ಯಡಿಯೂರಪ್ಪ, ಸಿದ್ದರಾಮಯ್ಯ ಭೇಟಿ, ಹೊಸ ರಾಜಕೀಯ ಆಟಕ್ಕೆ ಮುನ್ನುಡಿಯೇ?

ಹುಬ್ಬಳ್ಳಿ, ಫೆಬ್ರವರಿ 25: ನಿತ್ಯವೂ ಒಂದಲ್ಲಾ ಒಂದು ವಿಷಯದಲ್ಲಿ ಟ್ವಿಟ್ಟರ್ ಸೇರಿದಂತೆ ಸಂದರ್ಭ ಸಿಕ್ಕಾಗಲೆಲ್ಲಾ ಒಬ್ಬರನ್ನೊಬ್ಬರ ಕಾಲೆಳೆಯುತ್ತಿರುವ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು.
ಅವರಿಬ್ಬರನ್ನು ನೋಡಿ ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ, ಇವರ ಭೇಟಿಯಿಂದ ಹೊಸ ರಾಜಕೀಯ ಆಟ ಪ್ರಾರಂಭವಾಗಬಹುದೇ ಎಂಬ ಸಂದೇಹ ಬಂದಿದ್ದಂತೂ ಸತ್ಯ.
ಬೆಂಗಳೂರಿನಿಂದ ಒಂದೇ ವಿಮಾನದಲ್ಲಿ ಆಗಮಿಸಿದ ಉಭಯ ನಾಯಕರು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಉಭಯ ಕುಶಲೋಪರಿ ವಿನಿಮಯ ಮಾಡಿಕೊಂಡರು. ಬೇರೆ ಬೇರೆ ಕಾರ್ಯಕ್ರಮಗಳಿಗೆ ತೆರಳಬೇಕಿದ್ದ ಕಾರಣ ಉಭಯ ನಾಯಕರು ತಕ್ಷಣ ಸ್ಥಳದಿಂದ ತೆರಳಿದರು.
ದಲಿತನಾಗಿರುವುದಕ್ಕೆ ಸಿಎಂ ಆಗಲಿಲ್ಲ, ಪರಂ ಹೇಳಿಕೆಗೆ ಸಿದ್ದು ಏನಂದ್ರು?
ಇದಕ್ಕೂ ಮುನ್ನ ದಲಿತರಿಗೆ ಅನ್ಯಾಯ ಆಗಿದೆ ಎಂಬುದನ್ನು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರೇ ಒಪ್ಪಿಕೊಂಡಿದ್ದಾರೆ.
ಕಾಂಗ್ರೆಸ್ನಲ್ಲಿ ಪ್ರತಿ ಬಾರಿ ದಲಿತರಿಗೆ ಅನ್ಯಾಯ ಆಗುತ್ತಲೇ ಇದೆ. ಕಾಂಗ್ರೆಸ್ನ ಹಳೆಯ ವಿಚಾರವನ್ನು ಪರಮೇಶ್ವರ್ ಅವರು ಈಗ ಹೇಳಿದ್ದಾರೆ ಎಂದು ಬಿಎಸ್ವೈ ತಿಳಿಸಿದರು.
ಅಚ್ಛೇ ದಿನ್ ಎಲ್ಲಿ?, ಮೋದಿಗೆ ಸಿದ್ದರಾಮಯ್ಯ ಟ್ವೀಟ್ ಬಾಣ!
ಈ ಸಂದರ್ಭದಲ್ಲಿ ತಮ್ಮ ಉಭಯ ನಾಯಕರ ಭೇಟಿ ಮತ್ತು ಅವರ ನಡುವೆ ನಡೆದ ಮಾತುಕತೆ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಸಿದ್ದರಾಮಯ್ಯ ಅವರನ್ನು ಕೇಳಿ ಎಂದು ಬಿಎಸ್ ಯಡಿಯೂರಪ್ಪ ಅಲ್ಲಿಂದ ತೆರಳಿದರು.