ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ

|
Google Oneindia Kannada News

ಹುಬ್ಬಳ್ಳಿ, ಜನವರಿ 03 : ಹುಬ್ಬಳ್ಳಿ-ಬೆಂಗಳೂರು ನಡುವೆ ಮತ್ತೊಂದು ಸಂಸ್ಥೆ ವಿಮಾನ ಸಂಪರ್ಕ ಕಲ್ಪಿಸಲಿದೆ. ವಿಮಾನಗಳ ಹಾರಾಟಕ್ಕೆ ಒಪ್ಪಿಗೆ ಸಿಕ್ಕಿದ್ದು, ದಿನಾಂಕ ನಿಗದಿ ಮಾತ್ರ ಬಾಕಿ ಇದೆ.

ಸ್ಟಾರ್ ಏರ್ ಹುಬ್ಬಳ್ಳಿ-ಬೆಂಗಳೂರು ನಡುವೆ ಪ್ರತಿದಿನ ವಿಮಾನ ಸಂಪರ್ಕ ಕಲ್ಪಿಸಲಿದೆ. ಕೇಂದ್ರ ವಿಮಾನಯಾನ ಇಲಾಖೆ ಸಂಚಾರಕ್ಕೆ ಜನವರಿ 1ರಂದು ಒಪ್ಪಿಗೆ ನೀಡಿದೆ. ಈ ತಿಂಗಳಿನಲ್ಲಿಯೇ ವಿಮಾನ ಹಾರಾಟ ಆರಂಭವಾಗಲಿದೆ.

ಹುಬ್ಬಳ್ಳಿ : ದುಬೈ, ದೋಹಾ, ಕುವೈತ್ ಮುಂತಾದ ಕಡೆಗೆ ವಿಮಾನ ಸೇವೆಹುಬ್ಬಳ್ಳಿ : ದುಬೈ, ದೋಹಾ, ಕುವೈತ್ ಮುಂತಾದ ಕಡೆಗೆ ವಿಮಾನ ಸೇವೆ

ಸ್ಟಾರ್ ಏರ್ ಫೇಸ್‌ಬುಕ್ ಪುಟದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರತಿದಿನದ ವಿಮಾನ ಹಾರಾಟ ಆರಂಭಿಸುತ್ತೇವೆ. ಈಆರ್‌ಜಿ 145 ನಂಬರ್ ವಿಮಾನ ಸಂಚಾರ ನಡೆಸಲಿದೆ ಎಂದು ಹೇಳಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರ್ಗೋ ಸೇವೆ ಆರಂಭಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರ್ಗೋ ಸೇವೆ ಆರಂಭ

Star Air to connect Bengaluru-Hubballi soon

ಉಡಾನ್ ಯೋಜನೆಯ 3ನೇ ಹಂತದಲ್ಲಿ ಸ್ಟಾರ್ ಏರ್ ದೇಶದ ವಿವಿಧ ನಗರಗಳಿಗೆ ಕಡಿಮೆ ದರದಲ್ಲಿ ವಿಮಾನ ಸೇವೆ ಆರಂಭಿಸುವ ಆಶಯವನ್ನು ಹೊಂದಿದೆ. ಪ್ರಸ್ತುತ ಹುಬ್ಬಳ್ಳಿ-ಬೆಂಗಳೂರು ನಡುವಿನ ಹಾರಾಟಕ್ಕೆ ಮಾತ್ರ ಒಪ್ಪಿಗೆ ಸಿಕ್ಕಿದೆ.

ಹುಬ್ಬಳ್ಳಿ-ಮುಂಬೈ ಏರ್ ಇಂಡಿಯಾ ಸೇವೆಗೆ ಚಾಲನೆಹುಬ್ಬಳ್ಳಿ-ಮುಂಬೈ ಏರ್ ಇಂಡಿಯಾ ಸೇವೆಗೆ ಚಾಲನೆ

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗಿದ್ದು, ಉಡಾನ್ ಯೋಜನೆಯಡಿ ಹಲವಾರು ನಗರ ಮತ್ತು ದೇಶಗಳಿಗೆ ವಿಮಾನ ಸೇವೆಯನ್ನು ಆರಂಭಿಸಲಾಗಿದೆ. ಅಬುದಾಬಿ, ದುಬೈ, ಕುವೈತ್, ಮಸ್ಕತ್ ದೇಶಗಳಿಗೆ ಇಂಡಿಗೋ ಏರ್‌ಲೈನ್ಸ್ ವಿಮಾನ ಸೇವೆ ಆರಂಭವಾಗಿದೆ.

ಸಿಂಗಾಪುರ, ಹಾಂಗ್‌ಕಾಂಗ್, ಫುಕೆಟ್, ಬ್ಯಾಂಕಾಕ್, ಕೊಲಂಬೋ ನಗರಗಳಿಗೂ ಹುಬ್ಬಳ್ಳಿಯಿಂದ ವಿಮಾನ ಸೇವೆ ಆರಂಭವಾಗಿದೆ. ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಮಾಡಿ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗಿದೆ.

English summary
Star Air received the Air Operators Certificate from the Ministry of Civil Aviation on January 1, 2019. It will soon operating flights from Bengaluru to Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X