ಚಂದ್ರಶೇಖರ್ ಗುರೂಜಿ ಹತ್ಯೆ ನಡೆದ ಹೋಟೆಲ್‌ನಲ್ಲಿ ಸುದರ್ಶನ ಹೋಮ
ಹುಬ್ಬಳ್ಳಿ, ಜುಲೈ, 8 : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳನ್ನ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕೊಲೆ ನಡೆದಿದ್ದ ನಗರದ ಉಣಕಲ್ ಬಳಿಯ ದಿ ಪ್ರೆಸಿಡೆಂಟ್ ಹೊಟೆಲ್ ಸಿಬ್ಬಂದಿ ದೇವರ ಮೊರೆ ಹೋಗಿದ್ದು, ಹೋಟೆಲ್‌ನಲ್ಲಿ ಶುಕ್ರವಾರ ಸುದರ್ಶನ ಹೋಮ ಮಾಡಿಸಿದ್ದಾರೆ.
ದೇಶಾದ್ಯಂತ ಸರಳ ವಾಸ್ತು ಮುಲಕ ಖ್ಯಾತಿ ಗಳಿಸಿದ್ದ ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಿರುವ ಅವರ ಮಾಜಿ ಉದ್ಯೋಗಿಗಳು ಪೋಲೀಸರ ಮುಂದೆ ಕೊಲೆ ಕಾರಣವನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದಾರೆ. ಪೊಲಿಸ್ ಠಾಣೆಯಲ್ಲಿ 2 ದಿನ ಕಳೆದರೂ ಆರೋಪಿ ಮಹಂತೇಶ್, ಮಂಜುನಾಥ್ ಮಾತ್ರ ಕಿಂಚಿತ್ತೂ ಕಣ್ಣೀರು ಹಾಕಿಲ್ಲ. ಆದರೆ ಪೊಲಿಸ್ ಬಾಷೆಗೆ ಒಂದೇ ಸಾರಿ ಎಲ್ಲಾ ಸತ್ಯ ಕಕ್ಕಿರುವ ಕೊಲೆಗಡುಕರು ಮುಖ್ಯವಾಗಿ ಗುರೂಜಿ ಇವರ ಹೆಸರಿನಲ್ಲಿ ಮಾಡಿದ್ದ ಬೇನಾಮಿ ಆಸ್ತಿಯನ್ನ ಮಾರಾಟ ಮಾಡಿದ್ದೇ ಕೊಲೆಗೆ ಕಾರಣ ಎಂದೂ ಹೇಳಿಕೆ ನೀಡಿದ್ದಾರೆ.
ಇನ್ನು ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಚಂದ್ರಶೇಖರ ಗುರೂಜಿ ಅವರ ಬರ್ಬರ ಕೊಲೆ ಹಿನ್ನಲೆ ಹೋಟೆಲ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆ ನಡೆಯಬಾರದೆಂದು ಇಬ್ಬರು ಪುರೋಹಿತರನ್ನು ಕರೆಸಿ ಹೋಮ ಮತ್ತು ಹವನ ನಡೆಸಿದ್ದಾರೆ.

ಭಯ ಹೋಗಲಾಡಿಸಲು ಹೋಮ-ಹವನ
ಗುರೂಜಿ ಕೊನೆಯುಸಿರೆಳೆದ ಸ್ಥಳದಲ್ಲೇ ಹೋಮ, ಹವನ ಮಾಡಿಸಲಾಗುತ್ತಿದೆ. ಗುರೂಜಿ ಹತ್ಯೆಯಿಂದ ಸಿಬ್ಬಂದಿ ತೀವ್ರ ಆತಂಕಗೊಂಡಿದ್ದರು. ಹೋಟೆಲ್ ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಭಯ ದೂರಮಾಡಲು ಮತ್ತು ಹೋಟೆಲ್ ಶುದ್ಧಗೊಳಿಸಲು ಹೋಮ ಮಾಡಿದ್ದಾರೆ. ಹುಬ್ಬಳ್ಳಿ ಖ್ಯಾತ ಪುರೋಹಿತರಿಂದ ಸುದರ್ಶನ ಹೋಮ ಮಾಡಿಸಿದ್ದು, ಹೋಟೆಲ್ ಗೆ ಅಂಟಿದ ಕಳಂಕ ದೂರಮಾಡುವ ಪ್ರಯತ್ನ ಮಾಡಲಾಗುತ್ತಿದೆ.

ಬೇನಾಮಿ ಆಸ್ತಿ ಮಾರಾಟ ಕೊಲೆಗೆ ಕಾರಣ
ಆರೋಪಿ ಮಹಾಂತೇಶ ಶಿರೂರ ಗುರೂಜಿಗೆ ಸೇರಿದ್ದ ಮಾಡಿದ್ದೇ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಗೋಕುಲ ರಸ್ತೆ ಬಳಿ ಮಹಾಂತೇಶನ ಹೆಸರಲ್ಲಿ ಗುರೂಜಿ ಬೇನಾಮಿ ಆಸ್ತಿ ಮಾಡಿದ್ದರು. ಅದನ್ನು 5 ಕೋಟಿಗೆ ಮಹಾಂತೇಶ ಮಾರಾಟ ಮಾಡಿದ್ದ. ಆ ಹಣ ನೀಡುವಂತೆ ಗುರೂಜಿ ಒತ್ತಡ ಹಾಕುತ್ತಿದ್ದರು. ಇಬ್ಬರ ನಡುವೆ ಅನೇಕ ಸಲ ಈ ವಿಚಾರಕ್ಕೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಮಹಾಂತೇಶ, ತನ್ನ ಸಹಚರ ಮಂಜುನಾಥ ಸೇರಿ ಜುಲೈ 5ರಂದು ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ.

2016ರಲ್ಲೇ ಆರೋಪಿಗಳನ್ನು ಸಂಸ್ಥೆಯಿಂದ ವಜಾ
ಆರೋಪಿಗಳಾದ ಮಂಜುನಾಥ್ ಮತ್ತು ಮಹಾಂತೇಶ್ ಸರಳ ವಾಸ್ತು ಸಂಸ್ಥೆಯಲ್ಲಿಈ ಹಿಂದೆ ಕೆಲಸಕ್ಕಿದ್ದರು. ಆದರೆ ಸಂಸ್ಥೆ ಹೆಸರಲ್ಲಿ ಹಣ ಪಡೆದು ವಂಚಿಸಿದ್ದರೆಂಬ ಕಾರಣಕ್ಕೆ ಗುರೂಜಿ 2016ರಲ್ಲಿ ಇಬ್ಬರನ್ನೂ ಕೆಲಸದಿಂದ ವಜಾ ಮಾಡಿದ್ದರು. ಆಸ್ತಿ ಹಾಗೂ ಹಣಕಾಸಿನ ವಿಷಯದಲ್ಲಿ ಇಬ್ಬರ ನಡುವೆ ಏರ್ಪಟ್ಟ ಕಲಹವೇ ಕೊನೆಗೆ ಗುರೂಜಿ ಹತ್ಯೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಂತೇಶ್‌ನ ಹೆಣ್ಣಿನ ವ್ಯಾಮೋಹ ಕೊಲೆಗೆ ಕಾರಣ?
ಗುರೂಜಿ ಕೊಲೆಗೆ ಕೂಡಾ ಕಾರಣ ಎಂದೂ ಹೇಳಲಾಗುತ್ತಿದೆ. ಗುರೂಜಿ ಮನೆತನದ ಹೆಣ್ಣೊಬ್ಬರ ಮೇಲೆ ಮಹಂತೇಶ್ ಕಣ್ಣು ಹಾಕಿದ್ದ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದಂತೆಯೇ ಗುರೂಜಿ ಮಹಾಂತೇಶ್ ಹಾಗೂ ಆತನ ಸ್ನೇಹಿತನಿಗೆ ಅವರಾಗಿಯೆ ಕೆಲಸ ಬಿಡುವ ರೀತಿಯಲ್ಲಿ ದೂರದ ಊರುಗಳಿಗೆ ಟ್ರಾನ್ಸ್‌ಫರ್ ಮಾಡುತ್ತಿರದಂತೆ. ಹೀಗೆ ಮುಂದುವರೆದ ದ್ವೇಷ ಈಗ ವಿಶ್ವ ಮಾನವ ಎನಿಸಿಕೊಂಡವರ ಸಾವಿನಲ್ಲಿ ಅಂತ್ಯವಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications