Siddharudha Swami: ಸಿದ್ಧಾರೂಢ ಸ್ವಾಮಿ ಹೆಸರು ಬಳಕೆಯಲ್ಲಿ ಹೊಸ ವಿವಾದ!
Siddharudha Swami: ಹುಬ್ಬಳ್ಳಿಯ ಐತಿಹಾಸಿಕ ಪ್ರಸಿದ್ಧ ಸಿದ್ಧಾರೂಢರ ಮಠ ಇದೀಗ ಅನವಶ್ಯಕ ಕಾರಣಕ್ಕೆ ವಿವಾದಕ್ಕೆ ಸಿಲುಕಿದೆ. ಸಿದ್ಧರೂಢ ಸ್ವಾಮೀಜಿಗಳು ಕರ್ನಾಟಕದ ಹಲವರಿಗೆ ಪ್ರೇರಣೆಯಾಗಿದ್ದಾರೆ. ಅಪಾರ ಪ್ರಮಾಣದ ಭಕ್ತಾದಿಗಳನ್ನು ಹೊಂದಿದ್ದಾರೆ. ಸಿದ್ಧಾರೂಢರ ಮಠದಲ್ಲಿ ಸದಾ ಓಂ ನಮಂ ಶಿವಾಯ ಎನ್ನುವ ನಾದ ಮೊಳಗುತ್ತಲ್ಲೇ ಇರುತ್ತದೆ. ನೆಮ್ಮದಿಯ ಹಾಗೂ ಮನಸ್ಸಿಗೆ ಮುದ ನೀಡುವ ಧಾರ್ಮಿಕ ಕ್ಷೇತ್ರ ಇದಾಗಿದೆ. ಸಿದ್ಧಾರೂಢರ ಗದ್ದುಗೆಯನ್ನು ನೋಡುವುದಕ್ಕೆ ನಿತ್ಯವೂ ಸಾವಿರಾರು ಕರ್ನಾಟಕದಿಂದ ಮಾತ್ರವಲ್ಲ. ಜನ ದೇಶ - ವಿದೇಶದಿಂದಲೂ ಬರುವುದು ಇದೆ. ಆದರೆ, ಇದೇ ಮೊದಲ ಬಾರಿ ಎನ್ನುವಂತೆ ಸಿದ್ಧಾರೂಢರ ಮಠದಲ್ಲಿ ಹೆಸರು ಬಳಕೆಯ ವಿವಾದ ಶುರುವಾಗಿದೆ.
ಸಿದ್ಧಾರೂಢ ಸ್ವಾಮಿಗಳು ಮಹಾನ್ ಪವಾಡ ಪುರುಷರು ಎಂದೇ ಪ್ರಸಿದ್ಧರು. ಸರಳ ಜೀವನ ಹಾಗೂ ಬೋಧನೆಯಿಂದ ಅಪಾರ ಭಕ್ತರು ಇದ್ದಾರೆ. ಈ ಮಠದಲ್ಲಿ ನಿತ್ಯವೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಸಿದ್ಧಾರೂಢರ ಜಾತ್ರೆಯಂತೂ ವರ್ಡ್ ಫೇಮಸ್. ಅನ್ನದಾಸೋಹಕ್ಕೂ ಈ ಮಠ ಪ್ರಸಿದ್ಧಿಗಳಿಸಿದೆ. ಇಷ್ಟೆಲ್ಲ ಪ್ರಸಿದ್ಧ ಹಾಗೂ ಭಕ್ತಾದಿಗಳ ಪವಿತ್ರ ಸ್ಥಳದಲ್ಲಿ ಇದೀಗ ಸಣ್ಣ ವಿವಾದವೊಂದು ಶುರುವಾಗಿದ್ದು. ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.

ಉತ್ತರ ಕರ್ನಾಟಕದ ಐತಿಹಾಸಿಕ ಪ್ರಸಿದ್ಧ ಹುಬ್ಬಳ್ಳಿ ಸಿದ್ಧಾರೂಢರ ಮಠದಲ್ಲಿ ಈಗ ಸದ್ಗುರು - ಜಗದ್ಗುರು ಪದ ಬಳಕೆಯ ವಿವಾದ ಕಿಡಿ ಎದ್ದಿದೆ. ಈ ಕುರಿತು ಬುಧವಾರ ನಡೆದ ಭಕ್ತರ ಮತ್ತು ಆಡಳಿತ ಮಂಡಳಿ ವಾರ್ಷಿಕ ಸಭೆಯಲ್ಲಿ ಗದ್ದಲ ಉಂಟಾಗಿದೆ. ಆಡಳಿತ ಮಂಡಳಿ ಮತ್ತು ಭಕ್ತರ ನಡುವೆ ವಾಗ್ವಾದ ನಡೆದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಶ್ರೀ ಸಿದ್ಧಾರೂಢರ ಹೆಸರಿನ ಮುಂದೆ ಇಷ್ಟು ದಿನ ಸದ್ಗುರು ಪದ ಬಳಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಶ್ರೀ ಸಿದ್ದಾರೂಢಸ್ವಾಮೀ ಮಠ ಟ್ರಸ್ಟ್ ಕಮಿಟಿ ಜಗದ್ಗುರು ಪದಬಳಿಕೆ ಮಾಡುತ್ತಿದೆ.ಇದು ಈಗ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಸಿದ್ಧಾರೂಢರ ಮಠ ನಾಡಿನ ಹೆಸರಾಂತ ಸರ್ವ ಧರ್ಮಗಳ ಸಮನ್ವಯದ ಮಠ, ಆದರೆ ಅವರಿಗೆ ಜಗದ್ಗುರು ಎಂಬುವ ಜಾತಿ ಸೂಚಿಕ ಮತ್ತು ಸಂಕುಚಿತ ಪದಬಳಕೆ ಸಲ್ಲದು ಎನ್ನುವುದು ಭಕ್ತಾದಿಗಳ ಅಭಿಪ್ರಾಯವಾಗಿದೆ.
ರಾಷ್ಟ್ರಮಟ್ಟದಲ್ಲಿ ಭಕ್ತವೃಂದವನ್ನು ಹೊಂದಿರುವಂತಹ ಜಾತಿ, ಧರ್ಮವನ್ನು ಮೀರಿ ಧಾರ್ಮಿಕ ಕಾರ್ಯ ನಡೆಯುತ್ತಿದೆ. ನೇರ ಉಭಯ ಶ್ರೀಗಳ ಗದ್ದುಗೆ ಸ್ಪರ್ಶ ದರ್ಶನ ನೀಡುವ ಏಕೈಕ ಮಠ ಎಂಬುವ ಖ್ಯಾತಿ ಪಡೆದಿರುವ ಮಠ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠ. ಜಾತಿ ಧರ್ಮ, ಮತ,ಪಂಥಕ್ಕೆ ಸೀಮಿತ ಆಗಿಲ್ಲ. ಅವರು ಬದುಕ್ಕಿದ್ದ ಕಾಲದಿಂದಲೂ ಶ್ರೀ ಸಿದ್ದಾರೂಢರನ್ನು ಸದ್ಗುರು ಎಂದು ಅನೇಕ ಲಿಖಿತ ದಾಖಲೆಗಳಲ್ಲಿವೆ. ಆದರೆ 2025 ನೇ ಸಾಲಿನ ಶಿವರಾತ್ರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಬ್ಯಾನರಗಳಲ್ಲಿ, ಬೋರ್ಡಗಳಲ್ಲಿ ಸದ್ಗುರು ನಾಮದ ಬದಲಾಗಿ ಜಗದ್ಗುರು ಎಂದು ಮುದ್ರಿಸಲಾಗಿದೆ. ಜಗದ್ಗುರು ನಾಮಪದವನ್ನು ಈ ಕೂಡಲೇ ತೆಗೆದು ಹಾಕುವಂತೆ ಇಲ್ಲಿನ ಭಕ್ತಾದಿಗಳು ಆಗ್ರಹಿಸಿದ್ದಾರೆ.












Click it and Unblock the Notifications