ಹುಬ್ಬಳ್ಳಿ: ಹೊಸ ವರ್ಷಾಚರಣೆಗೆ ವಿರೋಧ: ಹೋಟೆಲ್‌ಗಳಿಗೆ ಶ್ರೀರಾಮಸೇನೆ ಎಚ್ಚರಿಕೆ

ಹುಬ್ಬಳ್ಳಿ, ಡಿಸೆಂಬರ್ 30: ಹೊಸ ವರ್ಷದ ಸಂಭ್ರಮಾಚರಣೆಗೆ ಕೌಂಟ್‌ಡೌನ್ ಶುರುವಾಗಿದೆ. ಡಿಸೆಂಬರ್-31 ಕ್ಯಾಲೆಂಡರ್ ಹೊಸ ಆಚರಣೆಗೆ ಅವಕಾಶ ನೀಡದಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ವಿನೂತನ ಹೋರಾಟಕ್ಕೆ ಮುಂದಾಗಿದೆ. ಡಿ. 31ರಂದು ನ್ಯೂ ಇಯರ್ ಆಚರಣೆ ಮಾಡಿದರೇ ಹೋಟೆಲ್‌ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಹೋಟೆಲ್ ಗಳಿಗೆ ಎಚ್ಚರಿಕೆ ನೀಡಿದೆ.

ಹಿಂದೂ ಸಂಘಟನೆಯಿಂದ ಕ್ಯಾಲೆ‌ಂಡರ್ ಹೊಸ ವರ್ಷಾಚರಣೆ ಭಾರೀ ವಿರೋಧ ವ್ಯಕ್ತವಾಗಿದೆ. ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಮುಖಂಡ ಅಣ್ಣಪ್ಪ ದಿವಟೆ ನೇತೃತ್ವದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಹೌದು. ಕುಡಿದು ಕುಪ್ಪಳಸಿ, ಡ್ರಗ್ಸ್, ರೇಪ್, ಅಶ್ಲೀಲವಾಗಿ ಆಚರಣೆ ಮಾಡುವವರ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾಗಿದ್ದು, ಶ್ರೀ ರಾಮ ಸೇನೆ ಕಾರ್ಯಕರ್ತರಿಂದ ಹೊಟೇಲ್ ಗಳಿಗೆ ಭೇಟಿ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದಾರೆ.

Sri Ram Sena Opposed Celebration of New Year 2025 at Hubballi on Dec 31st

ಬಹುತೇಕ ಜನ 2025 ನ್ನು ಬರ ಮಾಡಿಕೊಳ್ಳಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಡಿಸೆಂಬರ್ 31 ರಂದು ದೇಶದ ಹಲವು ಭಾಗಗಳಲ್ಲಿ ಸಂಭ್ರಮ ಮನೆ ಮಾಡಿರುತ್ತಿದೆ. ಇದಕ್ಕಾಗಿ ಬೀಚ್‌ ಬದಿಗಳಲ್ಲಿ, ಹೋಟೆಲ್‌, ಬಾರ್‌ಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಪಾರ್ಟಿ ಮೋಜು ಮಸ್ತಿಗಳಲ್ಲಿ ತೇಲಲಿದ್ದಾರೆ.

ಆದರೇ ಇದೀಗ ಹೊಸ ವರ್ಷ ಸೆಲೆಬ್ರೇಟ್‌ ಮಾಡುವವರಿಗೆ ಶ್ರೀರಾಮಸೇನೆ ಖಡಕ್ ಎಚ್ಚರಿಕೆ ಕೊಡುತ್ತಿದೆ. ಹುಬ್ಬಳ್ಳಿಯ ಶ್ರೀನಗರ ಕ್ರಾಸ್ ಬಳಿ ಸೇರಿದಂತೆ ವಿವಿಧ ಹೊಟೇಲ್ ಗಳಿಗೆ ಭೇಟಿ ನೀಡಿ ಹೊಸ ವರ್ಷದ ಆಚರಣೆ ಹೆಸರಲ್ಲಿ ಮೋಜು ಮಸ್ತಿಗೆ ಅವಕಾಶ ಕೊಡದಂತೆ ಎಚ್ಚರಿಕೆ ನೀಡಲಾಗಿದೆ.

ಹಿಂದು ಸಂಪ್ರದಾಯ ಸಂಸ್ಕೃತಿ, ಧರ್ಮದ ಪ್ರಕಾರ, ವೈಜ್ಞಾನಿಕ ಹಾಗೂ ಪಂಚಾಂಗದ ಪ್ರಕಾರ ಯುಗಾದಿ ಹೊಸ ವರ್ಷ. ಬ್ರಿಟಿಷರು, ಕ್ರಿಶ್ಚಿಯನ್ಸ್‌ ಹಾಕಿದ ಈ ಪರಂಪರೆ ಜನವರಿ 1 ಹೊಸ ವರ್ಷ ಅನ್ನೋದು ಅವೈಜ್ಞಾನಿಕ. ನಮಗೆ ಯುಗಾದಿ ಹೊಸ ವರ್ಷ ಎಂದು ಶ್ರೀರಾಮ್ ಸೇನೆಯ ಮುಖಂಡರು ಪ್ರತಿಪಾದಿಸಿದ್ದಾರೆ.

ಆದ್ದರಿಂದ ಈ ರೀತಿಯ ಪಾರ್ಟಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಎಲ್ಲಾ ಹೊಟೇಲ್ ಗಳಿಗೆ ತೆರಳಿ ಮನವಿ ಕೊಟ್ಟಿರುವ ಪ್ರಮುಖರು, ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿಯೂ ಒಂದು ವಾರ ರಾಜ್ಯದಲ್ಲಿ ಶೋಕಾಚರಣೆ ಇದೆ.

ಈ ಸಂದರ್ಭದಲ್ಲಿ ಕುಣಿದು ಕುಪ್ಪಳಿಸುವುದು ಬೇಡಾ. ರಾಜ್ಯ ಸರ್ಕಾರ ಕೂಡಲೇ ಹೊಸ ವರ್ಷಾಚರಣೆ ಆದೇಶ ವಾಪಾಸ್ ಪಡೆಯಲಿ ಎಂದು ಶ್ರೀರಾಮಸೇನಾ ಆಗ್ರಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+