South Western Railway: ಪ್ರಯಾಣಿಕರು, ಸರಕು ಸೇವೆಯಲ್ಲಿ ಆದಾಯ ಏರಿಕೆ, ಅಂಕಿ-ಸಂಖ್ಯೆ
ಹುಬ್ಬಳ್ಳಿ, ಆಗಸ್ಟ್ 02: ಭಾರತೀಯ ರೈಲ್ವೆ ವ್ಯಾಪ್ತಿಯ ನೈಋತ್ಯ ರೈಲ್ವೆಯು (ಹುಬ್ಬಳ್ಳಿ) ಲಕ್ಷಾಂತರ ಜನರಿಗೆ ಸೇವೆ ನೀಡುತ್ತಿದೆ. ಮಾರ್ಗಗಳು ಸುಧಾರಣಗೊಂಡಿವೆ. ರಾಜ್ಯ, ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ವಲಯವು ಕಳೆದ ತಿಂಗಳ ಜುಲೈನಲ್ಲಿ ಅತ್ಯಧಿಕ ಆದಾಯ ದಾಖಲಿಸಿದೆ.
ಹುಬ್ಬಳ್ಳಿ ನೈರುತ್ಯ ರೈಲ್ವೆ (SWR) ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಅವರು ಆದಾಯ ಏರಿಕೆಯ ಮಾಹಿತಿ ನೀಡಿದ್ದಾರೆ. ರೈಲ್ವೆಯು ಪ್ರಯಾಣಿಕರ ಸೇವೆಯಲ್ಲಿ 2024ರ ಜುಲೈ ತಿಂಗಳಲ್ಲಿ 286.28 ಕೋಟಿ ರೂಪಾಯಿ ಆದಾಯ ಗಳಿಸಿದೆ. ಇದು ಕಳೆದ ವರ್ಷದ ಜುಲೈ ತಿಂಗಳಿಗಿಂತಲೂ ಶೇಕಡಾ 7.51ರಷ್ಟು ಆದಾಯದಲ್ಲಿ ಏರಿಕೆ ಕಂಡಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ ಈ ನೈಋತ್ಯ ರೈಲ್ವೆ ಪಾರ್ಸೆಲ್ ವಿಭಾಗದ ಆದಾಯವು ಇದೇ 2024ರ ಜುಲೈ ತಿಂಗಳಲ್ಲಿ 14.19 ಕೋಟಿ ರೂಪಾಯಿಗೆ ಹೆಚ್ಚಳ ಕಂಡಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಬರೀ 12.83 ಕೋಟಿ ರೂಪಾಯಿ ಗಳಿಸಿತ್ತು. ಅದಕ್ಕಿಂತಲೂ ಈ ವರ್ಷ ಶೇಕಡಾ 10.60ರಷ್ಟು ಪ್ರಗತಿ ಆದಾಯದಲ್ಲಿ ಸಾಧ್ಯವಾಗಿದೆ. ವಿವಿಧ ವಿಭಾಗಗಳಲ್ಲಿ ನೈಋತ್ಯ ರೈಲ್ವೆ ತನ್ನ ಆದಾಯ ಹೆಚ್ಚಿಸಿಕೊಂಡು ಗಣನೀಯ ಬೆಳವಣಿಗೆ ಸಾಧಿಸಿದೆ ಎಂದರು.
ಒಂದೇ ವರ್ಷದಲ್ಲಿ ಆದಾಯದಲ್ಲಿ ಭಾರೀ ಏರಿಕೆ
ಪ್ರಯಾಣಿಕರ ಆದಾಯವು ಈ ಬಾರಿ 286.28 ಕೋಟಿ ರೂ.ಗೆ ತಲುಪಿದ್ದರೆ, ಕಳೆದ ಬಾರಿ ಇದೇ ಜುಲೈ (2023) ಅವಧಿಯಲ್ಲಿ 266.27 ಕೋಟಿ ರೂಪಾಯಿ ಗಳಿಸಿತ್ತು. ಸದ್ಯ ಈ ವರ್ಷ ಪ್ರಯಾಣಿಕರ ಆದಾಯದಲ್ಲಿ 20.01 ಕೋಟಿ ರೂಪಾಯಿ ಏರಿಕೆ ಆಗಿದೆ ಎಂದ ಅವರು ಪುನರುಚ್ಚರಿಸಿದರು.
ನೈಋತ್ಯ ರೈಲ್ವೆಯ ಇತರ ಕೋಚಿಂಗ್ ಆದಾಯವು ಕಳೆದ ವರ್ಷ 23.67 ಕೋಟಿ ರೂ.ಗಳಷ್ಟಿದ್ದರೆ, ಈ ಸಲ 25.01 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಅಧಿಕಾರಿ, ಸಿಬ್ಬಂದಿ ಹಾಗೂ ರೈಲ್ವೆಯ ಉಪಕ್ರಮಗಳಿಂದಾಗಿ ಈ ವರ್ಷ ಹೆಚ್ಚುವರಿಯಾಗಿ 1.34 ಕೋಟಿ ರೂ ಸಂಗ್ರವಾಗಿದೆ. ಈ ಕೋಚಿಂಗ್ ಆದಾಯದಲ್ಲಿ ರೈಲ್ವೆ ಶೇಕಡಾ 5.66ರಷ್ಟು ಏಳಿಗೆ ಸಾಧಿಸಿದೆ.

ಇನ್ನೂ ಪಾರ್ಸೆಲ್ ಸೇವೆಗಳ ವಿಭಾಗದಲ್ಲಿ ಮೇಲೆ ತಿಳಿಸಿದಂತೆ ಈ ವರ್ಷ 14.19 ಕೋಟಿ ರೂ. ಗಳಿಕೆ ಮೂಲಕ ಶೇಕಡಾ 10.6ರಷ್ಟು ಪ್ರಗತಿ ಸಾಧಿಸಲಾಗಿದೆ.
ಪ್ರಯಾಣಿಕರ ಸಂಖ್ಯೆ 13.25 ಮಿಲಿಯನ್ಗೆ ಏರಿಕೆ
ಕಳೆದ ಒಂದೇ ತಿಂಗಳಲ್ಲಿನಲ್ಲಿ ನೈಋತ್ಯ ರೈಲ್ವೆಗಳಲ್ಲಿ ಒಟ್ಟು 13.25 ಮಿಲಿಯನ್ ಇದೆ. ಹಿಂದಿಗಿಂತ ಈ ವರ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 1.92ರಷ್ಟು ಹೆಚ್ಚಾಗಿದೆ. ಇನ್ನೂ ಟಿಕೆಟ್ ಪರಿಶೀಲನಾಕಾರರ ಪರಿಣಾಮಕಾರಿ ಟಿಕೆಟ್ ತಪಾಸಣಾ ಕಾರ್ಯದಿಂದಾಗಿ ಈ ವಲಯದಲ್ಲಿ 0.42 ಲಕ್ಷ ಪ್ರಕರಣ ಪತ್ತೆ ಆಗಿದೆ. ಟಿಕೆಟ್ ರಹಿತ ಪ್ರಯಾಣಿಕರಿಂದ ಜುಲೈ ಒಂದೇ ತಿಂಗಳಲ್ಲಿ ಒಟ್ಟು2.37 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಸಂಗ್ರಹವಾಗಿದೆ.
ಸರಕು ಆದಾಯವು 329.68 ಕೋಟಿ ರೂ.
ಜುಲೈ 2024 ರಲ್ಲಿ ಸರಕು ಆದಾಯವು 329.68 ಕೋಟಿ ರೂ.ಗಳಾಗಿದೆ. ಇದು ನೈಋತ್ಯ ರೈಲ್ವೆಯ ಒಟ್ಟಾರೆ ಆದಾಯಕ್ಕೆ ಗಮನಾರ್ಹ ಕೊಡುಗೆ ನೀಡಿದೆ. ಇದರೊಂದಿಗೆ ನೈಋತ್ಯ ವಲಯವು ಇತರ ಎಲ್ಲ ವಿಭಾಗಗಳಲ್ಲಿ ಇನ್ನಷ್ಟು ಆರ್ಥಿಕ ಪ್ರಗತಿ ಸಾಧಿಸಲು ಶ್ರಮಿಸಲಿದೆ. ಒಂದೇ ತಿಂಗಳಲ್ಲಿ ಕಂಡು ಬಂದ ಈ ಆರ್ಥಿಕ ಕಾರ್ಯಕ್ಷಮತೆಯು ರೈಲ್ವೆಯ ಸೇವೆಗಳು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸಾರಿಗೆ ಹೇಳುತ್ತದೆ. ಸೇವೆಯಲ್ಲಿನ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ
ನೈಋತ್ಯ ರೈಲ್ವೆಯು ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಲು ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸಲು ಮುಂದೆಯೂ ಬದ್ಧವಾಗಿದೆ ಎಂದ ಕನಮಡಿ ಅವರು, ಈ ಸಾಧನೆ ಮಾಡಿದ್ದಕ್ಕಾಗಿ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಅರವಿಂದ್ ಶ್ರೀವಾಸ್ತವ ಅವರು ವಲಯದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಇದೇ ರೀತಿ ಕಾರ್ಯ ಮುಂದುವರಿಸುಂತೆ ಹುರಿದುಂಬಿಸಿದರು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications