ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಹುಬ್ಬಳ್ಳಿಯಲ್ಲಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ದಲಿತ ಸಂಘಟನೆ
ಹುಬ್ಬಳ್ಳಿ, ಆಗಸ್ಟ್, 01: ಧರ್ಮಸ್ಥಳದಲ್ಲಿ ನಡೆದಂತಹ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವೊಂದರ ಆರೋಪಿಯು ಸಿಬಿಐ ತನಿಖೆ ನಂತರ ಖುಲಾಸೆಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆಗೆ ಮುಂದಾಗಿರುವವರ ವಿರುದ್ದ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಕ್ರಮ ಜರುಗಿಸಬೇಕು. ಮತ್ತು ಉನ್ನತ ತನಿಖೆಗೆ ವಹಿಸಬೇಕು ಎಂದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಇಂದು ಹುಬ್ಬಳ್ಳಿಯಲ್ಲಿ ಒತ್ತಾಯಿಸಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯಳ ಪ್ರಕರಣದ ಆರೋಪಿಯಾಗಿದ್ದ ಸಂತೋಷರಾವ್ ಈಗಾಗಲೇ ತನಿಖೆ ನಂತರ ಖುಲಾಸೆಗೊಂಡಿದ್ದಾರೆ. ಈ ಕುರಿತು ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ತೆಜೋವಧೆ ಆಗುವಂತಹ ಕೆಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಹೀಗೆ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಕ್ರಮ ಜರುಗಿಸಬೇಕು. ಮತ್ತು ಸಿಬಿಐ ನಂತರ ಯಾವುದಾದರೂ ಉನ್ನತ ತನಿಖಾ ಸಂಸ್ಥೆಯನ್ನು ರಚಿಸಿ ಇನ್ನೊಮ್ಮೆ ಪ್ರಕರಣವನ್ನು ತನಿಖೆ ನಡಿಸಬೇಕು ಎಂದು ದಲಿತ ಸಂಘಟನಾ ಮುಖಂಡ ಗುರುನಾಥ ಉಳ್ಳಿಕಾಶಿ ಒತ್ತಾಯಿಸಿದರು.












Click it and Unblock the Notifications