ನನಗೆ ಮೋದಿ ಕಂಡ್ರೆ ಭಯವಿಲ್ಲ, ಆದ್ರೆ ನನ್ನ ಕಂಡ್ರೆ ಮೋದಿಗೆ ಭಯ: ಸಿದ್ದರಾಮಯ್ಯ

ಹುಬ್ಬಳ್ಳಿ, ಜನವರಿ, 19: ಕಂದಾಯ ಗ್ರಾಮ, ಅರಣ್ಯ ಇಲಾಖೆಯ ಕಾನೂನು ತಿದ್ದುಪಡಿ ಮಾಡಿದ್ದು ನಾವು. ತಾಂಡ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರೂ ನಾವು. ಈಗ ಚುನಾವಣಾ ಇರುವ ಹಿನ್ನೆಲೆ ಪ್ರಧಾನಿ ಮೋದಿಯವರನ್ನು ಕರೆಸಿ ನಾವೇ ಮಾಡಿದವರು ಅಂತಾ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದರು. ಹಾಗೆಯೇ ನನ್ನ ಕಂಡರೆ ಮೋದಿಗೆ ಭಯ ಎಂದು ವ್ಯಂಗ್ಯವಾಡಿದರು.

BJPಯವರು ಊಟ ಮಾಡುತ್ತಾರೆ ಅಷ್ಟೇ

ನಗರದ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಡುಗೆ ಮಾಡಿದವರು ನಾವು, ಊಟ ಮಾಡುವವರು ಬಿಜೆಪಿಯವರು. ಸೇವಲಾಲ್‌ ಜಯಂತಿ, ಲಂಬಾಣಿ ಅಭಿವೃದ್ಧಿ ನಿಗಮ ಆ‌ರಂಭಿಸಿದ್ದು ನಾವು. ಸೇವಾಲಾಲ್‌ ಹುಟ್ಟಿದ ಸ್ಥಳವನ್ನು ಅಭಿವೃದ್ಧಿಪಡಿಸಿದವರು ನಾವು. ನೂರಾರು ಕೋಟಿ ಅನುದಾನ ನೀಡಿದ್ದೆವೆ. ಲಂಬಾಣಿ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಮೂರು ವರ್ಷದಲ್ಲಿ ಕೇವಲ ಮೂವತ್ತು ಕೋಟಿ ಕೊಟ್ಟಿದ್ದಾರೆ. ಹಕ್ಕು ಪತ್ರವನ್ನು ನಾವು ಸಿದ್ದಪಡಿಸಿದ್ದೆವೆ, ಅವರು ಈಗ ವಿತರಣೆ ಮಾಡುತ್ತಿದ್ದಾರೆ ಎಂದರು.

ಹಣವನ್ನ ಬೇರೆಡೆಗೆ ಡೈವರ್ಟ್ ಮಾಡಿದ್ದಾರೆ

ನಮ್ಮ ಸರ್ಕಾರದಲ್ಲಿ ಮೂವತ್ತು ಸಾವಿರ ಕೋಟಿ ಎಸ್ಸಿಇಪಿಟಿ ಹಣವಿತ್ತು. ಈಗ ಅದು 42 ಸಾವಿರ ಕೋಟಿ ರೂಪಾಯಿ ಆಗಬೇಕಿತ್ತು. ಆದರೆ 28 ಸಾವಿರ ಕೋಟಿ ರೂಪಾಯಿ ಆಗಿದೆ. ಇದರ ಅರ್ಥ ಬಿಜೆಪಿ ಎಸ್‌ಇಪಿಟಿ ಹಣವನ್ನು ಬೇರೆ ಕಡೆ ಡೈವರ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು.

Siddaramiah outrage against Narendra modi in Hubballi

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬಿಜೆಪಿ ಸುಳ್ಳು ಮ್ಯಾನಿಫ್ಯಾಕ್ಟ್ ಮಾಡುವ ಫ್ಯಾಕ್ಟರಿಯಾಗಿದೆ. ನರೇಂದ್ರ ಮೋದಿಯವರಿಂದ ಬರಿ ಸುಳ್ಳು ಹೇಳಿಸುತ್ತಿದ್ದಾರೆ. ನನಗೆ ಮೋದಿ ಕಂಡ್ರೆ ಭಯವಿಲ್ಲ, ಆದರೆ ನನ್ನ ಕಂಡರೆ ಮೋದಿಗೆ ಭಯ. ನಾನು ಆರ್‌ಎಸ್‌ಎಸ್ ಅನ್ನು ಟೀಕೆ ಮಾಡುತ್ತೀನಿ, ಸತ್ಯ ಹೇಳುತ್ತೇನೆ ಎನ್ನುವ ಭಯ ಅವರಿಗಿದೆ. ಪ್ರಧಾನಿ ಮೋದಿ ಭಾಷಣ ಮಾಡಿದ ತಕ್ಷಣ ಬಿಜೆಪಿ ಗೆಲ್ಲುವುದಿಲ್ಲ. ಸುಳ್ಳು ಹೇಳಿದರೆ ಜನ ನಂಬುವುದಿಲ್ಲ. ಮೋದಿ ಬಂದರೆ ಮೋಡಿ ಆಗುವುದಿಲ್ಲ. ಜನರೇ ಸೋಲು, ಗೆಲುವಿನ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+