಗೆ 4.30ಕ್ಕೆ ಯಶವಂತಪುರ ತಲುಪುತ್ತದೆ.
ಇನ್ನೂ ಬೆಂಗಳೂರು ಎಸ್‌ಎಂವಿಟಿ ನಿಲ್ದಾಣದಿಂದ ಹುಬ್ಬಳ್ಳಿಗೆ ಒನ್ ವೇ ಎಕ್ಸ್ ಪ್ರೆಸ್ ಸ್ಪೇಷಲ್ ರೈಲು ಆಗಸ್ಟ್ 16ರಂದು ರಾತ್ರಿ 10 ಗಂಟೆಗೆ ಪ್ರಯಾಣ ಆರಂಭಿಸಿ ಮರುದಿನ ಬೆಳಗ್ಗೆ 7.15ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ ಎಂದು ಮಂಜುನಾಥ್ ಕನಮಡಿ ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿ ಪ್ರಯಾಣಿಕರು ಈ ಭಾಗದಿಂದ ಓಡಾಡುವವಿಗೆ ಆಗಸ್ಟ್ ಮೂರನೇ ವಾರ ವಿಶೇಷ ರೈಲುಗಳನ್ನು ಬಿಡಲಾಗಿದೆ. ಅವುಗಳ ವೇಳಾಪಟ್ಟಿ ಮೇಲಿನಂತಿದ್ದು, ನೋಡಿಕೊಂಡು ಸಂಚರಿಸಬೇಕಿದೆ.












Click it and Unblock the Notifications