Aditya L1: ಸೂರ್ಯ ಶಿಕಾರಿ ಯಶಸ್ವಿಗೆ ಆಂಜನೇಯನಿಗೆ ಕರವೇ ಪ್ರಾರ್ಥನೆ
ಹುಬ್ಬಳ್ಳಿ, ಸೆ 2: ಚಂದ್ರಯಾನ - 3 ಯಶಸ್ಸಿನ ಬೆನ್ನಲ್ಲೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಬಾಹ್ಯಾಕಾಶದಲ್ಲಿ ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆ ಆದಿತ್ಯ ಎಲ್ 1 ಸೆಪ್ಟಂಬರ್ ಎರಡರಂದು ಉಡಾವಣೆಗೊಳ್ಳಲಿದೆ.
ಇದರ ಭಾಗವಾಗಿ, ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಆದಿತ್ಯ - ಎಲ್ 1 ಉಪಗ್ರಹವನ್ನು ಪಿಎಸ್ ಎಲ್ ವಿ ಸಿ 57 ( PSLV-C57)ರಾಕೆಟ್‌ನಲ್ಲಿ ಉಡಾವಣೆ ಮಾಡಲು ಶನಿವಾರ ಸರಿಯಾಗಿ ಸಮಯ (11.50) ನಿಗದಿಯಾಗಿದೆ.

ಆದಿತ್ಯ -1 ಯಶಸ್ವಿಯಾಗಿ ಸೂರ್ಯನ ಅಧ್ಯಯನಕ್ಕೆ ಸಹಕಾರಿ ಆಗಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಧಾರವಾಡ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ ನೇತೃತ್ವದಲ್ಲಿ ನಗರದ ಗಣೇಶ ಪೇಟೆಯಲ್ಲಿನ ಶ್ರೀ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ಸೂರ್ಯನ ಅಧ್ಯಯನಕ್ಕೆ ಹೊರಟಿರುವ ಆದಿತ್ಯ ಎಲ್-1 ಉಡಾವಣೆ ನಮ್ಮ ದೇಶದ ಬಾಹ್ಯಾಕಾಶ ವಿಜ್ಞಾನಿಗಳ ಇನ್ನೊಂದು ಸಾಧನೆ ಆಗಿದೆ. ಇಂದು ಬೆಳಿಗ್ಗೆ 11.50ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಆದಿತ್ಯ ಎಲ್ -1 ಉಡಾವಣೆ ಆಗಲಿದ್ದು ಯಶಸ್ವಿಯಾಗಿ ಇನ್ನೊಂದು ಜಗತ್ತಿನಲ್ಲಿ ಮೈಲು ಗಲ್ಲಾಗಲಿ ಎಂದು ಹನುಮಂತ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಂಕೈರ್ಯ ಕೈಗೊಳ್ಳಲಾಯಿತು.
ಸೂರ್ಯನ ಅಧ್ಯಯನಕ್ಕೆ ತೆರಳುತ್ತಿರುವ ಆದಿತ್ಯ ಎಲ್-1 ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ಅಂದರೆ 15 ಲಕ್ಷ ಕಿಲೋ ಮೀಟರ್ ತೆರಳಲಿದೆ. ಈ ಮೂಲಕ ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಗೆ ಆದಿತ್ಯ-ಎಲ್ 1 ಪಾತ್ರವಾಗಲಿದೆ.
ಇನ್ನು ಬಾಹ್ಯಾಕಾಶದಲ್ಲಿ ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆ ಆದಿತ್ಯ ಎಲ್-1. ಇಂದು ಅತಿಯಾದ ತಾಪಮಾನ ಸೂರ್ಯನ ಕುರಿತಾದ ಹೆಚ್ಚು ಹೆಚ್ಚು ಮಾಹಿತಿ ಇಂದು ಅಗತ್ಯವಿದೆ. ಆದ್ದರಿಂದ ಇದೊಂದು ಮಹತ್ತರವಾದ ಸಾಧನೆ ಆಗಲ್ಲದು ಎನ್ನಲಾಗಿದೆ.
ಸೂರ್ಯನ ಅಧ್ಯಯನಕ್ಕೆ ಹೊರಟಿರುವ ಆದಿತ್ಯ ಎಲ್-1 ಉಡಾವಣೆಯನ್ನು ಸಾರ್ವಜನಿಕರು ಕೂಡ ನೇರವಾಗಿ ವೀಕ್ಷಣೆ ಮಾಡಬಹುದಾಗಿದೆ. ಇಂದು ಬೆಳಿಗ್ಗೆ 11.50ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಆದಿತ್ಯ ಎಲ್ -1 ಉಡಾವಣೆ ಆಗಲಿದ್ದು, ಲಾಂಚ್ ವೀವ್ ಗ್ಯಾಲರಿಯಿಂದ ನೇರವಾಗಿ ವಿಕ್ಷಿಸಲು ಇಸ್ರೋ ಸಾರ್ವಜನಿಕರಿಗೆ ಅವಕಾಶ ನೀಡಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications